6ನೇ ತರಗತಿ ಬಳಿಕ ಹುಡುಗಿಯರಿಗೆ ಶಿಕ್ಷಣ ಇಲ್ಲ ಎಂದು ತಾಲಿಬಾನ್ ಘೋಷಣೆ..!

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಬುಧವಾರ ಬಾಲಕಿಯರ ಮಾಧ್ಯಮಿಕ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ.
ಅಫ್ಘಾನಿಸ್ಥಾನದ ಹೊಸ ಆಡಳಿತಗಾರರ ಕಟ್ಟುನಿಟ್ಟಿನ ನಾಯಕತ್ವವು 6 ನೇ ತರಗತಿಗಿಂತ ಹೆಚ್ಚಿನ ಹುಡುಗಿಯರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರಲು ನಿರ್ಧರಿಸಿದೆ ಎಂದು ಬುಧವಾರ ತಾಲಿಬಾನ್ ಹೇಳಿದೆ.
ದೇಶದಲ್ಲಿ ಎರಡನೇ ಬಾರಿಗೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಳೆದ ಆಗಸ್ಟ್‌ ನಂತರ ಮೊದಲ ಬಾರಿಗೆ ಶಾಲೆಗಳು ಪುನಃ ತೆರೆದಿತ್ತು. ಆದರೆ ಆರಂಭವಾದ ಕೆಲವೇ ಗಂಟೆಗಳ ನಂತರ ಅದನ್ನು ಮುಚ್ಚಲಾಗಿದೆ. ಇದು ನಿಜ ಎಂದು ತಾಲಿಬಾನ್ ವಕ್ತಾರ ಇನಾಮುಲ್ಲಾ ಸಮಾಂಗನಿ ಆದೇಶದ ನಂತರ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.

ಅಫ್ಘಾನಿಸ್ಥಾನದ ಹೊಸ ಶಾಲಾ ವರ್ಷದ ಮೊದಲ ದಿನದಂದು ತಾಲಿಬಾನ್ ನ ಶಿಕ್ಷಣ ಸಚಿವಾಲಯದ ಸಭೆಯ ಬಳಿಕ ತಾಲಿಬಾನ್ ಅಧಿಕಾರಿಯೊಬ್ಬರು ಈ ವಿಚಾರ ಹೇಳಿದ್ದಾರೆ. ಆಫ್ಘಾನ್ ನ ಹೆಚ್ಚಿನ ಹೆಣ್ಣುಮಕ್ಕಳು ಶಾಲೆಗಳಿಗೆ ಮರಳಲು ಸಿದ್ಧತೆ ನಡೆಸಿದ್ದ ವೇಳೆ ಈ ಆಘಾತಕಾರಿ ನಿರ್ಧಾರ ಪ್ರಕಟಿಸಿದೆ.

ದೇಶದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್(Taliban) ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ‘ರಕ್ಷಿಸುವುದಾಗಿ’ ಭರವಸೆ ನೀಡಿತ್ತು. ತಾಲಿಬಾನ್ ತಾನು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 2021 ರಲ್ಲಿ, 6 ನೇ ತರಗತಿಯವರೆಗಿನ ಹುಡುಗಿಯರಿಗೆ ಕೆಲವು ಶಾಲೆಗಳನ್ನು ಪುನಃ ತೆರೆಯಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲು ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಆದಾಗ್ಯೂ, ವಿದ್ಯಾರ್ಥಿನಿಯರಿಗಾಗಿ ಪ್ರೌಢಶಾಲೆಗಳು ಮುಚ್ಚಲ್ಪಟ್ಟವು ಮತ್ತು ಇಸ್ಲಾಮಿಕ್ ಎಮಿರೇಟ್ ಎಲ್ಲಾ ಹುಡುಗಿಯರಿಗೆ ತರಗತಿಗಳನ್ನು ‘ಬೇಗನೆ’ ಪುನರಾರಂಭಿಸುವುದಾಗಿ ಘೋಷಿಸಿತು. ಅದರಂತೆ, ಬಾಲಕಿಯರಿಗಾಗಿ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ ತನ್ನ ಆದೇಶದಲ್ಲಿ, ರಾಜಧಾನಿ ಕಾಬೂಲ್ ಸೇರಿದಂತೆ ಹಲವಾರು ಪ್ರಾಂತ್ಯಗಳಲ್ಲಿ ಮಾರ್ಚ್ 23 ರಿಂದ ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯಲಾಗುವುದು ಎಂದು ತಾಲಿಬಾನ್ ಹೇಳಿದೆ.
ಆದಾಗ್ಯೂ, ಕಂದಹಾರ್‌ನಲ್ಲಿನ ಏಪ್ರಿಲ್‌ವರೆಗೆ ಶಾಲೆ ತೆರೆಯುವುದಿಲ್ಲ ಎಂದು ಆದೇಶದಲ್ಲಿ ಹೇಳಿದೆ. ಈ ಹಿಂದೆ, ತಾಲಿಬಾನ್ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನವನ್ನು ಆಳಿತು. ನಂತರ 9/11 ದಾಳಿಯ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ ಅಮೆರಿಕ ನೇತೃತ್ವದ ಪಡೆಗಳಿಂದ ಅವರನ್ನು ಓಡಿಸಲಾಯಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ಪಡೆಗಳು ಸಂಪೂರ್ಣವಾಗಿ ದೇಶವನ್ನು ತೊರೆದವು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

advertisement

ನಿಮ್ಮ ಕಾಮೆಂಟ್ ಬರೆಯಿರಿ