ಉಕ್ರೇನ್ ಯುದ್ಧದ ಬಗ್ಗೆ ಇರುವ ಭಿನ್ನಾಭಿಪ್ರಾಯ ಬದಿಗೆ ಸರಿಸಿ, ಪ್ರಧಾನಿ ಮೋದಿ ಜೊತೆಗಿನ ಶೃಂಗಸಭೆಯಲ್ಲಿ ಭಾರತದ ಮಾನವೀಯ ನೆರವಿನ ಬಗ್ಗೆಯೇ ಮಾತನಾಡಿದ ಅಮೆರಿಕ ಅಧ್ಯಕ್ಷ ಬೈಡನ್‌..!

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ವಿಧಾನಗಳ ಕುರಿತು ಭಾರತ ಮತ್ತು ಅಮೆರಿಕ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ಗೆ ಭಾರತದ ಮಾನವೀಯ ನೆರವನ್ನು ಎತ್ತಿ ತೋರಿಸುವ ಮೂಲಕ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ವರ್ಚುವಲ್ ಶೃಂಗಸಭೆಯನ್ನು ಪ್ರಾರಂಭಿಸಿದರು. ಉಕ್ರೇನ್‌ ಜನರಿಗೆ ಭಾರತದ ಮಾನವೀಯ ಬೆಂಬಲವನ್ನು ನಾನು … Continued

ಪಾಕ್ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದಿಸಿದ ಮೋದಿ; ಭಾರತ ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಬಯಸುತ್ತದೆ ಎಂದ ಪ್ರಧಾನಿ

ನವದೆಹಲಿ: ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ ಮತ್ತು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಭಾರತ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಮುಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ … Continued

ರೋಪ್‌ವೇ ಅಪಘಾತದ ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್‌ನಿಂದ ಬಿದ್ದು ವ್ಯಕ್ತಿ ಸಾವು : ಭಯಾನಕ ದೃಶ್ಯ ಸೆರೆ

ನವದೆಹಲಿ: ರಕ್ಷಣಾ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ನಿಂದ ವ್ಯಕ್ತಿಯೊಬ್ಬರು ಬಿದ್ದು ಸಾವಿಗೀಡಾದ ಘಟನೆ ಜಾರ್ಖಂಡ್‌ನ ದಿಯೋಘರ್‌ನಲ್ಲಿ ಸೋಮವಾರ ನಡೆದಿದೆ. ಅವರು Mi-17 V5 ಹೆಲಿಕಾಪ್ಟರ್‌ನಿಂದ ರಕ್ಷಣೆ ಮಾಡುವ ಸಮಯದಲ್ಲಿ ಜಾರಿ ಕೆಳಗಿನ ಒರಟಾದ ಬಂಡೆಯ ಮೇಲೆ ಮೇಲೆ ಬಿದ್ದು ಮೃತಪಟ್ಟಿದ್ದಾನೆ, ಇದು ದುರಂತದಲ್ಲಿ ಮೂರನೇ ಸಾವಾಗಿದೆ. ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ … Continued

ನೇಕಾರರು ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ: ಸಿಎಂ

ಉಡುಪಿ: ಈ ವರ್ಷದಿಂದ ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಸೋಮವಾರ ಉಡುಪಿ ಜಿಲ್ಲೆ ಉಚ್ಚಿಲ ಕ್ಷೇತ್ರದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೀನುಗಾರಿಕೆ ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗರಿಕಾ ದೋಣಿಗಳನ್ನು … Continued

ಮೇ 2ನೇ ವಾರದಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟ : ಸಚಿವ ನಾಗೇಶ

ವಿಜಯಪುರ: ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿವೆ. ಮಂಗಳವಾರದಿಂದ  ಕೀ ಉತ್ತರಗಳು, ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ( SSLC Exam Results ) ಪ್ರಕಟಿಸುವ ಗುರಿ ಹೊಂದಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಹೇಳಿದ್ದಾರೆ. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆಗಾಗಿ ವಿಜಯಪುರಕ್ಕೆ … Continued

ಟಿಎಂಸಿ ನಾಯಕನ ಮಗನ ಜನ್ಮದಿನದ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾಚಾರದ ನಂತರ 9ನೇ ತರಗತಿ ಬಾಲಕಿ ಸಾವು; ಬಲವಂತವಾಗಿ ದಹನ

ನಾಡಿಯಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಇತ್ತೀಚೆಗೆ ಜನ್ಮದಿನದ ಸಮಾರಂಭವೊಂದರಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ಪಕ್ಷದ ಪಂಚಾಯಿತಿ ಸದಸ್ಯನ ಮಗ ಎಂದು ಬಾಲಕಿಯ ಕುಟುಂಬ ಆರೋಪಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ … Continued

ಮಂಗಳೂರು:ಯಕ್ಷಗಾನದ ಖ್ಯಾತ ಭಾಗವತ ಬಲಿಪ ಪ್ರಸಾದ ನಿಧನ

ಮಂಗಳೂರು: ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದ ಬಲಿಪ ಪ್ರಸಾದ (46)ಅವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಸೋಮವಾರ (ಏಪ್ರಿಲ್ 11) ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಈ ಬಾರಿಯ ಮೇಳದ ತಿರುಗಾಟದಿಂದ ಬಲಿಪ ಪ್ರಸಾದ ಅವರು ದೂರ ಉಳಿದಿದ್ದರು. ಅವರು ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಬಲಿಪ ನಾರಾಯಣ ಭಾಗವತರ ಪುತ್ರ. ಬಲಿಪ ನಾರಾಯಣ … Continued

ಪ್ರಧಾನಿ ಶೆಹಬಾಜ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಾಸುಗಳ ಮೊದಲು ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಅಸ್ವಸ್ಥ..!

ಇಸ್ಲಾಮಾಬಾದ್: ಚುನಾಯಿತ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗಂಟೆಗಳ ಮೊದಲು ಅಧ್ಯಕ್ಷ ಆರಿಫ್ ಅಲ್ವಿ ಸೋಮವಾರ “ಅಸ್ವಸ್ಥತೆಯ” ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅಧ್ಯಕ್ಷರ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ. ಅಧ್ಯಕ್ಷ ಡಾ ಆರಿಫ್ ಅಲ್ವಿ ಅವರು ಅಸ್ವಸ್ಥತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿದ್ದಾರೆ ಮತ್ತು ಕೆಲವು … Continued

ರಾಮನವಮಿ ಹಿಂಸಾಚಾರ: ಆಸ್ತಿ ಹಾನಿ ವಸೂಲಿ ಮಾಡಲು ಆರೋಪಿಗಳ ಮನೆಗಳನ್ನು ಕೆಡವಿದ ಮಧ್ಯಪ್ರದೇಶ ಸರ್ಕಾರ ..!

ಭಾನುವಾರ ರಾಮನವಮಿ ಮೆರವಣಿಗೆ ವೇಳೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಲ್ಲಿ, ರಾಜ್ಯ ಸರ್ಕಾರವು ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳಿಂದ ಆಸ್ತಿ ಹಾನಿ ಹಿಂಪಡೆಯಲು ಮನೆಗಳನ್ನು ನೆಲಸಮಗೊಳಿಸಿದೆ. ಸೋಮವಾರ ಛೋಟಿ ಮೋಹನ್ ಟಾಕೀಸ್ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸರ್ಕಾರಿ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಅಲ್ಲಿಗೆ ಆಗಮಿಸಿ ಹಿಂಸಾಚಾರ ಎಸಗಿದ ಆರೋಪಿಗಳ ಮನೆಗಳನ್ನು ಕೆಡವಿದರು. … Continued

ಸತ್ತು ಹೋಗಿದ್ದಾನೆಂದು ಭಾವಿಸಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದ ವ್ಯಕ್ತಿ 12 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಪತ್ತೆ…!

ಬಿಹಾರದ ಬಕ್ಸರ್‌ನ ಛಾವಿ ಮುಸಾಹರ್ ಎಂಬವರು 12 ವರ್ಷಗಳಿಂದ ನಾಪತ್ತೆಯಾಗಿದ್ದರು. ಮೃತನೆಂದು ಭಾವಿಸಿ ಕುಟುಂಬಸ್ಥರು ಆ ವ್ಯಕ್ತಿ ಅಂತ್ಯಕ್ರಿಯೆ ಸಹ ನೆರವೇರಿಸಿದ್ದರು. ಆದರೆ ಈ ವ್ಯಕ್ತಿ ಬದುಕಿದ್ದಾನೆ ಎಂಬುದು ಈಗ ಗೊತ್ತಾಗಿದೆ..! ಈ ವ್ಯಕ್ತಿ ಬದುಕಿದ್ದು ಪಾಕಿಸ್ತಾನದ ಜೈಲಿನಲ್ಲಿದ್ದ…! ಪ್ರಯತ್ನದ ನಂತರ ಶೀಘ್ರದಲ್ಲೇ ಅವರು ತಮ್ಮ ಮನೆಗೆ ಮರಳಲಿದ್ದಾರೆ. ಬಕ್ಸರ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ … Continued