ಸಮುದ್ರದ ರಕ್ಕಸ ಅಲೆಗಳಿಗೆ ಸಿಲುಕಿದ್ದ ಜೀವ ರಕ್ಷಕನ ಪ್ರಾಣ ಉಳಿಸಿದ ಧೈರ್ಯಶಾಲಿ ಸರ್ಫರ್….ವೀಕ್ಷಿಸಿ

ಜೀವದ ಹಂಗು ತೊರೆದು ರಕ್ಕಸ ಅಲೆಗಳ ಮಧ್ಯೆ ಧುಮುಕಿ ಜೀವ ರಕ್ಷಕರ ಪ್ರಾಣವನ್ನೇ ಮತ್ತೊಬ್ಬರು ಉಳಿಸಿದ್ದಾರೆ…! ಸಮುದ್ರದ ಬೃಹತ್‌ ಅಲೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿದ್ದ ಜೀವ ರಕ್ಷಕರೊಬ್ಬರನ್ನು ಸರ್ಫರ್ ಬಚಾವ್‌ ಮಾಡಿದ್ದಾರೆ.
ಪ್ರಾಣ ಉಳಿಸಿದ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. @GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವೀಡಿಯೊದಲ್ಲಿ ಬ್ರೆಜಿಲ್‌ನಲ್ಲಿ ನಡೆದ ಈ ಘಟನೆಯ ದೃಶ್ಯ ಸೆರೆಯಾಗಿದೆ. ಅಲೆಗಳ ನಡುವೆ ಸಿಲುಕಿ ಜೀವಾಪಾಯದಲ್ಲಿದ್ದ ಜೀವರಕ್ಷಕರೊಬ್ಬರು ಜಾರುತ್ತಿದ್ದ ಕಲ್ಲಿನ ದಂಡೆಯ ಬಳಿಯ ಬರುತ್ತಿರುವ ದೃಶ್ಯದ ಮೂಲಕ ವೀಡಿಯೊ ಶುರುವಾಗುತ್ತದೆ. ಅವರು ಇನ್ನೇನು ಮೇಲೆ ಬರುತ್ತಾರೆ ಎನ್ನುಷ್ಟರಲ್ಲಿ ರಕ್ಕಸ ಅಲೆಯೊಂದು ಬಂದು ಅಪ್ಪಳಿಸಿ ಜೀವರಕ್ಷಕನನ್ನು ತನ್ನೊಟ್ಟಿಗೆ ಎಳೆದೊಯ್ಯುತ್ತದೆ.

ಈ ಭಯಾನಕ ದೃಶ್ಯಕ್ಕೆ ಎಲ್ಲರೂ ಗಾಬರಿಯಾಗುತ್ತಾರೆ. ಈ ವೇಳೆ, ಸರ್ಫರ್ ಧೈರ್ಯ ಮಾಡಿ ಭಾರೀ ಅಲೆಗಳ ಮಧ್ಯೆಯೇ ನೀರಿಗೆ ಧುಮುಕತ್ತಾರೆ. ನಂತರ ಈ ವ್ಯಕ್ತಿಯನ್ನು ರಕ್ಷಣೆ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ರೆನಾನ್ ಸೋಜಾ ಎಂಬವರೇ ಸಾಹಸಿ ಸರ್ಫರ್. ನಂತರ ಹೆಲಿಕಾಪ್ಟರ್‌ ಮೂಲಕ ಜೀವರಕ್ಷಕನನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಸರ್ಫರ್ ಕಾರ್ಯವನ್ನು ಕೊಂಡಾಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

advertisement

ನಿಮ್ಮ ಕಾಮೆಂಟ್ ಬರೆಯಿರಿ