ನನ್ನೊಂದಿಗೆ ಮಲಗು, ಇಲ್ಲದಿದ್ದರೆ ನಾನು ಇನ್ನೂ 20 ಪುರುಷರನ್ನು ಕರೆತರುತ್ತೇನೆ: ಹದಿಹರೆಯದ ಗರ್ಭಿಣಿ ಮೇಲೆ ಅತ್ಯಾಚಾರ ಮಾಡುವ ಮೊದಲು ರಷ್ಯಾದ ಸೈನಿಕನ ಬೆದರಿಕೆ

ಕೀವ್‌ (ಉಕ್ರೇನ್)‌: ಒಂದೋ ನೀನು ಈಗ ನನ್ನೊಂದಿಗೆ ಮಲಗು ಅಥವಾ ನಾನು ಇನ್ನೂ 20 ಪುರುಷರನ್ನು ಕರೆತರುತ್ತೇನೆ…. ಇದು ರಷ್ಯಾದ ನಿಯಂತ್ರಣದಲ್ಲಿರುವ ಖೆರ್ಸನ್ ಗ್ರಾಮದಲ್ಲಿ 16 ವರ್ಷದ ಹದಿಹರೆಯದ ಗರ್ಭಿಣಿ ಮೇಲೆ ಅತ್ಯಾಚಾರವೆಸಗುವ ಮೊದಲು ಕುಡಿದ ರಷ್ಯಾದ ಸೈನಿಕನ ಮಾತುಗಳು.
ಆಪಾದಿತ ಅತ್ಯಾಚಾರದ ಸಮಯದಲ್ಲಿ, ಹದಿಹರೆಯದ ಹುಡುಗಿ ಆರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಸಿಎನ್ಎನ್ ವರದಿ ಮಾಡಿದೆ. ಕುಡಿದ ಅಮಲಿನಲ್ಲಿದ್ದ ಯೋಧ ವಿರೋಧಿಸಿದರೆ ಕತ್ತು ಹಿಸುಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಅವಳು ಹೇಳಿದ್ದಾರೆ.
ಅವಳು ಮತ್ತು ಆಕೆಯ ಕುಟುಂಬ ಬಾಂಬ್ ದಾಳಿಯಿಂದ ಪಾರಾಗಲು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದರು. ಮುಸ್ಸಂಜೆಯಲ್ಲಿ ಊಟಕ್ಕೆಂದು ಮಕ್ಕಳನ್ನು ಕರೆದುಕೊಂಡು ಹೋದಾಗ ಕುಡುಕ ಸೈನಿಕನ ಕಣ್ಣಿಗೆ ಬಿದ್ದ.

ಮಕ್ಕಳ ವಯಸ್ಸು ಎಷ್ಟು ಎಂದು ಆತ ಕೇಳಿದ, 12 ಮತ್ತು 14 ವರ್ಷ ವಯಸ್ಸಿನ ಇಬ್ಬರು ಹುಡುಗಿಯರು ಮತ್ತು ನನಗೆ 16 ವರ್ಷ ಎಂದು ನಾನು ಹೇಳಿದೆ. ಅವನು ಮೊದಲು ನನ್ನ ತಾಯಿಯನ್ನು ಕರೆದ, ಹಾಗೂ ಅವಳನ್ನು ಬೇಗನೆ ಬಿಟ್ಟುಬಿಟ್ಟ, ನಂತರ ನನ್ನನ್ನು ಕರೆದ. ನಾನು ಹೋದಾಗ, ಅವನು ನನ್ನ ಮೇಲೆ ಕಿರುಚಲು ಪ್ರಾರಂಭಿಸಿದ ಮತ್ತು ಬಟ್ಟೆ ಬಿಚ್ಚಲು ಹೇಳಿದ,, ನಾನು ಒಲ್ಲೆ ಎಂದಾಗ, ನಾನು ಅವನೊಂದಿಗೆ ಮಲಗದಿದ್ದರೆ ಇನ್ನೂ 20 ಜನರನ್ನು ಕರೆದುಕೊಂಡು ಬರುತ್ತೇನೆ ಎಂದು ಬೆದರಿಸಿದ ಎಂದು ಸಂತ್ರಸ್ತೆ ಹೇಳಿದ್ದಾಳೆ.
ಆತ ನನ್ನ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದಮತ್ತು ಅತ್ಯಾಚಾರವನ್ನು ವಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಅವಳು ಹೇಳಿದ್ದಾಳೆ. ಕುಡಿದಿಲ್ಲದ ಇನ್ನೊಬ್ಬ ರಷ್ಯಾದ ಸೈನಿಕನು ಕುಡಿದಿದ್ದ ಈ ಸೈನಿಕನನ್ನು ತಡೆಯಲು ಯತ್ನಿಸಿದ, ಆದರೆ ವ್ಯರ್ಥವಾಯಿತು. ಅವನು ನೀಲಿ ಕಣ್ಣುಗಳನ್ನು ಹೊಂದಿದ್ದನೆಂದು ನನಗೆ ನೆನಪಿದೆ, ಆದರೆ ಅದು ಕತ್ತಲೆಯಾಗಿತ್ತು ಮತ್ತು ನನಗೆ ಹೆಚ್ಚು ನೆನಪಿಲ್ಲ ಎಂದು ಅವಳು ಆ ಭಯಾನಕ ಘಟನೆಯನ್ನು ನೆನಪಿಸಿಕೊಂಡಳು.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಇತರ ರಷ್ಯನ್ನರು ಅವನನ್ನು ನೀಲಿ ಎಂದು ಕರೆಯುವುದನ್ನು ತಾನು ಕೇಳಿದ್ದೇನೆ ಮತ್ತು ಅವನಿಗೆ ಅಪರಾಧದ ಹಿನ್ನೆಲೆಯಿದೆ ಎಂದು ಹೇಳಿದಳು ಮತ್ತು ಅವನು “ಸುಲಭವಾದ ಹುಡುಗಿ”ಗಾಗಿ ಹಳ್ಳಿಯ ಸುತ್ತಲೂ ಹೋಗುತ್ತಿದ್ದನೆಂದು ಮಾತುಗಳಿವೆ ಎಂದು ಅವಳು ಹೇಳಿದಳು. ನಾವು ತಿನ್ನಲು ಹೊರಡದಿದ್ದರೆ ಅವನು ನಮ್ಮನ್ನು ನೋಡುತ್ತಿರಲಿಲ್ಲ ಮತ್ತು ಅವನು ನನ್ನನ್ನು ಮುಟ್ಟುತ್ತಿರಲಿಲ್ಲ” ಎಂದು ಹೇಳುತ್ತ ಅವಳು ದುಃಖಿಸಿದಳು.
ಮರುದಿನ, ಅವಳನ್ನು ಇನ್ನೊಬ್ಬ ಸೈನಿಕನ ಬಳಿಗೆ ಕರೆದೊಯ್ದರು, ಅವನು ಕೂಗಲು ಪ್ರಾರಂಭಿಸಿದ ಮತ್ತು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ. ನನಗೆ ಭಯವಾಯಿತು ಆದ್ದರಿಂದ ನಾನು ಅಳಲು ಪ್ರಾರಂಭಿಸಿದೆ. ಆದರೆ ನಾನು ಸತ್ಯವನ್ನು ಹೇಳುತ್ತಿದ್ದೇನೆಯೇ ಅಥವಾ ಸುಳ್ಳು ಹೇಳುತ್ತಿದ್ದೇನೆಯೇ ಎಂದು ಪರೀಕ್ಷಿಸಲು ಇದು ಪರೀಕ್ಷೆ ಎಂದು ಆತ ನನಗೆ ಹೇಳಿದ ಎಂದು ಸಂತ್ರಸ್ತೆ ಹೇಳಿದಳು.
ನ್ಯೂಸ್ ಪೋರ್ಟಲ್‌ನಿಂದ ಆರೋಪವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಉಕ್ರೇನಿಯನ್ ಪ್ರಾಸಿಕ್ಯೂಟರ್‌ಗಳು ಸಿಎನ್‌ಎನ್‌ಗೆ ಅವರು ಆರೋಪಗಳನ್ನು ತನಿಖೆ ಮಾಡಿ ದಾಳಿಯನ್ನು ದೃಢಪಡಿಸಿದರು, ಅದನ್ನು ಯುದ್ಧ ಅಪರಾಧ ಎಂದು ಕರೆದಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement