ಬುಚಾ ನೆಲಮಾಳಿಗೆಯ ಭಯಾನಕ: ರಷ್ಯಾದ ಸೈನಿಕರಿಂದ 25 ಉಕ್ರೇನಿಯನ್ ಯುವತಿಯರ ಮೇಲೆ ‘ವ್ಯವಸ್ಥಿತವಾಗಿ’ ಅತ್ಯಾಚಾರ, ಅವರಲ್ಲಿ 9 ಮಂದಿ ಈಗ ಗರ್ಭಿಣಿಯರು

ಕೀವ್‌: ರಷ್ಯಾದ ಪಡೆಗಳು ಹಿಂಪಡೆಯುತ್ತಿದ್ದಂತೆ, ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಭಯಾನಕ ಚಿತ್ರಗಳು ಹೊರಹೊಮ್ಮುತ್ತಿವೆ. ಈ ಯುದ್ಧಾಪರಾಧಗಳಲ್ಲಿ ಅತ್ಯಂತ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಬುಚಾ ನಗರದ ಮನೆಯೊಂದರ ನೆಲಮಾಳಿಗೆಯಲ್ಲಿ ರಷ್ಯಾದ ಸೈನಿಕರು ಉಕ್ರೇನಿಯನ್ ಮಹಿಳೆಯರನ್ನು 25 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದು, ಈಗ ಅವರಲ್ಲಿ
ಒಂಬತ್ತು ಮಂದಿ ಗರ್ಭಿಣಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಬುಚಾದಲ್ಲಿನ ಒಂದು ಮನೆಯ ನೆಲಮಾಳಿಗೆಯಲ್ಲಿ 14 ರಿಂದ 24 ವರ್ಷ ವಯಸ್ಸಿನ ಸುಮಾರು 25 ಹುಡುಗಿಯರು ಮತ್ತು ಮಹಿಳೆಯರ ಮೇಲೆ ರಷ್ಯಾದ ಸೈನಿಕರು ವ್ಯವಸ್ಥಿತವಾಗಿ ಅತ್ಯಾಚಾರ ಮಾಡಿದ್ದಾರೆ. ಅವರಲ್ಲಿ ಒಂಬತ್ತು ಮಂದಿ ಗರ್ಭಿಣಿಯಾಗಿದ್ದಾರೆ” ಎಂದು ಮಾನವ ಹಕ್ಕುಗಳಿಗಾಗಿ ಉಕ್ರೇನ್‌ನ ಓಂಬುಡ್ಸ್‌ಮನ್ ಲ್ಯುಡ್ಮಿಲಾ ಡೆನಿಸೋವಾ ಬಿಬಿಸಿಗೆ ತಿಳಿಸಿದ್ದಾರೆ.

ರಷ್ಯಾದ ಸೈನಿಕರು ಅತ್ಯಾಚಾರಕ್ಕೊಳಗಾದ ಉಕ್ರೇನಿಯನ್ ಯುವತಿಯರಿಗೆ ನೀವು ಮಕ್ಕಳನ್ನು ಹೊಂದುವುದನ್ನು ತಡೆಯಲು ಹಾಗೂ ಯಾವುದೇ ಪುರುಷನೊಂದಿಗೆ ಲೈಂಗಿಕ ಸಂಪರ್ಕವನ್ನು ಬಯಸದ ಹಂತಕ್ಕೆ ಹೋಗುವವರೆಗೆ ಅತ್ಯಾಚಾರ ಮಾಡುವುದಾಗಿ ಹೇಳಿದರು” ಎಂದು ಅವರು ತಿಳಿಸಿದ್ದಾರೆ.
ಭಾನುವಾರದ ವರೆಗೆ, ಉಕ್ರೇನಿಯನ್ ಅಧಿಕಾರಿಗಳು ಬುಚಾ ಮತ್ತು ಸುತ್ತಮುತ್ತಲಿನ 360 ಕ್ಕೂ ಹೆಚ್ಚು ನಾಗರಿಕರ ಶವಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದರು. ಅವರಲ್ಲಿ 250 ಕ್ಕೂ ಹೆಚ್ಚು ಜನರು ಗುಂಡುಗಳು ಅಥವಾ ಶೆಲ್‌ ತುಂಡುಗಳಿಂದ ಕೊಲ್ಲಲ್ಪಟ್ಟರು. ಈ ಸಾವುಗಳನ್ನು ಈಗ ಯುದ್ಧಾಪರಾಧ ಎಂದು ಪರಿಗಣಿಸಲಾಗುತ್ತಿದೆ.
ಮಹಿಳೆಯರ ಮೇಲಿನ ಅತ್ಯಾಚಾರದ ಇತರ ಹಲವಾರು ಪ್ರಕರಣಗಳು ಹೊರಹೊಮ್ಮುತ್ತಿವೆ. ಲೈಂಗಿಕ ಅಪರಾಧಗಳ ಪ್ರಮಾಣವನ್ನು ನಿರ್ಣಯಿಸಲು ಬಿಬಿಸಿಯಿಂದ ಕೇಳಿದಾಗ, “ಈ ಸಮಯದಲ್ಲಿ ಅದು ಅಸಾಧ್ಯವಾಗಿದೆ ಏಕೆಂದರೆ ಪ್ರತಿಯೊಬ್ಬರೂ ಅವರಿಗೆ ಏನಾಯಿತು ಎಂದು ನಮಗೆ ಹೇಳಲು ಸಿದ್ಧರಿಲ್ಲ. ಅವರಲ್ಲಿ ಹೆಚ್ಚಿನವರು ಪ್ರಸ್ತುತ ಮಾನಸಿಕವಾಗಿ ಬಳಲಿದ್ದು, ಬೆಂಬಲಕ್ಕಾಗಿ ಸಹಾಯ ಯಾಚಿಸುತ್ತಾರೆ. ಆದ್ದರಿಂದ ಅವರು ನಮಗೆ ತಮ್ಮ ಸಾಕ್ಷ್ಯವನ್ನು ನೀಡದ ಹೊರತು ನಾವು ಅಪರಾಧವನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಡೆನಿಸೋವಾ ಹೇಳಿದರು.

ಓದಿರಿ :-   ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ...! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಷ್ಯನ್‌ ಸೈನಿಕರಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ 16 ವರ್ಷದ ಬಾಲಕಿಯೊಬ್ಬಳು ರಷ್ಯಾದ ಸೈನಿಕನೊಬ್ಬ ಗನ್‌ಪಾಯಿಂಟ್‌ನಲ್ಲಿ ತನ್ನ ಭೀಕರ ಅತ್ಯಾಚಾರ ಮಾಡಿದ್ದನ್ನು ವಿವರಿಸಿದ್ದಾಳೆ, ಅವನು ತನ್ನ ಬಟ್ಟೆಗಳನ್ನು ತೆಗೆಯುವಂತೆ ಆದೇಶಿಸಿದ ಇಲ್ಲದಿದ್ದರೆ ಸಾಯಿಸುವುದಾಗಿ ಬೆಸದರಿಸಿದ ಎಂದು ಅವರು ಹೇಳಿದ್ದಾಳೆ ಎಂದು ಬ್ರಿಟನ್ನಿನ ಡೇಲಿ ಮೇಲ್‌ ವರದಿ ಮಾಡಿದೆ.
ಖೆರ್ಸನ್ ಒಬ್ಲಾಸ್ಟ್‌ನ ಈಗ ವಿಮೋಚನೆಗೊಂಡಿರುವ ಕ್ರಾಸ್ನಿವಾ ಹಳ್ಳಿಯ ಹದಿಹರೆಯದ ಹುಡುಗಿ, ತನ್ನ ಕುಟುಂಬದೊಂದಿಗೆ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದಾಗಿ ಹೇಳಿದ್ದಾಳೆ. ಆಗ ರಷ್ಯಾದ ಕುಡುಕ ಸೈನಿಕನು ತನ್ನನ್ನು ತನ್ನ ಮನೆಯವರಿಂದ ಪ್ರತ್ಯೇಕಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾಳೆ.
ಅವಳು ಅತ್ಯಾಚಾರಕ್ಕೊಳಗಾದ ಸಂಜೆ, ತನ್ನ ತಾಯಿ, ಮೂವರು ಸಹೋದರರು ಮತ್ತು ಒಬ್ಬ ಸಹೋದರಿಯೊಂದಿಗೆ ಅಡಗಿಕೊಂಡಿದ್ದ ನೆಲಮಾಳಿಗೆಯಿಂದ ಹೊರಬಂದಾಗ ಇಬ್ಬರು ರಷ್ಯನ್ನರು ತನ್ನನ್ನು ನೋಡಿದರು ಎಂದು ಹೇಳಿದ್ದಾಳೆ.
ರಷ್ಯನ್ನರಲ್ಲಿ ಒಬ್ಬರು ಕುಟುಂಬವನ್ನು ವಿಚಾರಸಿದ್ದಾನೆ ಮತ್ತು ತಾಯಿಯನ್ನು ಮಾತ್ರ ವಿಚಾರಣೆ ಮಾಡುವ ಮೊದಲು ಅವರ ವಯಸ್ಸನ್ನು ಕೇಳಿದರು ಎಂದು ಅವರು ಹೇಳಿದ್ದಾಳೆ. ನಂತರ ಆತ ತಾಯಿಯನ್ನು ಬಿಡುಗಡೆ ಮಾಡಿ ತನ್ನನ್ನು ಕರೆದುಕೊಂಡ ಹೋದ ಎಂದು ಹೇಳಿದ್ದಾಳೆ. ಇಂಥ ಅನೇಕ ಘಟನೆಗಳು ಈಗ ಬೆಳಕಿಗೆ ಬರುತ್ತಿವೆ.

ಓದಿರಿ :-   ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ...! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ