ಮಹಿಳೆಯರು ಏಕಾಂಗಿಯಾಗಿ ವಿಮಾನ ಪ್ರಯಾಣ ಮಾಡುವಂತಿಲ್ಲ: ತಾಲಿಬಾನ್‌ನಿಂದ ಮತ್ತೊಂದು ಫತ್ವಾ..!

ಅಪ್ಘಾನಿಸ್ತಾನ: ಆಪ್ಘಾನಿಸ್ತಾನದಲ್ಲಿ ಮಹಿಳೆಯರ ವಿರುದ್ಧ ತಾಲಿಬಾನ್ ಮತ್ತೊಂದು ನಿರ್ಬಂಧ ವಿಧಿಸಿದೆ. ಮಹಿಳೆಯರು ಇನ್ಮುಂದೆ ಏಕಾಂಗಿಯಾಗಿ ವಿಮಾನಯಾನ ಪ್ರಯಾಣ ಮಾಡುವಂತಿಲ್ಲ ಎಂದು ತಾಲಿಬಾನ್ ಹೊಸ ಫತ್ವಾ ಹೊರಡಿಸಿದೆ.

ಪುರುಷರ ರಕ್ಷಣೆಯಿಲ್ಲದೇ ಮಹಿಳೆಯರು ಒಂಟಿಯಾಗಿ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿರುವ ತಾಲಿಬಾನ್‌ ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಕೊನೆಯ ಅವಕಾಶವನ್ನು ಸೋಮವಾರದವರೆಗೆ ಮಾತ್ರ ನೀಡಿದೆ. ಆನಂತರ ಯಾವುದೇ ಮಹಿಳೆಯರು ಒಂಟಿಯಾಗಿ ವಿಮಾನಯಾನ ಪ್ರಮಾಣ ಮಾಡದಿರುವಂತೆ ಸೂಚಿಸಿದೆ. ಈ ನಿರ್ಬಂಧಗಳ ಬಗ್ಗೆ ತಿಳಿಸುವ ಪತ್ರವನ್ನು ವಿಮಾನಯಾನ ಸಂಸ್ಥೆಗಳಿಗೆ ತಾಲಿಬಾನ್ ಕಳುಹಿಸಿದೆ.
ಕಳೆದ ವಾರ 6ನೇ ತರಗತಿ ನಂತರದ ಹೆಣ್ಣು ಮಕ್ಕಳು ಶಾಲೆಗೆ ಹೋಗದಂತೆ ನಿರ್ಬಂಧ ವಿಧಿಸಿದ್ದ ತಾಲಿಬಾನ್ ಇದೀಗ ಮತ್ತೊಂದು ನಿಯಮ ಜಾರಿಗೊಳಿಸಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಅಫ್ಘಾನಿಸ್ತಾನವನ್ನು ಮರಳಿ ವಶಪಡಿಸಿಕೊಂಡಾಗಿನಿಂದ ತಾಲಿಬಾನ್ ಮಹಿಳೆಯರ ಸ್ವಾತಂತ್ರ್ಯದ ಮೇಲೆ ವ್ಯಾಪಕವಾದ ನಿರ್ಬಂಧಗಳನ್ನು ಹೇರುತ್ತಿದೆ.

ಭಾನುವಾರವಷ್ಟೇ ಪುರುಷರು ಮತ್ತು ಮಹಿಳೆಯರು ರಾಜಧಾನಿಯಲ್ಲಿರುವ ಉದ್ಯಾನವನಗಳಿಗೆ ಒಂದೇ ದಿನ ಭೇಟಿ ನೀಡುವಂತಿಲ್ಲ ಎಂದು ಹೇಳಿತ್ತು. ‘ಇದು ಇಸ್ಲಾಮಿಕ್ ಎಮಿರೇಟ್‌ನ ಆದೇಶವಲ್ಲ, ಆದರೆ ಪರಸ್ಪರ ಅಪರಿಚಿತ ಪುರುಷರು ಮತ್ತು ಮಹಿಳೆಯರು ಒಂದೇ ಸ್ಥಳದಲ್ಲಿ ಸೇರಬಾರದು ಎಂಬುದು ದೇವರ ಆದೇಶ’ ಎಂದು ಉಪ ಸಚಿವಾಲಯದ ಅಧಿಕಾರಿ ಮೊಹಮ್ಮದ್ ಯಾಹ್ಯಾ ಅರೆಫ್ ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement