ಏಕರೂಪ ನಾಗರಿಕ ಸಂಹಿತೆಗೆ ಸಮಿತಿ ರಚನೆ: ಉತ್ತರಾಖಂಡ ಸಿಎಂ ಧಾಮಿ

ನವದೆಹಲಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಿಜೆಪಿಯ ಚುನಾವಣಾ ಭರವಸೆಯನ್ನು ಈಡೇರಿಸುವುದನ್ನು ಪುನರುಚ್ಚರಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯ ಸರ್ಕಾರವು ಎಲ್ಲ ಪಾಲುದಾರರು ಮತ್ತು ತಜ್ಞರನ್ನು ಪರಿಗಣಿಸಿ ಸಮಿತಿ ರಚಿಸಲಿದೆ ಎಂದು ಶನಿವಾರ ಹೇಳಿದ್ದಾರೆ. ದೆಹಲಿ ಭೇಟಿಯ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಧಾಮಿ, “ನಾವು ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಕುರಿತು … Continued

ಭಾರತದ ಕೆಳ ನ್ಯಾಯಾಲಯಗಳಲ್ಲಿ 4 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ: ಸಿಜೆಐ ರಮಣ

ನವದೆಹಲಿ: ಭಾರತದ ಕೆಳ ನ್ಯಾಯಾಲಯಗಳಲ್ಲಿ 4 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಶನಿವಾರ ಹೇಳಿದ್ದಾರೆ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಭಾರಿ ಹಿನ್ನಡೆಯನ್ನು ಎತ್ತಿ ತೋರಿಸಿದ್ದಾರೆ. ನ್ಯಾಯಾಲಯಗಳು ತಮ್ಮ ದಕ್ಷ ಕಾರ್ಯಕ್ಕೆ ನಿರ್ಣಾಯಕ ನ್ಯಾಯಾಧೀಶರ ಕೊರತೆಯನ್ನು ಎದುರಿಸುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಪ್ರಧಾನಿ ನರೇಂದ್ರ … Continued

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ: ಇಂದಿನಿಂದ ಆರಂಭ, ಇಲಾಖಾ ಸಚಿವರಿಗೆ ವರ್ಗಾವಣೆ ಹೊಣೆ

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರ ವರ್ಗಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಶೇ.6ರಷ್ಟು ಮೀರದಂತೆ ವರ್ಗಾವಣೆ ಮಾಡಲು ಆದೇಶಿಸಿದೆ. ಅಲ್ಲದೆ, ರಾಜ್ಯ ಸರ್ಕಾರವು ವರ್ಗಾವಣೆಯ ಹೊಣೆಗಾರಿಕೆಯನ್ನು ಆಯಾ ಇಲಾಖಾ ಸಚಿವರಿಗೆ ನೀಡಿ ಆದೇಶಿಸಿದೆ. ಈ ಕುರಿತು ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಸರ್ಕಾರಿ ನೌಕರರ ವರ್ಗಾವಣೆ … Continued

ಸೋಮವಾರವೇ ರಂಜಾನ್ ಹಬ್ಬ ಆಚರಣೆಗೆ ನಿರ್ಧಾರ: ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರದ ಆದೇಶ

ಬೆಂಗಳೂರು: ರಂಜಾನ್ ಹಬ್ಬ ಆಚರಣೆಗೆ ಮೂನ್ ಕಮಿಟಿ ತೀರ್ಮಾನಿಸಿದ್ದು, ಸೋಮವಾರವೇ ರಂಜಾನ್ ಹಬ್ಬ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳವಾರ ಬದಲು ಸೋಮವಾರವೇ ರಂಜಾನ್ ಹಬ್ಬವಿದ್ದು, ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರವೇ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಶಿಷ್ಟಾಚಾರ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. 2022ನೇ ಸಾಲಿನ … Continued

ಗೋರಖನಾಥ ದೇಗುಲ ದಾಳಿ ಆರೋಪಿ ಮುರ್ತಾಜಾ ಅಬ್ಬಾಸಿ 2020ರಲ್ಲಿ ಐಸಿಸ್ ಪ್ರಮಾಣ ವಚನ ಸ್ವೀಕರಿಸಿದ್ದ : ಪೊಲೀಸರು

ಲಕ್ನೋ: ಉತ್ತರ ಪ್ರದೇಶದ ಗೋರಖನಾಥ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿತ ಅಹ್ಮದ್ ಮುರ್ತಾಜಾ ಅಬ್ಬಾಸಿಯ ವಿಚಾರಣೆಯಲ್ಲಿ ಆರೋಪಿಗೆ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಜೊತೆಗಿನ ಸಂಪರ್ಕ ಬಹಿರಂಗವಾಗಿದೆ. ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಕಾರ, ಮುರ್ತಾಜಾ ಅಬ್ಬಾಸಿ ಐಸಿಸ್‌ಗಾಗಿ … Continued

ಐಪಿಎಲ್‌ 2022ರಲ್ಲಿ ಕಳಪೆ ಪ್ರದರ್ಶನ: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ರವೀಂದ್ರ ಜಡೇಜಾ ದಿಢೀರ್‌ ರಾಜೀನಾಮೆ, ಎಂಎಸ್ ಧೋನಿ ಪುನಃ ನಾಯಕ

ಈ ಋತುವಿನ IPL 2022 ಕಳಪೆ ಆರಂಭದ ನಂತರ ನಾಯಕ ಸ್ಥಾನದಿಂದ ಆಲ್ ರೌಂಡರ್ ರವೀಂದ್ರ ಜಡೇಜಾ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಎಂ.ಎಸ್‌. ಧೋನಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಘೋಷಿಸಿದೆ. ಎಂ.ಎಸ್‌. ಧೋನಿ ಋತುವಿನ ಆರಂಭದ ಮೊದಲು ನಾಯಕತ್ವದ ಜವಾಬ್ದಾರಿಯಿಂದ ಹೊರನಡೆದಿದ್ದರು ಆದರೆ ಜಡೇಜಾ ತಮ್ಮ ಆಟದ ಮೇಲೆ ಹೆಚ್ಚು ಗಮನಹರಿಸಲು … Continued

ಕುಮಟಾ ಡಾ.ಬಾಳಿಗಾ ವಾಣಿಜ್ಯ ಕಾಲೇಜ್ ಮುಖ್ಯ ಗ್ರಂಥಪಾಲಕ‌ ಡಾ. ಶಿವಾನಂದ ಬುಳ್ಳಾಗೆ ಸೋಶಿಯಲ್ ಸೈಂಟಿಸ್ಟ್ ಪ್ರಶಸ್ತಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಡಾ. ಶಿವಾನಂದ ಬುಳ್ಳಾ ಅವರ ಪಿ.ಎಚ್.ಡಿ ಪ್ರಬಂಧ ಹಾಗೂ ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಅಮೂಲ್ಯ ವೈಜ್ಞಾನಿಕ ಕೊಡುಗೆಗಾಗಿ, ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ “ಗ್ರಾಬ್ಸ್ ಬೆಸ್ಟ್ ಸೋಶಿಯಲ್ ಸೈಂಟಿಸ್ಟ್ ಪ್ರಶಸ್ತಿ” ನೀಡಲಾಗಿದೆ. ಚೆನ್ನೈನ ಆನಂದಭವನ ಸಭಾಂಗಣದಲ್ಲಿ ಅಸೋಸಿಯೇಶನ್ ಆಫ್ … Continued

ಸಭಾಪತಿ ಬಸವರಾಜ ಹೊರಟ್ಟಿ ಪತ್ರಕ್ಕೆ ಸ್ಪಂದಿಸಿದ ಸಿಎಂ: ಅನುದಾನಿತ ಶಾಲಾ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು

ಹುಬ್ಬಳ್ಳಿ: ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ನೀಡುವ ಶಿಶುಪಾಲನಾ ರಜೆಯ ಅನುಕೂಲತೆಗಳನ್ನು ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ ವಿಸ್ತರಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅನುದಾನಿತ ಮಹಿಳಾ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸುವಂತೆ ಆದೇಶ … Continued

ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರದ ಒಪ್ಪಿಗೆ: ಸಿಎಂ ಬೊಮ್ಮಾಯಿ

ನವದೆಹಲಿ: ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದೆ. ಈ ಮೂಲಕ ರಾಗಿ ಬೆಳೆಗಾರರ ದೊಡ್ಡ ಸಂಕಷ್ಟ ಬಗೆಹರಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು, ಶನಿವಾರ ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಐದಾರು … Continued

ನಮ್ಮ ಹೃದಯವೇ ರಾಮಮಂದಿರ ಎಂದು ಅರಿತುಕೊಳ್ಳುವುದೇ ಬದುಕಿನ ಧರ್ಮ ; ರಾಘವೇಶ್ವರ ಶ್ರೀ

ಕುಮಟಾ: ಪ್ರತಿಯೊಬ್ಬರ ಅಂತರಾಳದಲ್ಲಿ ಆತ್ಮರೂಪದ ರಾಮನಿದ್ದಾನೆ. ನಮ್ಮ ಹೃದಯವೇ ರಾಮಮಂದಿರ ಎಂಬ ಸತ್ಯವನ್ನು ಅರಿತುಕೊಳ್ಳುವುದೇ ಬದುಕಿನ ಧರ್ಮ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ನಾಲ್ಕನೇ ದಿನದ ಪ್ರವಚನ ನೀಡಿದ ಅವರು, … Continued