ಕುಡಿದ ಮತ್ತಿನಲ್ಲಿ ಕ್ಯಾಮರಾ ಮುಂದೆಯೇ ತನ್ನನ್ನು ತಾನೇ ಇರಿದುಕೊಂಡ ಯುವಕ-ಸಾವು

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಕಂಠಪೂರ್ತಿ ಕುಡಿದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಹೋಳಿ ನೃತ್ಯ ಮಾಡುತ್ತ ತನಗೆ ತಾನೇ ಚಾಕು ಇರಿದುಕೊಂಡಿದ್ದು, ಗಾಯಗೊಂಡ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಘಟನೆಯ ವೀಡಿಯೋದಲ್ಲಿ ಕಂಠಪೂರ್ತಿ ಕುಡಿದಿರುವ ಗೋಪಾಲ (38) ಎಂಬಾತ ತನ್ನ ಸ್ನೇಹಿತರೊಂದಿಗೆ ಹೋಳಿ ಪೈರಿನ ಸುತ್ತಲೂ ನೃತ್ಯ ಮಾಡುವುದನ್ನು ತೋರಿಸುತ್ತದೆ. ನೃತ್ಯ ಮಾಡುತ್ತ ಆತ ಚಾಕುವಿನಿಂದ ನಾಲ್ಕು ಬಾರಿ ಇರಿದುಕೊಳ್ಳುವುದನ್ನು ಕಾಣಬಹುದು.

ಮದ್ಯದ ನಶೆಯಲ್ಲಿ ಇದ್ದುದರಿಂದ ಸಿಗದೆ ಚಾಕು ಅವನ ಎದೆಗೆ ಹೊಕ್ಕಿದ್ದು ಗೊತ್ತಾಗಲೇ ಇಲ್ಲ.
ತನ್ನ ಕುಟುಂಬಸ್ಥರೊಂದಿಗೆ ಎಂಜಾಯ್‌ ಮಾಡುತ್ತಿದ್ದು, ಜೇಬಿನಲ್ಲಿದ್ದ ಚಾಕು ತೆಗೆದು ಮೂರ್ನಾಲ್ಕು ಬಾರಿ ಇರಿದುಕೊಂಡಂತೆ ಆಕ್ಷನ್‌ ಮಾಡಿದ್ದು, ಚಾಕು ಆಳವಾಗಿ ಎದೆಗೆ ಚುಚ್ಚಿಕೊಂಡು ರಕ್ತ ಸುರಿಯಲಾರಂಭಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಆತನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅವರನ್ನು ಶ್ರೀ ಅರಬಿಂದೋ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿರಿ :-   ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೆ ತನ್ನಿ: ಪ್ರಧಾನಿ ಮೋದಿಗೆ ರಾಜ್ ಠಾಕ್ರೆ ಒತ್ತಾಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ