ಹಾವೇರಿ: ಎರಡು ಕಾರುಗಳ ಡಿಕ್ಕಿ – ನಾಲ್ವರು ಸಾವು, ಮೂವರಿಗೆ ಗಾಯ

ಹಾವೇರಿ: ಕಾರೊಂದರ ಟೈರ್ ಸಿಡಿದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ಗುಜರಾತ್ ಮೂಲದ ದಿನೇಶ್ ಬಾಯಿ(38), ಲತೀಶ್ ಬಾಯಿ(37), ಸುರೇಶ್ ಬಾಯಿ(39) ಹಾಗೂ ಕೇರಳ ಮೂಲದ ಸಾಹಲ್(37) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು … Continued

ಮದೀನಾದ ಮಸ್ಜಿದ್ ಅಲ್-ನಬಾವಿಯಲ್ಲಿ ಪಾಕ್‌ ಪ್ರಧಾನಿ ನಿಯೋಗಕ್ಕೆ ಎದುರಾಯ್ತು ‘ಚೋರ್, ಚೋರ್’ ಘೋಷಣೆ | ವೀಕ್ಷಿಸಿ

ನವದೆಹಲಿ: ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿ ಅಲ್-ನಬವಿಯನ್ನು ಪ್ರವೇಶಿಸುತ್ತಿದ್ದಂತೆ  ಚೋರ್‌ ಚೋರ್‌ “ಎಂದು ಘೋಷಣೆಗಳನ್ನು ಕೂಗಿದರು. ನಿಯೋಗದ ಸುತ್ತ ನೆರೆದಿದ್ದ ಜನರು “ಚೋರ್, ಚೋರ್ (ಕಳ್ಳ)” ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಪಾಕಿಸ್ತಾನದ ವಿವಿಧ ಸುದ್ದಿ ವೇದಿಕೆಗಳು ಪ್ರಸಾರ ಮಾಡುತ್ತಿವೆ ಮತ್ತು … Continued

ಆಸ್ತಿ ಮರೆಮಾಚಿದ್ದಕ್ಕಾಗಿ ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಬೋರಿಸ್ ಬೆಕರ್‌ಗೆ ಎರಡೂವರೆ ವರ್ಷ ಜೈಲು ಶಿಕ್ಷೆ

ಲಂಡನ್‌: ಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್ ಅವರು 2017 ರ ದಿವಾಳಿತನಕ್ಕೆ ಸಂಬಂಧಿಸಿದ ಆರೋಪಗಳಲ್ಲಿ ಬ್ರಿಟಿಷ್ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಕಂಡುಬಂದ ನಂತರ ಶುಕ್ರವಾರ ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರು. ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, 54 ವರ್ಷದ ಅವರು ತಮ್ಮ ವ್ಯವಹಾರ ಖಾತೆಯಿಂದ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ ಕಾರಣ … Continued

ಎಲ್ಲಿಂದಾದರೂ ಕೆಲಸ ಮಾಡಿ…ಈ ಕಂಪನಿಯ ಉದ್ಯೋಗಿಗಳು 170 ದೇಶಗಳಿಗೆ ಪ್ರವಾಸ ಹೋಗುತ್ತಲೇ ಕೆಲಸ ಮಾಡಬಹುದು…!

ನವದೆಹಲಿ: ಏರ್‌ಬಿಎನ್‌ಬಿ (Airbnb) ತನ್ನ ಉದ್ಯೋಗಿಗಳಿಗೆ ಅವರ ಆದ್ಯತೆಗೆ ಅನುಗುಣವಾಗಿ ಕಚೇರಿ, ಮನೆ ಅಥವಾ ದೇಶದ ಯಾವುದೇ ಭಾಗದಿಂದ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ ನೀಡುವುದಾಗಿ ಘೋಷಿಸಿದೆ. ಉದ್ಯೋಗಿಗಳು ತಮ್ಮ ಕೆಲಸದ ವಾತಾವರಣವನ್ನು ಮುಕ್ತವಾಗಿ ನಿರ್ಧರಿಸಬಹುದು ಮತ್ತು ಅವರ ನಿರ್ಧಾರವು ಅವರ ಸಂಬಳದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಂಸ್ಥೆ … Continued

ರಸ್ತೆಗೆ ಅಡ್ಡನಿಂತ ಆನೆ…ಅಂಬುಲೆನ್ಸ್‌ನಲ್ಲೇ ಆಯ್ತು ಮಹಿಳೆಗೆ ಹೆರಿಗೆ…!

ಈರೋಡ್: ಘಾಟ್ ರಸ್ತೆಯಲ್ಲಿ ಕಾಡು ಆನೆಯೊಂದು ಅಂಬುಲೆನ್ಸ್‌ಗೆ ಹೋಗಲು ಅಡ್ಡಿಯಾದ ಕಾರಣ 24 ವರ್ಷದ ಆದಿವಾಸಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ತಮಿಳುನಾಡಿನ ಎರೋಡ್‌ ಜಿಲ್ಲೆಯಲ್ಲಿ ನಡೆದಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಗುರುವಾರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು ಮತ್ತು ಆಕೆಯ ಸಂಬಂಧಿಕರು ಅವಳನ್ನು ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದರು. ಆದರೆ ಅದೇವೇಳೆ ಕಾಡಿನಿಂದ … Continued

ಆಸೆ ಇದು ರಜೋಗುಣ-ಭಯ, ಚಿಂತೆ, ದ್ವೇಷ, ಕ್ರೋಧ ಎಲ್ಲವೂ ಆಸೆಯ ಸುತ್ತಲೇ ಜನ್ಮ ತಳೆಯುತ್ತವೆ: : ರಾಘವೇಶ್ವರ ಶ್ರೀ

ಕುಮಟಾ: ಆಸೆಯ ಪಾಶದಿಂದ ಮುಕ್ತಿ ಪಡೆದರೆ ಮಾತ್ರ ಮನಃಶಾಂತಿ ಸಾಧ್ಯ. ಆಸೆಯ ಪಾಶದಿಂದ ಏನು ಅನಾಹುತವಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ ಎಂದು ರಾಂಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೂರನೇ ದಿನದ ಪ್ರವಚನದಲ್ಲಿ … Continued

ಓದು ಎಂದು ಬುದ್ಧಿಮಾತು ಹೇಳಿದ್ದಕ್ಕೆ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ

ಹಾವೇರಿ: ಓದು ಎಂದು ಬುದ್ಧಿಮಾತು ಹೇಳಿದ್ದಕ್ಕೆ ನೊಂದುಕೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ತಾಲೂಕಿನ ಗುತ್ತಲ ಸಮೀಪದ ಹೊಸಮೇಲ್ಮುರಿಯದಲ್ಲಿ ಎಂಬಲ್ಲಿ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಫಕ್ಕಿರೇಶ ಅರಳಿ (18) ಎಂದು ಗುರುತಿಸಲಾಗಿದೆ. ಗುರುವಾರ ಪರೀಕ್ಷೆ ಬರೆದಿದ್ದ ಈತ ಆ ದಿನ ಓದದೇ ಕಾಲಹರಣ ಮಾಡುತ್ತಿದ್ದುದರಿಂದ ಓದುವಂತೆ ಪೋಷಕರು ಆತನಿಗೆ … Continued

2 ವರ್ಷಗಳ ನಂತರ ಕೆಲವು ಭಾರತೀಯ ವಿದ್ಯಾರ್ಥಿಗಳಿಗೆ ಮರಳಲು ಚೀನಾ ಅನುಮತಿ

ಬೀಜಿಂಗ್: ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ಬೀಜಿಂಗ್ ವಿಧಿಸಿರುವ ವೀಸಾ ಮತ್ತು ವಿಮಾನ ನಿರ್ಬಂಧಗಳ ನಂತರ ಎರಡು ವರ್ಷಗಳಿಂದ ಭಾರತದಲ್ಲಿ ಸಿಲುಕಿರುವ “ಕೆಲವು” ಭಾರತೀಯ ವಿದ್ಯಾರ್ಥಿಗಳಿಗೆ ಮರಳಲು ಅನುಮತಿ ನೀಡುವ ಯೋಜನೆಯನ್ನು ಚೀನಾ ಶುಕ್ರವಾರ ಪ್ರಕಟಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಬೀಜಿಂಗ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಚೀನಾದಲ್ಲಿ ಅಧ್ಯಯನಕ್ಕಾಗಿ ಚೀನಾಕ್ಕೆ ಮರಳುವ ಭಾರತೀಯ ವಿದ್ಯಾರ್ಥಿಗಳ … Continued

ಶಿವಸೇನಾ ಸಂಸದ ರಾಹುಲ್ ಶೆವಾಲೆ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು

ಮುಂಬೈ: ಶಿವಸೇನೆಯ ಲೋಕಸಭಾ ಸಂಸದ ರಾಹುಲ್ ಶೆವಾಲೆ ವಿರುದ್ಧ 26 ವರ್ಷದ ಮಹಿಳೆಯೊಬ್ಬರು ಗುರುವಾರ ಅತ್ಯಾಚಾರ ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಸಂಸದರು ಆರೋಪವನ್ನು ನಿರಾಕರಿಸಿದ್ದಾರೆ. ಮುಂಬೈನ ಉಪನಗರದಲ್ಲಿರುವ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಶೆವಾಲೆ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ … Continued

ಮಹಿಳಾ ಪೊಲೀಸ್‌ ಮೇಲಿನ ಹಲ್ಲೆ ಪ್ರಕರಣ: ಜಿಗ್ನೇಶ್ ಮೇವಾನಿಗೆ ಜಾಮೀನು

ಬಾರ್ಪೇಟಾ: ಪೊಲೀಸ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯವು ಜಾಮೀನು ನೀಡಿದೆ. ಗುವಾಹತಿಯಿಂದ ಕೊಕ್ರಜಾರ್‌ಗೆ ಪೊಲೀಸ್ ಪೇದೆಯೊಬ್ಬರು ಕರೆತರುತ್ತಿದ್ದಾಗ ಪೊಲೀಸ್ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದ ನಂತರ ಶುಕ್ರವಾರ ಈ ಆದೇಶ … Continued