ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗುವ ಮೊದಲು ಅಲ್ಲಿದ್ದ ಸರ್ಕಾರ ಪತನಗೊಂಡು ಅಫ್ಘಾನ್ ಅಧ್ಯಕ್ಷ ಸೇರಿ ಪ್ರಮುಖ ನಾಯಕರು, ಸರ್ಕಾರಿ ಹುದ್ದೆಗಳಲ್ಲಿದ್ದವರು, ಕೇಂದ್ರದ ಸಚಿವರು ಸೇರಿ ಬಹುತೇಕ ಎಲ್ಲರೂ ಅಫ್ಘಾನ್ ಬಿಟ್ಟು ಬೇರೆಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೂ ಮೊದಲಿದ್ದ ಅಶ್ರಫ್ ಘನಿ ಸರ್ಕಾರದಲ್ಲಿ ಆರ್ಥಿಕ ಖಾತೆ ಸಚಿವರಾಗಿದ್ದ ಖಲೀದ್ ಪಾಯೆಂಡಾ ಈಗ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ ಓಡಿಸುತ್ತಿದ್ದಾರೆ. ಅಫ್ಘಾನ್ನಲ್ಲಿ ತಾಲಿಬಾನ್ ಉಗ್ರರ ಆಡಳಿತ ಬರುತ್ತಿದ್ದಂತೆ ರಾಜೀನಾಮೆ ನೀಡಿದ ಅವರು ಕುಟುಂಬದೊಂದಿಗೆ ವಾಷಿಂಗ್ಟನ್ ಡಿಸಿಗೆ ತೆರಳಿದ್ದರು. ಈಗ ಜೀವನೋಪಾಯಕ್ಕಾಗಿ ಉಬರ್ ವಾಹನ ಓಡಿಸುತ್ತಿದ್ದಾರೆ. ಅಲ್ಲದೆ ಜಾರ್ಜ್ಟೌನ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ
ಖಲೀದ್ ಪಾಯೆಂಡಾ ಅಫ್ಘಾನ್ನಿಂದ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಅಮೆರಿಕಕ್ಕೆ ಪರಾರಿಯಾಗಿದ್ದರು. ಅವರು ಅಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರೂ ಕೂಡ ಅದು ಖಾಯಂ ಕೆಲಸವಲ್ಲ. ಆ ಕೆಲಸಕ್ಕೆ ನೀಡುವ ಸಂಬಳವೂ ಸಾಕಾಗುವುದಿಲ್ಲ. ಹೀಗಾಗಿ ಉಬರ್ ಚಾಲನೆ ಕೆಲಸವನ್ನೂ ಶುರು ಮಾಡಿದರು. ಈ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ಈ ಕೆಲಸ ಸಿಕ್ಕಿ, ಜೀವನೋಪಾಯಕ್ಕೆ ಅನುಕೂಲವಾಗಿದೆ. ನಾನು ಹತಾಶನಾಗಬೇಕಿಲ್ಲ ಎಂದು ಹೇಳಿದ್ದಾರೆಎಂದು ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.
ಹಾಗಿದ್ದಾಗ್ಯೂ ಸಣ್ಣ ಬೇಸರವಿದೆ. ಈಗ ನಾನು ಅಮೆರಿಕದವನಲ್ಲ. ಅಫ್ಘಾನಿಸ್ತಾನಕ್ಕೆ ಸೇರಿದವನೂ ಅಲ್ಲ. ಹೀಗಾಗಿ ಖಾಲಿತನ ಭಾವ ಕಾಡುತ್ತದೆ. ಇದಕ್ಕೆ ಯಾರನ್ನು ದೂಷಿಸುವುದು..? ಅಮೆರಿಕದ ಬಗ್ಗೆಯೂ ನನಗೆ ಅಸಮಾಧಾನವಿದೆ ಎಂದು ಹೇಳಿರುವ ಅವರು ಅಫ್ಘಾನಿಸ್ತಾನವನ್ನು ಅಮೆರಿಕ ಕೈಬಿಟ್ಟಿದ್ದರಿಂದ ಅದನ್ನು ತಾಲಿಬಾನಿಗಳು ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ