ಪ್ರಧಾನಿ ಇಮ್ರಾನ್ ಖಾನ್ ಕುರ್ಚಿ ಉಳಿಸಿಕೊಳ್ಳುವುದು ಈಗ ಕಷ್ಟಸಾಧ್ಯ, ಈಗ ಪಾಕ್ ಸಂಸತ್ತಿನ ಪಕ್ಷಗಳ ಬಲಾಬಲ ಹೀಗಿದೆ

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ಸ್ಥಿರತೆಗೆ ಸಂಬಂಧಿಸಿದ ಬಿಕ್ಕಟ್ಟು ಉಲ್ಬಣಗೊಂಡಿದೆ. ವಿಶ್ವಾಸ ಮತದ ಪರೀಕ್ಷೆಗೂ ಮುನ್ನವೇ ಇಮ್ರಾನ್ ಖಾನ್‌ಗೆ ಭಾರಿ ಹಿನ್ನಡೆಯಾಗಿದೆ. ಇಮ್ರಾನ್ ಖಾನ್ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಎಂಕ್ಯೂಎಂನ ಇಬ್ಬರು ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಪಕ್ಷಗಳೊಂದಿಗೆ ಕೈಜೋಡಿದ್ದಾರೆ. ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ನಂತರ ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲ ಮುಂದುವರಿದಿದೆ. ಮಾರ್ಚ್ 31 ರಂದು ಸದನದಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ. ಆದಾಗ್ಯೂ, ಬಹುಮತದ ಪರೀಕ್ಷೆಗೆ ಮುಂಚೆಯೇ, ಸರ್ಕಾರದ ಮಿತ್ರಪಕ್ಷ ಎಂಕ್ಯೂಎಂ(MQM) ಪಕ್ಷವು ಪಾಕಿಸ್ತಾನ ಪೀಪಲ್‌ ಪಾರ್ಟಿ (PPP) ಯೊಂದಿಗೆ ರಾಜಿ ಮಾಡಿಕೊಂಡಿದೆ. ಈಗ ಇಮ್ರಾನ್ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡಿದೆ.
ಮಾರ್ಚ್ 8 ರಂದು ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯ ಮಂಡಿಸಿದಾಗಿನಿಂದ ಇಮ್ರಾನ್ ಖಾನ್ ಅವರ ಕುರ್ಚಿ ಅಪಾಯದಲ್ಲಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಏರುತ್ತಿರುವ ಹಣದುಬ್ಬರಕ್ಕೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನೇತೃತ್ವದ ಸರ್ಕಾರರದ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಸ್ತಾವನೆಗೆ ಏಪ್ರಿಲ್ 3 ರಂದು ಮತದಾನ ನಡೆಯಲಿದ್ದು, ಇದಕ್ಕೂ ಮುನ್ನ ಮಾರ್ಚ್ 31 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಬಲಾಬಲದ ಲೆಕ್ಕಾಚಾರ
ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಟ್ಟು 342 ಸದಸ್ಯರಿದ್ದಾರೆ. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷವು 155 ಸದಸ್ಯರನ್ನು ಹೊಂದಿದೆ. ಅಂದರೆ ಅಧಿಕಾರ ಉಳಿಸಿಕೊಳ್ಳಲು ಕನಿಷ್ಠ 172 ಸಂಸದರ ಅಗತ್ಯವಿದೆ. ಸಮ್ಮಿಶ್ರ ಸರ್ಕಾರ ರಚಿಸುವ ಮೂಲಕ ಇಮ್ರಾನ್ ಈ ಅಂತರವನ್ನು ಕಡಿಮೆ ಮಾಡಿದರು. ಪಿಟಿಐ ನೇತೃತ್ವದ ಆಡಳಿತಾರೂಢ ಸರ್ಕಾರವು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪ್ರ) – 5 ಸ್ಥಾನಗಳು, ಬಲೂಚಿಸ್ತಾನ್ ಅವಾಮಿ ಪಕ್ಷ – 5 ಸ್ಥಾನಗಳು, ಮುತ್ತಹಿದಾ ಕ್ವಾಮಿ ಮೂವ್ಮೆಂಟ್-ಪಾಕಿಸ್ತಾನ್ – 7 ಸ್ಥಾನಗಳು, ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ – 3 ಸ್ಥಾನಗಳು ಮತ್ತು ಅವಾಮಿ ಮುಸ್ಲಿಂ ಲೀಗ್ – 1 ಸ್ಥಾನ ಮತ್ತು ಸ್ವತಂತ್ರ ಸದಸ್ಯರು ಸೇರಿ ಒಕ್ಕೂಟ ರಚನೆಯಾಯಿತು. ಈ ಪಕ್ಷಗಳು ಮತ್ತು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ, ಖಾನ್ ಸರ್ಕಾರವು 179 ಸದಸ್ಯರ ಬಹುಮತವನ್ನು ಹೊಂದಿತ್ತು.
ಪಾಕಿಸ್ತಾನ ಮೂಲದ ದೈನಿಕ ಡಾನ್ ವರದಿಯ ಪ್ರಕಾರ, ಸಂಯುಕ್ತ ವಿರೋಧ ಪಕ್ಷವು ಇದುವರೆಗೆ 169 ಸದಸ್ಯರ ಬೆಂಬಲವನ್ನು ಪಡೆದುಕೊಂಡಿದೆ. ಇದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತವನ್ನು ಪಡೆಯಲು ಮತ್ತು ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆದುಹಾಕಲು ಅಗತ್ಯವಿರುವ 172 ಮತಗಳಲ್ಲಿ ಮೂರು ಕಡಿಮೆಯಾಗಿದೆ, ಆದ್ದರಿಂದ MQM-P ಯ ನಿರ್ಧಾರವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ