ರಷ್ಯಾ ಸೈನಿಕರಿಂದ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಿರುವ ಉಕ್ರೇನಿಯನ್ ಯುವತಿಯರು: ಅಧಿಕಾರಿ

ಕೀವ್‌ (ಉಕ್ರೇನ್)‌ : ರಾಜಧಾನಿ ಕೀವ್‌ನಿಂದ ಸುಮಾರು 50 ಮೈಲುಗಳಷ್ಟು ದೂರದಲ್ಲಿರುವ ಉಕ್ರೇನಿಯನ್ ಪಟ್ಟಣವಾದ ಇವಾನ್‌ಕಿವ್‌ನಲ್ಲಿ, ಯುವತಿಯರು ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ..! ತಾವು ಆಕರ್ಷಕವಾಗಿ ಕಾಣದಿರುವಂತೆ ಮಾಡಲು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಉಪ ಮೇಯರ್ ಮರಿನಾ ಬೆಸ್ಚಾಸ್ಟ್ನಾ ಹೇಳಿದ್ದಾರೆ. ಮಾರ್ಚ್ … Continued

ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡು ದಿನ ಮಳೆ ಸಾಧ್ಯತೆ :ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನಗಳು ಮಳೆಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಏ.11ರವರೆಗೂ ಮಳೆ ಬೀಳುವ ಸಂಭವವಿದ್ದು, … Continued

ಸಂತಾನ ಪಡೆಯಲು ಅಪರಾಧಿಗೆ 15 ದಿನಗಳ ಪೆರೋಲ್ ನೀಡಿದ ರಾಜಸ್ಥಾನ ಹೈಕೋರ್ಟ್

ಜೋಧ್‌ಪುರ: ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಹೆಂಡತಿಯ ಭಾವನಾತ್ಮಕ ಅಗತ್ಯಗಳನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿದ ರಾಜಸ್ಥಾನ ಹೈಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಕೆಯ ಪತಿಗೆ 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಫರ್ಜಾಂದ್ ಅಲಿ ಮತ್ತು ಸಂದೀಪ್ ಮೆಹ್ತಾ ಅವರ ವಿಭಾಗೀಯ ಪೀಠವು ವಿವಿಧ ಧಾರ್ಮಿಕ ಗ್ರಂಥಗಳು ಮತ್ತು ಸಾಮಾಜಿಕ-ಮಾನವೀಯ ಅಂಶಗಳನ್ನು ಉಲ್ಲೇಖಿಸಿ ಮತ್ತು ದಂಪತಿಗೆ … Continued

ಕೋಲಾರ: ಮುಳಬಾಗಿಲಿನಲ್ಲಿ ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ, ಪೊಲೀಸರಿಂದ ಲಾಠಿ ಪ್ರಹಾರ

ಕೋಲಾರ: ಶ್ರೀರಾಮ ಶೋಭಾಯಾತ್ರೆಯ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್ ಹಿಂದೂ ಶೋಭಾಯಾತ್ರೆ ಮತ್ತು ಶ್ರೀರಾಮ ಪಟ್ಟಾಭಿಷೇಕ, ಶ್ರೀರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶೋಭಾಯಾತ್ರೆ ಹಾಗೂ ಬೃಹತ್ ಶ್ರೀರಾಮ ಮೂರ್ತಿ ಮೆರವಣಿಗೆ … Continued

ಪಾಕಿಸ್ತಾನವು ಭಾರತದಿಂದ ಸ್ವಾಭಿಮಾನ ಕಲಿಯಬೇಕು, ಯಾವುದೇ ಸೂಪರ್ ಪವರ್ ದೆಹಲಿಗೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ: ಭಾರತ ಹಾಡಿಹೊಗಳಿದ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಯಾವುದೇ ಸೂಪರ್ ಪವರ್ ರಾಷ್ಟ್ರವೂ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಜನರ ಹಿತಾಸಕ್ತಿಗಳನ್ನು ಉಲ್ಲೇಖಿಸಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾವುದೇ ದೇಶದ ಪರವಾಗಿ ನಿಲ್ಲಲು ಭಾರತದ ನಿರಾಕರಿಸಿದಾಗಲೂ ಯಾವುದೇ ದೇಶವು ಭಾರತದ ವಿರುದ್ಧ ನಿಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಯುರೋಪಿಯನ್‌ ಒಕ್ಕೂಟದ ರಾಜತಾಂತ್ರಿಕರು ಪಾಕಿಸ್ತಾನ ರಷ್ಯಾದ ವಿರುದ್ಧ … Continued

ಸಿದ್ದರಾಮಯ್ಯ, ಕುಮಾರಸ್ವಾಮಿ, ಸಾಹಿತಿ ಕುಂವೀ ಸೇರಿ 61 ಜನರಿಗೆ ಕೊಲೆ ಬೆದರಿಕೆ ಪತ್ರ

ಹೊಸಪೇಟೆ(ವಿಜಯನಗರ): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ, ಸಾಹಿತಿ ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ 61 ಮಂದಿಗೆ ಕೊಲೆ ಬೆದರಿಕೆ ಪತ್ರ ಬರೆಯಲಾಗಿದೆ. ಎರಡು ಪುಟಗಳ ಪತ್ರ ಬರೆದಿರುವ ಹೆಸರು ಮತ್ತು ವಿಳಾಸವಿಲ್ಲದ ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ’61ಕ್ಕೂ ಹೆಚ್ಚು ಮಂದಿ ಸಾಹಿತಿಗಳು, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಸರ್ವನಾಶದ ಹಾದಿಯಲ್ಲಿ ಇದ್ದೀರಿ, ನಿಮ್ಮೆಲ್ಲರ ಸಾವು … Continued

ಕೋವಿಶೀಲ್ಡ್ ತೆಗೆದುಕೊಂಡ ನಂತರ ಕೇರಳದ ಸ್ನಾತಕೋತ್ತರ ವಿದ್ಯಾರ್ಥಿ ಸಾವು; ನ್ಯಾಯ ಕೋರಿ ಹೈಕೋರ್ಟ್ ಮೊರೆ ಹೋದ ಪೋಷಕರು

ಕೋವಿಶೀಲ್ಡ್ ತೆಗೆದುಕೊಂಡ ನಂತರ ಕೇರಳದ ಸ್ನಾತಕೋತ್ತರ ವಿದ್ಯಾರ್ಥಿ ಸಾವು; ನ್ಯಾಯ ಕೋರಿ ಹೈಕೋರ್ಟ್ ಮೊರೆ ಹೋದ ಪೋಷಕರು ಕೊಚ್ಚಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಯನ್ನು ಕಡ್ಡಾಯವಾಗಿ ನೀಡಿದ್ದರಿಂದ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಸ್ನಾತಕೋತ್ತರ ವಿದ್ಯಾರ್ಥಿಯ ಪೋಷಕರು ಶುಕ್ರವಾರ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ತಮ್ಮ ಒಬ್ಬಳೇ ಮಗಳ ಸಾವಿಗೆ … Continued

ವಿದೇಶಿ ದೇಣಿಗೆ ಸ್ವೀಕಾರ ಪರಮ ಹಕ್ಕಲ್ಲ: ಎಫ್‌ಸಿಆರ್‌ಎ ತಿದ್ದುಪಡಿ ಕಾಯಿದೆ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸುಪ್ರೀಂ ಕೋರ್ಟ್‌ ಶುಕ್ರವಾರ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಕಾಯಿದೆ – 2020ರ (ಎಫ್‌ಆರ್‌ಸಿಎ) ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಕಾಯಿದೆಯು ಸಂಘ-ಸಂಸ್ಥೆಗಳ ವಿದೇಶಿ ಕೊಡುಗೆಯ ನಿರ್ವಹಣೆಯ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ. ದೇಶದಲ್ಲಿರುವ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಬಳಸುತ್ತಿರುವುದಕ್ಕೆ ನಿರ್ಬಂಧ ವಿಧಿಸಿರುವ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯಿದೆ 2020 (ಎಫ್‌ಸಿಆರ್‌ಎ) ಅನ್ನು ನ್ಯಾಯಮೂರ್ತಿಗಳಾದ ಎ … Continued

ಆಕ್ಸಿಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಗಳಿಗೆ ವಿತ್ತೀಯ ದಂಡ ವಿಧಿಸಿದ ಆರ್‌ಬಿಐ

ಮುಂಬೈ: ಎಪ್ರಿಲ್ 8 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI), ನಿಯಂತ್ರಕ ಅನುಸರಣೆಯಲ್ಲಿನ ಲೋಪಗಳಿಗಾಗಿ ಆಕ್ಸಿಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳಿಗೆ ಕ್ರಮವಾಗಿ 93 ಲಕ್ಷ ರೂ.ಗಳು ಮತ್ತು 90 ಲಕ್ಷ ರೂ.ಗಳ ವಿತ್ತೀಯ ದಂಡವನ್ನು ವಿಧಿಸಿದೆ. ಬ್ಯಾಂಕಿಂಗ್ ಸೇವೆಗಳಾದ ಸಾಲಗಳು, ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ಗಳನ್ನು ನಿರ್ವಹಿಸದಿದ್ದಲ್ಲಿ ದಂಡ ಶುಲ್ಕ ವಿಧಿಸುವುದು, ನಿಮ್ಮ … Continued

ಮೇ ಮೊದಲ ವಾರದಲ್ಲಿ ಹುಬ್ಬಳ್ಳಿಯಿಂದ ಮಂಗಳೂರು, ಮೈಸೂರಿಗೆ  ವಿಮಾನ ಸೇವೆ ಆರಂಭ: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ವಿಮಾನ ಸೇವೆ ಮೇ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಇಂಡಿಗೋ ಸಂಸ್ಥೆ ಮೇ 1ರಿಂದ ಮಂಗಳೂರಿಗೆ ವಿಮಾನ ಸಂಚಾರ ಆರಂಭಿಸಲಿದೆ ಹಾಗೂ ವಾರದಲ್ಲಿ 4 ದಿನ ಹುಬ್ಬಳ್ಳಿಯಿಂದ ಮಂಗಳೂರಿಗೆ ಸಂಚಾರ ಮಾಡಲಿದೆ. ಮತ್ತು ಮೇ 3ರಿಂದ ವಾರದಲ್ಲಿ 3 ದಿನ … Continued