ಭಾರತ-ರಷ್ಯಾ ಸಂಬಂಧಗಳು ವರ್ಷಗಳಿಂದ ಪರಸ್ಪರ ಗಟ್ಟಿಯಾಗಿ ವಿಕಸನಗೊಂಡಿದ್ದು ಹೇಗೆ..? ಒಂದು ಅವಲೋಕನ..

ನವದೆಹಲಿ: ಉಕ್ರೇನ್‌ನಲ್ಲಿನ ಯುದ್ಧವು ಪಶ್ಚಿಮ ಮತ್ತು ರಷ್ಯಾದ ನಡುವಿನ ಸಂಬಂಧಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಭಾರತವನ್ನು ರಾಜತಾಂತ್ರಿಕ  ಹಗ್ಗದ ಮೇಲೆ ನಡೆಯುವಂತೆ ಮಾಡಿದೆ. ಮತ್ತು ರಷ್ಯಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದೊಂದಿಗಿನ ಭಾರತದ ಸಂಬಂಧಗಳು ನಡೆದು ಬಂದ ದಾರಿಯನ್ನು ಗಮನಿಸಿದರೆ, ನವದೆಹಲಿಗೆ ಯಾವುದೇ ಸುಲಭವಾದ ಬೇರೆ ಆಯ್ಕೆಗಳಿಲ್ಲ ಎಂಬುದು ಗೋಚರವಾಗುತ್ತದೆ.
ಅಗತ್ಯವಿದ್ದಾಗ ಎರಡೂ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಪರಸ್ಪರ ಬೆಂಬಲ ನೀಡಿವೆ ಮತ್ತು ದೃಢವಾದ ರಕ್ಷಣಾ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಅಗತ್ಯವಿದ್ದಾಗ ಎರಡು ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಪರಸ್ಪರ ಬೆಂಬಲ ನೀಡಿವೆ ಮತ್ತು ದೃಢವಾದ ರಕ್ಷಣಾ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಎರಡು ದೇಶಗಳ ನಡುವಿನ ಸಂಬಂಧಗಳ ಮೂಲವನ್ನು ನೋಡಬೇಕಿದೆ ಮತ್ತು ವರ್ಷಗಳಲ್ಲಿ ಅವು ಹೇಗೆ ವಿಕಸನಗೊಂಡಿವೆ ಎಂಬುದು ಈಗ ಮಹತ್ವ ಪಡೆದುಕೊಳ್ಳುತ್ತದೆ. ಈ ಕುರಿತು ಇಂಡಿಯಾ ಟುಡೆ.ಕಾಮ್‌ ವರದಿ ಪ್ರಕಟಿಸಿದ್ದು ಅದರ ಭಾವಾನುವಾದ ಇಲ್ಲಿ ಕೊಡಲಾಗಿದೆ.

ಭಾರತ-ರಷ್ಯಾ ಸಂಬಂಧಗಳು ಬೆಳೆದು ಬಂದ ದಾರಿ..
ಭಾರತ ಮತ್ತು ಸೋವಿಯತ್ ಒಕ್ಕೂಟ ಮತ್ತು ಅದರ ಪತನದ ನಂತರ ರಷ್ಯಾದ ನಡುವಿನ ಸಂಬಂಧದಲ್ಲಿನ ಕೆಲವು ಪ್ರಮುಖ ಕ್ಷಣಗಳನ್ನು ಮೆಲುಕು ಹಾಕಬೇಕಾಗಿದೆ. ಬದಲಾಗುತ್ತಿರುವ ಜಾಗತಿಕ ಕ್ರಮದ ಮಧ್ಯೆ ಭಾರತ-ರಷ್ಯಾ ದೇಶಗಳು ಪರಸ್ಪರ ಮೈತ್ರಿ ಮತ್ತು ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ.
ಸ್ವತಂತ್ರ ಭಾರತದ ಪ್ರಧಾನಿಯಾದ ನಂತರ, ನೆಹರು ಸೋವಿಯತ್ ಒಕ್ಕೂಟಕ್ಕೆ 16 ದಿನಗಳ (ಜೂನ್ 7-23) ಭೇಟಿಗೆ ತೆರಳಿದರು. ಭಾರತವೂ ಸೇರಿದಂತೆ ತೃತೀಯ ಜಗತ್ತಿನ ರಾಷ್ಟ್ರಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಸ್ಟಾಲಿನ್ ಅವರು 1953 ರಲ್ಲಿ ನಿಧನರಾದ ಎರಡು ವರ್ಷಗಳ ನಂತರ ಇದು. ಅದೇ ವರ್ಷ, ಸೋವಿಯತ್ ಪ್ರಧಾನಿ ನಿಕಿತಾ ಕ್ರುಶ್ಚೇವ್ ಅವರು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತಕ್ಕೆ ಭೇಟಿ ನೀಡಿದರು.

1959..
ಕ್ರುಶ್ಚೇವ್ ನವದೆಹಲಿಯ ಪರವಾಗಿ ನಿಂತಿದ್ದಾರೆ ಮತ್ತು 1959 ರಲ್ಲಿ ಭಾರತದೊಂದಿಗೆ ಗಡಿ ಘರ್ಷಣೆ ಮತ್ತು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಪಲಾಯನಕ್ಕೆ ಚೀನಾದ ಮಾವೋ ಝೆಡಾಂಗ್ ಅವರನ್ನು ದೂಷಿಸುತ್ತಾರೆ. ವಿಲ್ಸನ್ ಸೆಂಟರ್‌ನ ಅಂತಾರಾಷ್ಟ್ರೀಯ ಇತಿಹಾಸ ಯೋಜನೆ ಬಿಡುಗಡೆ ಮಾಡಿದ ಪ್ರತಿಲೇಖನದ ಪ್ರಕಾರ, “ನೀವು ಅನೇಕ ವರ್ಷಗಳಿಂದ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೀರಿ. ಇದ್ದಕ್ಕಿದ್ದಂತೆ ಇಲ್ಲಿ ರಕ್ತಸಿಕ್ತ ಘಟನೆಯಾಗಿದೆ, ಇದರ ಪರಿಣಾಮವಾಗಿ ನೆಹರೂ ಅವರು ತುಂಬಾ ಕಷ್ಟಕರ ಸ್ಥಿತಿಯಲ್ಲಿದ್ದಾರೆ,” ಎಂದು ಕ್ರುಶ್ಚೇವ್ ಮಾವೋಗೆ ಹೇಳಿದರು.

1961
1947 ರಲ್ಲಿ ಬ್ರಿಟಿಷರು ಭಾರತವನ್ನು ತೊರೆದರೂ, ಪೋರ್ಚುಗೀಸರು ಗೋವಾ, ದಮನ್ ಮತ್ತು ದಿಯುಗಳ ಆಕ್ರಮಣವನ್ನು ಮುಂದುವರೆಸಿದರು. ಆದರೆ ಡಿಸೆಂಬರ್ 1961 ರಲ್ಲಿ, ಭಾರತವು ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿತು ಮತ್ತು ಪೋರ್ಚುಗೀಸರನ್ನು ಹೊರಹಾಕಿತು. ಆಗ ಅಮೆರಿಕ, ಬ್ರಿಟನ್‌, ಫ್ರಾನ್ಸ್ ಮತ್ತು ಟರ್ಕಿಯು ವಿಶ್ವಸಂಸ್ಥೆಯಲ್ಲಿ ಆಕ್ರಮಣವನ್ನು ಖಂಡಿಸುವ ನಿರ್ಣಯವನ್ನು ಮಂಡಿಸಿತು ಮತ್ತು ಭಾರತವು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. ಆಗ ರಷ್ಯಾವು ಆ ನಿರ್ಣಯವನ್ನು ಭಾರತದ ಪರವಾಗಿ ವೀಟೋ ಮಾಡಿತು.

1962
ಭಾರತವು ರಷ್ಯಾದ ಸೂಪರ್‌ಸಾನಿಕ್ ಜೆಟ್ ಫೈಟರ್, ಮಿಗ್ -21 ಅನ್ನು ಪಡೆದುಕೊಂಡಿತು. ಒಂದೆರಡು ವರ್ಷಗಳ ನಂತರ ಭಾರತದ HAL ಮತ್ತು ಸೋವಿಯತ್ ಒಕ್ಕೂಟದ Mikoyan Gurevich ಕಾರ್ಪೊರೇಷನ್ ಒಪ್ಪಂದಕ್ಕೆ ಸಹಿ ಹಾಕಿದವು, ಇದು HAL ಟೈಪ್ 77 MiG-21 ಗಳ ಪರವಾನಗಿ ಉತ್ಪಾದನೆಯನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿತು. ಇದು ಉಭಯ ದೇಶಗಳ ನಡುವೆ ನಿರಂತರವಾಗಿ ವಿಸ್ತರಿಸುತ್ತಿರುವ ರಕ್ಷಣಾ ಸಹಕಾರಕ್ಕೆ ಪೂರ್ವಭಾವಿಯಾಗಿತ್ತು. ಪ್ರಸ್ತುತ, ರಷ್ಯಾದ ಮೂಲದ ಶಸ್ತ್ರಾಸ್ತ್ರಗಳು ಭಾರತೀಯ ಸಶಸ್ತ್ರ ಪಡೆಗಳ 60-85% ಯಂತ್ರಾಂಶವನ್ನು ಹೊಂದಿವೆ ಎಂದು ನಂಬಲಾಗಿದೆ.

1965
ಸೋವಿಯತ್ ಒಕ್ಕೂಟವು ಗಡಿ ಯುದ್ಧದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯನ್ನು ಬಯಸಿತ್ತು. ಸೋವಿಯತ್ ಮಂತ್ರಿಗಳ ಮಂಡಳಿಯ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್ ಅವರು ತಾಷ್ಕೆಂಟ್‌ನಲ್ಲಿ (ಈಗ ಉಜ್ಬೇಕಿಸ್ತಾನ್‌ನಲ್ಲಿದೆ) ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನಿ ಅಧ್ಯಕ್ಷ ಅಯೂಬ್ ಖಾನ್ ನಡುವೆ ಶಾಂತಿ ಮಾತುಕತೆ ನಡೆಸಿದರು. ಅವರು 10 ಜನವರಿ 1966 ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು. ಶಾಸ್ತ್ರಿ ಒಂದು ದಿನದ ನಂತರ ನಿಧನರಾದರು. ಮತ್ತು ಅವನ ಸಾವು ನಂತರದಲ್ಲಿ ಒಂದು ರಹಸ್ಯವಾಗಿಯೇ ಉಳಿಯಿತು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

1967
ಸ್ಟಾಲಿನ್ ಅವರ ಮಗಳು ಸ್ವೆಟ್ಲಾನಾ ಆಲಿಲುಯೆವಾ ಅವರು ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ತಪ್ಪಿಸಿಕೊಂಡು ಅಲ್ಲಿಂದ ವೀಸಾ ಪಡೆದು ರೋಮ್, ನಂತರ ಜಿನೀವಾ ಮತ್ತು ನಂತರ ಅಮೆರಿಕ್ಕೆ ಹಾರಿದರು. ಭಾರತ-ಸೋವಿಯತ್ ಒಕ್ಕೂಟದ ಬಾಂಧವ್ಯದಲ್ಲಿ ಇದೊಂದು ಅಪರೂಪದ ಬಿಕ್ಕಟ್ಟು. ಸ್ವೆಟ್ಲಾನಾ ಅವರು 1966 ರಲ್ಲಿ ಮಾಸ್ಕೋದಲ್ಲಿ ನಿಧನರಾದ ಭಾರತೀಯ ಕಮ್ಯುನಿಸ್ಟ್ ಬ್ರಜೇಶ್ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಅವರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಸುರಿಯಲು ಅವರ ಕುಟುಂಬಕ್ಕೆ ನೀಡಲು ತೆಗೆದುಕೊಂಡು ಹೋಗುವ ನೆಪದಲ್ಲಿ ಅವರು ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಸೋವಿಯತ್ ಈ ವಿಷಯದ ಬಗ್ಗೆ ಇಂದಿರಾ ಗಾಂಧಿ ಸರ್ಕಾರದ ಮೇಲೆ “ತುಂಬಾ ಕಠಿಣವಾಗಿ ನಡೆದುಕೊಂಡಿತು” ಎಂದು ಭಾರತದ ಮಾಜಿ ಅಮೆರಿಕ ರಾಯಭಾರಿ ರಿಚರ್ಡ್ ಸೆಲೆಸ್ಟ್ ತಮ್ಮ ಆತ್ಮಚರಿತ್ರೆಯಲ್ಲಿ ರಾಜತಾಂತ್ರಿಕ ಸಮಸ್ಯೆಯಾಗಿ ಮಾರ್ಪಟ್ಟ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

1971 (ಆಗಸ್ಟ್)
ಪಾಕಿಸ್ತಾನವು ಅಮೆರಿಕ ಮತ್ತು ಚೀನಾದೊಂದಿಗೆ ಹತ್ತಿರವಾಗುತ್ತಿದ್ದಂತೆ, ಭಾರತವು ಆಗಸ್ಟ್ 1971 ರಲ್ಲಿ ಸೋವಿಯತ್ ಒಕ್ಕೂಟದೊಂದಿಗೆ ‘ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದ’ಕ್ಕೆ ಸಹಿ ಹಾಕಿತು. ಇದು ಶೀತಲ ಸಮರದ ಸಮಯದಲ್ಲಿ ಅಲಿಪ್ತ ನೀತಿಯಿಂದ ಭಾರತದ ವಿಚಲನದ ಅಪರೂಪದ ನಿದರ್ಶನವಾಗಿದೆ. ಬಾಂಗ್ಲಾದೇಶದ ವಿಮೋಚನೆಯ ಹಿನ್ನೆಲೆಯಲ್ಲಿ ಭಾರತವು ಅಮೆರಿಕ ಮತ್ತು ಬ್ರಿಟನ್‌ ನೌಕಾ ಪಡೆಗಳಿಂದ ಬೆದರಿಕೆಯನ್ನು ಎದುರಿಸುತ್ತಿರುವಾಗ ಅದೇ ವರ್ಷ ರಷ್ಯಾದ ಜೊತೆಗಿನ ಒಪ್ಪಂದವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

1971 (ಡಿಸೆಂಬರ್)
13 ಡಿಸೆಂಬರ್ 1971 ರಂದು, ಸೋವಿಯತ್ ಒಕ್ಕೂಟವು, ಒಪ್ಪಂದದ ಕೆಲವೇ ತಿಂಗಳುಗಳ ನಂತರ, ಬಾಂಗ್ಲಾದೇಶದ ವಿಮೋಚನೆಯ ಮಧ್ಯೆ ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಿಂದ ಭಾರತವನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಅಮೆರಿಕ ಮತ್ತು ಬ್ರಿಟನ್‌ ನೌಕಾಪಡೆಗಳನ್ನು ತಡೆಯಲು ಹಡಗು ವಿರೋಧಿ ಕ್ಷಿಪಣಿಗಳೊಂದಿಗೆ ಪರಮಾಣು ಸಶಸ್ತ್ರ ಹಡಗು ಫ್ಲೋಟಿಲ್ಲಾವನ್ನು ರವಾನಿಸಿತು. ಅದಕ್ಕೂ ಒಂದು ವಾರದ ಹಿಂದೆ, ಡಿಸೆಂಬರ್ 5 ರಂದು, ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಕದನ ವಿರಾಮಕ್ಕಾಗಿ ಅಮೆರಿಕ ಪ್ರಾಯೋಜಿತ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಪುನಃ ವೀಟೋ ಮಾಡಿತು. ಡಿಸೆಂಬರ್ 14, 1971 ರಂದು ಕ್ರೆಮ್ಲಿನ್ ಮತ್ತೆ ಅದೇ ರೀತಿ ಮಾಡಿತು. ಇದು ಪಾಕಿಸ್ತಾನದ ಸೈನ್ಯವನ್ನು ಶರಣಾಗುವಂತೆ ಮಾಡಲು ಭಾರತಕ್ಕೆ ಸಮಯವನ್ನು ಕೊಟ್ಟಿತು ಮತ್ತು ಭಾರತ ಅವರು 16 ಡಿಸೆಂಬರ್ 1971 ರಂದು ಪಾಕಿಸ್ತಾನದ ಸೈನ್ಯವನ್ನು ಶರಣಾಗುವಂತೆ ಮಾಡಿತು.

1957, 1962, 1971
ಈ ವರ್ಷಗಳಲ್ಲಿ, ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪವನ್ನು ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ರಷ್ಯಾ ಪುನಃ ಭಾರತದ ಪರವಾಗಿ ವೀಟೋ ಮಾಡಿತು. ಒಂದು ನಿರ್ಣಯವು ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ಸೈನಿಕರ ನಿಯೋಜನೆಯನ್ನು ಸೂಚಿಸಿತ್ತು. ರಷ್ಯಾದ ವೀಟೋ ಕಾಶ್ಮೀರವು ನವದೆಹಲಿಯಲ್ಲಿ ದೇಶೀಯ ಸಮಸ್ಯೆಯಾಗಿ ಉಳಿಯಿತು ಮತ್ತು ಪಶ್ಚಿಮದ ಹಸ್ತಕ್ಷೇಪವನ್ನು ತಡೆಯಿತು. ಇದು ಭಾಋತ ಮತ್ತು ರಷ್ಯಾದ ಬಾಂಧವ್ಯದ ಮತ್ತೊಂದು ಕುರುಹಾಗಿದೆ.

1984
3 ಏಪ್ರಿಲ್ 1984 ರಂದು, ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯರಾದರು. ಸೋವಿಯತ್ ಇಂಟರ್ಕೊಸ್ಮಾಸ್ ಕಾರ್ಯಕ್ರಮದ ಭಾಗವಾಗಿ ಅವರು ಸೋವಿಯತ್‌ ಒಕ್ಕೂಟದ ಸೋಯುಜ್ T-11 ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದರು. ಇದು ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ಮಹತ್ವದ ಮೈಲಿಗಲ್ಲಾಯಿತು. ಮೂರು ಸದಸ್ಯರ ಭಾರತ-ಸೋವಿಯತ್ ಸಿಬ್ಬಂದಿಯು ರಷ್ಯಾದ ಅಧಿಕಾರಿಗಳು ಮತ್ತು ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಜಂಟಿ ದೂರದರ್ಶನ ಸುದ್ದಿಗೋಷ್ಠಿ ನಡೆಸಿದರು. ಭಾರತವು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂದು ಶರ್ಮಾರನ್ನು ಗಾಂಧಿ ಕೇಳಿದಾಗ, ಶರ್ಮಾ ಅವರು ‘ಸಾರೆ ಜಹಾನ್ ಸೆ ಅಚ್ಛಾ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

1998
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಫೆಡರಲ್ ಸ್ಟೇಟ್ ಯೂನಿಟರಿ ಎಂಟರ್‌ಪ್ರೈಸ್ NPO ಮಾಶಿನೋಸ್ಟ್ರೋಯೆನಿಯಾ (NPOM) ಜೊತೆ 12 ಫೆಬ್ರವರಿ 1998 ರಂದು ಸಹಿ ಮಾಡಿದ ಅಂತರ-ಸರ್ಕಾರಿ ಒಪ್ಪಂದದ ಮೂಲಕ ಬ್ರಹ್ಮೋಸ್ ಅನ್ನು ಅಭಿವೃದ್ಧಿಪಡಿಸಲು ರಷ್ಯಾದ ಜೊತೆ ಜಂಟಿ ಉದ್ಯಮಕ್ಕೆ (JV) ಪ್ರವೇಶಿಸಿತು. ಬ್ರಹ್ಮೋಸ್ ಹೆಸರಿನಲ್ಲಿ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕ್ವಾ ನದಿಗಳ ಉಲ್ಲೇಖವಿದೆ. ಜಂಟಿ ಹೂಡಿಕೆಯಲ್ಲಿ ಭಾರತವು 50.5% ಪಾಲನ್ನು ಹೊಂದಿದ್ದರೆ, ರಷ್ಯಾ 49.5% ಪಾಲನ್ನು ಹೊಂದಿದೆ. ಜಂಟಿ ಉದ್ಯಮವು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಮಾರಾಟದ ಜವಾಬ್ದಾರಿಯನ್ನು ಹೊಂದಿದೆ. ಅದು ಈಗ ಪೂರ್ಣ ಪ್ರಮಾಣದಲ್ಲಿ ಬ್ರಹ್ಮೋಸ್‌ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಉತ್ಪಾದನೆ ಹಾಗೂ ಭಾರತ ಇದನ್ನು ಬೇರೆ ದೇಶಗಳಿಗೆ ರಫ್ತು ಮಾಡುವಲ್ಲಿ ವರೆಗೆ ಬಂದಿದೆ. ಯಾಕೆಂದರೆ ರಷ್ಟಯಾ ಇತ್ತೀಚಿಗೆ ಅದನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿದೆ.

2000
ಸೋವಿಯತ್ ಒಕ್ಕೂಟದ ಪತನದ ನಂತರ ಸಂಬಂಧಗಳ ಪುನರ್ನಿರ್ಮಾಣದ ಮೊದಲ ನಿರ್ದಿಷ್ಟ ಹೆಜ್ಜೆಯಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಮತ್ತು ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಕ್ಟೋಬರ್, 2000 ರಲ್ಲಿ ‘ಕಾರ್ಯತಂತ್ರದ ಸಹಭಾಗಿತ್ವದ ಘೋಷಣೆ’ಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ವ್ಯೂಹಾತ್ಮಕ ಸಹಕಾರ ಹೊಂದಿತ್ತು. ಸಮಸ್ಯೆಗಳು, ಪರಸ್ಪರರ ವಿರುದ್ಧ ಇತರರ ಜೊತೆ ಯಾವುದೇ ಮಿಲಿಟರಿ-ರಾಜಕೀಯ ಅಥವಾ ಇತರ ಮೈತ್ರಿಗಳಲ್ಲಿ ಭಾಗವಹಿಸದಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಎರಡು ದೇಶಗಳ ನಡುವಿನ ವ್ಯಾಪಾರವನ್ನು ವಿಸ್ತರಿಸುವುದು ಇದರಲ್ಲಿ ಸೇರಿದೆ. 2010 ರಲ್ಲಿ, ಕಾರ್ಯತಂತ್ರದ ಪಾಲುದಾರಿಕೆಯನ್ನು ‘ವಿಶೇಷ ಮತ್ತು ಕಾರ್ಯತಂತ್ರದ ಪಾಲುದಾರಿಕೆ’ಗೆ ಮತ್ತಷ್ಟು ಏರಿಸಲಾಯಿತು.
2018
ಅಕ್ಟೋಬರ್ 2018 ರಲ್ಲಿ, ಅಮೆರಿಕದ ನಿರ್ಬಂಧಗಳ ಬೆದರಿಕೆಯ ಹೊರತಾಗಿಯೂ ರಷ್ಯಾದಿಂದ 5.43 ಶತಕೋಟಿ ಡಾಲರ್‌ ಮೌಲ್ಯದ ಐದು S-400 ಟ್ರಯಂಫ್ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ರಷ್ಯಾದ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು. ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷಗಳ ನಂತರ 2021 ರಲ್ಲಿ ರಷ್ಯಾ S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸಲು ಪ್ರಾರಂಭಿಸಿತು.

2022
ರಷ್ಯಾ ಹಾಗೂ ಉಕ್ರೇನ್‌ ಯುದ್ಧದಲ್ಲಿ ಅಮೆರಿಕ ಪ್ರಾಯೋಜಿತ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯದ ಮೇಲೆ ಭಾರತವು ರಷ್ಯಾ ವಿರುದ್ಧ ಮತದಾನದಿಂದ ದೂರ ಉಳಿಯಿತು. ಈ ನಿರ್ಣಯವು ಉಕ್ರೇನ್ ವಿರುದ್ಧ ರಷ್ಯಾದ “ಆಕ್ರಮಣಶೀಲತೆಯನ್ನು” “ಬಲವಾದ ಪದಗಳಲ್ಲಿ ಖಂಡಿಸುತ್ತದೆ”. ಉಕ್ರೇನ್ ವಿರುದ್ಧ ಬಲಪ್ರಯೋಗವನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಿಂದ ಭಾರತವೂ ದೂರ ಉಳಿಯಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement