ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ ಕೇವಲ ರೂಪಾಯಿ ನಾಣ್ಯಗಳನ್ನೇ ನೀಡಿ ಒಟ್ಟು ಹಣ ಪಾವತಿಸಿ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್ ಖರೀದಿ ಮಾಡಿದ್ದಾನೆ…!
ಅಚ್ಚರಿಯೆಂದರೆ, ಶೋರೂಮಿನವರಿಗೆ ಎಲ್ಲ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ತಾಸು ಸಮಯ ಹಿಡಿದಿದೆ.
ಬೈಕ್ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಮೂರು ವರ್ಷಗಳಿಂದಲೂ ಭೂಪತಿ 1 ರೂ. ನಾಣ್ಯವನ್ನು ಸಂಗ್ರಹಿಸಿಕೊಂಡು ಬರುತ್ತಿದ್ದರು. ತನ್ನ ಉಳಿತಾಯ ಹಣವನ್ನೆಲ್ಲ ಒಮ್ಮೆಲೆ ಒಟ್ಟಗೂಡಿಸಿ ಬೈಕ್ ಶೋರೋಮ್ಗೆ ತೆರಳಿ ತನ್ನ ಕನಸಿನ ನ್ಯೂ ಬಜಾಜ್ ಡಾಮಿನರ್ ಬೈಕ್ ಖರೀದಿ ಮಾಡಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಭೂಪತಿ ತಂದಿದ್ದ ನಾಣ್ಯಗಳನ್ನು ಎಣಿಸಲು ಶೋರೂಮ್ ಸಿಬ್ಬಂದಿ 10 ತಾಸುಗಳು ಬೇಕಾಯಿತು ಎಂದು ಭಾರತ್ ಏಜೆನ್ಸಿ ಕಂಪನಿಯ ಮ್ಯಾನೇಜರ್ ಮಹಾವಿಕ್ರಾಂತ್ ತಿಳಿಸಿದ್ದಾರೆ.
ಭೂಪತಿ ಬಿಸಿಎ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸುವ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಬೈಕ್ ಖರೀದಿಸುವ ಕನಸನ್ನು ಮೂರು ವರ್ಷಗಳ ಹಿಂದೆಯೇ ಹೊಂದಿದ್ದರು. ಆದರೆ, ಎರಡು ಲಕ್ಷ ಮೌಲ್ಯದ ಬೈಕ್ ಖರೀದಿ ಮಾಡಲು ಅವರ ಬಳಿ ಅಷ್ಟೊಂದು ಮೊತ್ತ ಇರಲಿಲ್ಲ. ಆದರೆ ತಮ್ಮ ಕನಸಿನ ಬೈಕ್ ಖರೀದಿಸಲು ಅವರು ಹಟ ತೊಟ್ಟಿದ್ದರು.
ಬೈಕ್ ಖರೀದಿಸುವ ಕನಸಿನೊಂದಿಗೆ ಹಣ ಸಂಗ್ರಹಿಸಲು ಮುಂದಾದ ಭೂಪತಿ ಪ್ರತಿದಿನ ಸಿಕ್ಕಷ್ಟು ಒಂದೊಂದು ರೂಪಾಯಿ ನಾಣ್ಯವನ್ನು ಪತ್ರಯೇಖವಾಗಿ ಸಂಗ್ರಹಿಸುತ್ತ ಬಂದರು. ಅಂತಿಮವಾಗಿ ಬೈಕ್ಗೆ ಬೇಕಾದಷ್ಟು ಹಣ ಸಂಗ್ರಹ ಮಾಡಿರುವ ಭೂಪತಿ ತನ್ನ ಇಚ್ಛೆಯ ಬೈಕ್ ಖರೀದಿ ಮಾಡಿ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರು ಹಣದಮ ಮೂಟೆಯನ್ನೇ ಹೊತ್ತು ತಂದಿದ್ದು ನೋಡಿ ಶೋರೂಮಿನವರು ಗಾಬರಿಯಾದರು. ಆದರೆ ಹತ್ತು ಗಂಟೆಗಳ ಕಾಲ ಅದನ್ನು ಎಣಿಸಿ ಅವರಿಗೆ ಬೈಕ್ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ