ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡ ಹಾವಿನ ಜೊತೆ ಹೋರಾಡಿ ಜೀವ ಉಳಿಸಿಕೊಂಡ ಪುಟ್ಟ ಕಪ್ಪೆಯ ರೋಚಕ ವೀಡಿಯೋ ನೋಡಿ

ವಿಶ್ವಾಸ, ಧೈರ್ಯ ಹಾಗೂ ಪ್ರಯತ್ನದಿಂದ ಎಂಥ ಸವಾಲನ್ನೂ ಎದುರಿಸಬಹುದು ಎಂಬುದನ್ನು ಪುಟ್ಟ ಕಪ್ಪೆಯೊಂದು ಮಾಡಿ ತೋರಿಸಿದೆ.
ಈ ಪುಟ್ಟ ಕಪ್ಪೆ ಮಾರುದ್ದ ಹಾವಿನ ವಿರುದ್ಧ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಲ್ಲಿದ್ದ ತನ್ನ ಪ್ರಾಣ ಉಳಿಸಿಕೊಂಡಿದೆ. ಆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾದ ಮತ್ತು ಬಲಶಾಲಿಯಾದ ಹಾವಿನ ಬಾಯಿಗೆ ಸಿಲುಕಿದ್ದ ಕಪ್ಪೆ ಅದರಿಂದ ಹೊರ ಬಂದಿರುವ ವೀಡಿಯೊ ಹಲವರಿಗೆ ಸ್ಫೂರ್ತಿಯಾಗುವಂತಿದೆ.

ಹಾವು ಕಪ್ಪೆಯನ್ನು ಹಿಡಿದಿದ್ದರೂ ಕಪ್ಪೆ ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ಮನೆಯೊಂದರ ಗೇಟಿನ ಬಳಿ ಹಾವು ಬಲವಾಗಿಯೇ ಕಪ್ಪೆ ಕಾಲನ್ನು ಹಿಡಿದುಕೊಂಡಿತ್ತು. ಆದರೂ ಕಪ್ಪೆ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿತ್ತು. ಗೇಟನ್ನು ಏರಿದ ಈ ಪುಟ್ಟ ಕಪ್ಪೆ ಬಲಿಷ್ಠ ಹಾವನ್ನೇ ಮೇಲಕ್ಕೆ ಜಗ್ಗುತ್ತಿತ್ತು. ತನ್ನ ಹಿಡಿದ ಬಿಡದ ಕಪ್ಪೆ ಕೊನೆಗೂ ಹಾವೇ ತನ್ನ ಹಿಡಿತದ ಬಿಗಿತ ಕಳೆದುಕೊಳ್ಳುವಂತೆ ಮಾಡಿ ಕೊನೆಗೂ ಸಾವಿದ ದವಡೆಯಿಂದ ಪಾರಾಗಿದೆ.

ವೀಡಿಯೊದಲ್ಲಿ ಕಪ್ಪೆಯನ್ನು ತನ್ನ ಬೇಟೆಯನ್ನಾಗಿ ಮಾಡಿಕೊಳ್ಳುವಲ್ಲಿ ಹಾವು ಬಹುತೇಕ ಯಶಸ್ಸನ್ನು ಸಾಧಿಸಿತ್ತು. ಕಪ್ಪೆಯ ಒಂದು ಕಾಲನ್ನು ತನ್ನ ಬಾಯಿಯೊಳಗೆ ಹಿಡಿದುಕೊಂಡಿತ್ತು. ಆದರೆ ಆ ಪುಟ್ಟ ಕಪ್ಪೆ ಹಾಗೆ ಮಾಡಲಿಲ್ಲ. ಬದಲಾಗಿ ತನ್ನ ಮುಂದಿನ ಎರಡು ಕಾಲುಗಳಿಂದ ಗೇಟನ್ನು ಬಿಗಿಯಾಗಿ ಹಿಡಿದು ನಿಧಾನವಾಗಿ ನೇಲಕ್ಕೇರುತ್ತ ಹೋಗಿದೆ. ಹಾವು ಕೆಳಗೆ ಎಳೆಯುತ್ತಿದ್ದರೆ ಈ ಪುಟ್ಟ ಕಪ್ಪೆ ತನ್ನ ಪುಟ್ಟ ಮುಂಗಾಲು ಮೇಲೆ ತನ್ನೆಲ್ಲ ಶಕ್ತಿಯನ್ನು ಹಾಕಿ ಕಪ್ಪೆ ಮೇಲೆ ಏರುತ್ತಿತ್ತು. ಕೊನೆಗೆ ಹಾವಿನ ಹಿಡಿತ ತಪ್ಪುತ್ತ ಸಾಗಿದೆ. ಕೊನೆಗೂ ತನ್ನ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿ ಪುಟ್ಟ ಕಪ್ಪೆ ಮೇಲುಗೈ ಸಾಧಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 'ನ್ಯಾಯ' ವಿಷಯದ ಹೊಸ ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ | ವೀಡಿಯೊ ವೀಕ್ಷಿಸಿ

ಹಾವಿನ ಬಾಯಿಂದ ಮುಕ್ತಿ ಸಿಗುತ್ತಿದ್ದಂತೆ ಕಪ್ಪೆ ಕ್ಷಣಾರ್ಧದಲ್ಲಿ ಕಪ್ಪೆ ಗೇಟ್ ಮೇಲೆ ಕುಳಿತಿದೆ, ಕಪ್ಪೆ ತಪ್ಪಿಸಿಕೊಳ್ಳುತ್ತಿದ್ದಂತೆ ಹಾವು ಕೆಳಗೆ ಬಿದ್ದಿದೆ. ಹಾವು ಮೇಲೆರಲು ಎರಡು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಿಲ್ಲ. ಜೀವ ಉಳಿಸಿಕೊಂಡ ಕಪ್ಪೆ ಮತ್ತೆ ಯಾವುದೇ ತಪ್ಪು ಮಾಡಲಿಲ್ಲ. ಗೇಟ್ ಮೇಲ್ಭಾಗದಿಂದಲೇ ಸುರಕ್ಷಿತ ಜಾಗಕ್ಕೆ ಪಟ್ಟನೆ ಹೋಗಿದೆ.
ಈ ಅದ್ಭುತ ವೀಡಿಯೊವನ್ನು ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement