ಮಧುರೈನ ಭಗವಾನ್‌ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು, ಎಂಟು ಜನರಿಗೆ ಗಾಯ

ಚೆನ್ನೈ: ಮಧುರೈನಲ್ಲಿ ವೈಗೈ ನದಿಗೆ ಕಲ್ಲಜಗರ್ ಭಗವಾನರ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ. . ಎರಡು ವರ್ಷಗಳ ನಂತರ ಆಯೋಜಿಸಲಾದ ಉತ್ಸವವನ್ನು ವೀಕ್ಷಿಸುವ ಧಾವಂತದಲ್ಲಿ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತಪಟ್ಟ ಇಬ್ಬರು ವ್ಯಕ್ತಿಗಳಲ್ಲಿ ಮಧ್ಯವಯಸ್ಕ ಪುರುಷ ಮತ್ತು ಮಹಿಳೆ ಸೇರಿದ್ದಾರೆ. ಆದರೆ, ಅವರ ಗುರುತು ಮತ್ತು ಇತರೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುರೈ ಜಿಎಚ್‌ನಲ್ಲಿ ಇರಿಸಲಾಗಿದೆ.

ಪ್ರಾಥಮಿಕ ವಿವರಗಳ ಪ್ರಕಾರ, ಜಿಲ್ಲಾಡಳಿತದ ಆದೇಶದ ವಿರುದ್ಧ ಅನೇಕ ಜನರು ವೈಗೈ ನದಿಗೆ ಪ್ರವೇಶಿಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಒಬ್ಬರಿಗೆ 2 ಲಕ್ಷ ರೂಪಾಯಿ ಮತ್ತು ಉಳಿದ ಗಾಯಾಳುಗಳಿಗೆ ತಲಾ 1 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.

ಮಧುರೈನಲ್ಲಿ ಚಿತಿರೈ ಉತ್ಸವದ 12 ನೇ ದಿನದಂದು, ವೈಗೈ ನದಿಗೆ ಪ್ರವೇಶಿಸುವ ಕಲ್ಲಜಗರ್ ದೇವರನ್ನು ವೀಕ್ಷಿಸಲು ಸಾವಿರಾರು ಭಕ್ತರು ಬೆಳಿಗ್ಗೆ 4 ಗಂಟೆಯಿಂದಲೇ ಆವರಣದಲ್ಲಿ ಜಮಾಯಿಸಿದ್ದರು.
ಶನಿವಾರದಂದು, ಭಗವಾನ್‌ ಕಲ್ಲಜಗರ್ ಅವರು ತಮ್ಮ ಚಿನ್ನದ ಕುದುರೆಯ ಮೇಲೆ ಶನಿವಾರ ಬೆಳಿಗ್ಗೆ 5.50 ರಿಂದ 6.20 ರ ನಡುವೆ ವೈಗೈ ನದಿಯನ್ನು ಪ್ರವೇಶಿಸಿದರು.

ಓದಿರಿ :-   ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಹರಿಯಾಣದ ಮಾಜಿ ಸಿಎಂ ಚೌತಾಲಾ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ