ನಯಾ ಪಾಕಿಸ್ತಾನ…!? : ಪಾಕಿಸ್ತಾನದಲ್ಲಿ ಸದನದೊಳಗೇ ಪರಸ್ಪರ ಹೊಡೆದಾಡಿಕೊಂಡರು, ಕೂದಲು ಎಳೆದುಕೊಂಡ ಮಹಿಳಾ ಶಾಸಕರು..! ವೀಕ್ಷಿಸಿ

ಇಸ್ಲಾಮಾಬಾದ್: ಭಾನುವಾರ ಪಾಕಿಸ್ತಾನದ ರಾಜಕೀಯದಲ್ಲಿ ಗೊಂದಲದ ದಿನವಾಗಿತ್ತು. ರಾಷ್ಟ್ರೀಯ ಅಸೆಂಬ್ಲಿಯಿಂದ ಪಂಜಾಬ್‌ ವಿಧಾನಸಭೆ ವರೆಗೆ ಗದ್ದಲ ಮತ್ತು ಘೋಷಣೆಗಳದ್ದೇ ಕಾರುಬಾರು..
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಪಂಜಾಬ್ ಗವರ್ನರ್ ಚೌಧರಿ ಸರ್ವರ್ ಅವರನ್ನು ವಜಾಗೊಳಿಸಿದ್ದಾರೆ. ಹೊಸ ಸದನದ ನಾಯಕ ಮತ್ತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಪಂಜಾಬ್ ವಿಧಾನಸಭೆಯ ಅಧಿವೇಶನವನ್ನು ಭಾನುವಾರ ಕರೆಯಲಾಗಿತ್ತು. ಆದರೆ ಮತದಾನವಿಲ್ಲದೆ ಏಪ್ರಿಲ್ 6 ಕ್ಕೆ ಮುಂದೂಡಲಾಯಿತು. ಕಲಾಪ ಮುಂದೂಡಿದ ಬಳಿಕ ಮಹಿಳಾ ಶಾಸಕರು ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಪರಸ್ಪರ ವಾಗ್ವಾದ ನಡೆಸಿದರು.

ಡಾನ್ ನ್ಯೂಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಪಂಜಾಬ್ ವಿಧಾನಸಭೆಯೊಳಗೆ ಸರ್ಕಾರ ಮತ್ತು ವಿರೋಧ ಪಕ್ಷದ ಮಹಿಳಾ ಶಾಸಕರು ಪರಸ್ಪರ ತಳ್ಳಾಟ ಮತ್ತು ಜಗಳವಾಡುತ್ತಿರುವುದನ್ನು ಕಾಣಬಹುದು. ಮಹಿಳೆಯರು ಪರಸ್ಪರ ಕೂದಲನ್ನು ಹಿಡಿದು ಎಳೆಯುವುದನ್ನು ಸಹ ಕಾಣಬಹುದು. ಸ್ವಲ್ಪ ಸಮಯದ ನಂತರ, ಈ ಹೋರಾಟದಲ್ಲಿ ಪುರುಷ ಶಾಸಕರು ಸಹ ಸೇರುತ್ತಾರೆ. ಈ ಚಿತ್ರವು ‘ನಯಾ ಪಾಕಿಸ್ತಾನ’ದ ‘ಹೊಸ ರಾಜಕೀಯ’ವನ್ನು ತೋರಿಸುತ್ತದೆ. ಪಾಕಿಸ್ತಾನದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಉದ್ವಿಗ್ನತೆ ಎಷ್ಟು ಹೆಚ್ಚಾಗಿದೆಯೆಂದರೆ ಈಗ ವಿಷಯವು ಹೊಡೆದಾಟದ ಹಂತಕ್ಕೆ ತಲುಪಿದೆ.

ಪಂಜಾಬ್ ವಿಧಾನಸಭೆ ಅಧಿವೇಶನ ಏಪ್ರಿಲ್ 6ಕ್ಕೆ ಮುಂದೂಡಿಕೆ
ಡಾನ್ ವರದಿಯ ಪ್ರಕಾರ, ಪಂಜಾಬ್ ವಿಧಾನಸಭೆಯ (ಪಿಎ) ಅಧಿವೇಶನವು ಭಾನುವಾರದಂದು ಹೊಸ ಸದನದ ನಾಯಕ ಮತ್ತು ಮುಖ್ಯಮಂತ್ರಿಯ ಆಯ್ಕೆ ಮಾಡಬೇಕಿತ್ತು. ಆದರೆ ಮತ ಚಲಾಯಿಸದೆ ಏಪ್ರಿಲ್ 6 ರವರೆಗೆ ಮುಂದೂಡಲ್ಪಟ್ಟಿದೆ. ಪ್ರಾಂತೀಯ ವಿಧಾನಸಭೆ ಸದನದ ಹೊಸ ನಾಯಕನನ್ನು ಆಯ್ಕೆ ಮಾಡಲು ಭಾನುವಾರ ಮತದಾನ ಮಾಡಬೇಕಿತ್ತು.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement