ಮೈಸೂರು-ಧಾರವಾಡ ರೈಲಿನಲ್ಲಿ ಮಧ್ಯರಾತ್ರಿ  ಕಾಣಿಸಿಕೊಂಡ ಬೆಂಕಿ

ಮಂಡ್ಯ: ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಕೂದಲೆಳೆ ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ. ರೈಲು ರಾತ್ರಿ 10:30ಕ್ಕೆ ಮೈಸೂರಿನಿಂದ ಧಾರವಾಡಕ್ಕೆ ತೆರಳುತ್ತಿತ್ತು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಬಳಿ ರಾತ್ರಿ 12 ಗಂಟೆ ಸುಮಾರಿಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣವೇ ಚಾಲಕ ರೈಲನ್ನು ನಿಲ್ಲಿಸಿದ್ದರಿಂದ ಅನಾಹುತ … Continued

ನಾಯಕತ್ವ ಬದಲಾವಣೆ, ಹೊಸ ಮುಖಗಳಿಗೆ ಮನ್ನಣೆಯೇ ಬಿಜೆಪಿಯ ಶಕ್ತಿ, : ಬಿಜೆಪಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯ್ತು ಬಿ.ಎಲ್‌ ಸಂತೋಷ್ ಮಾತು

ಮೈಸೂರು: ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ. ಈ ಪ್ರಯೋಗ ಗುಜರಾತ್‍ನಲ್ಲೂ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಹಾಗೂ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ … Continued

ಪಿಎಸ್‌ಐ ನೇಮಕಾತಿ ಅಕ್ರಮ: ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳ ಬಂಧನ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 12 ಅಭ್ಯರ್ಥಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಡಿಎಸ್​ಪಿ ನೀಡಿದ ದೂರಿನನ್ವಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಕೋರಮಂಗಲದ ನಿವಾಸಕ್ಕೆ ಹಾಜರುಪಡಿಸಿ, 10 ದಿನ ವಶಕ್ಕೆ ಪಡೆದಿದ್ದಾರೆ. ಬಂಧಿತರು 2020-21ನೇ ಸಾಲಿನಲ್ಲಿ ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ತನಿಖೆಯ ವೇಳೆ … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ 102 ರೂ.ಹೆಚ್ಚಳ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMC) ತಕ್ಷಣವೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ನ ಬೆಲೆಯನ್ನು ಸುಮಾರು ₹102 ರಷ್ಟು ಹೆಚ್ಚಿಸಿವೆ. ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ 2355.50 ರೂ. ಆಗಿದೆ, ಹಿಂದಿನ ಮಟ್ಟಕ್ಕೆ ಪ್ರತಿ ಸಿಲಿಂಡರ್‌ಗೆ ₹2253. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ … Continued

ಮೇ 2ರಿಂದ ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ; 25 ಕಾರ್ಯಕ್ರಮ, 8 ವಿಶ್ವ ನಾಯಕರ ಜೊತೆ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಈ ವರ್ಷದ ಮೊದಲ ವಿದೇಶಿ ಪ್ರವಾಸ ಸೋಮವಾರದಿಂದ (ಮೇ 2) ಆರಂಭಗೊಳ್ಳಲಿದ್ದು, 65 ತಾಸುಗಳ ಈ ಪ್ರವಾಸದಲ್ಲಿ ಮೂರು ದೇಶಗಳಿಗೆ ಭೇಟಿ ನೀಡಲಿದ್ದಾರೆ ಹಾಗೂ 25 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿದೇಶಿ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಈ ಪ್ರವಾಸವನ್ನೂ ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಲು … Continued

ಮೋದಿ ಕುರಿತ ಜನಾಭಿಪ್ರಾಯ ತಿರುಚುವ ಪ್ರಯತ್ನ ಬೇಡ: ಟೀಕಾತ್ಮಕ ಪತ್ರಕ್ಕೆ ಪ್ರತಿಯಾಗಿ ಬಹಿರಂಗ ಪತ್ರದಲ್ಲಿ ಪ್ರಧಾನಿ ಸಮರ್ಥಿಸಿಕೊಂಡ ಮಾಜಿ ನ್ಯಾಯಾಧೀಶರು-ಅಧಿಕಾರಿಗಳು

ನವದೆಹಲಿ: ದ್ವೇಷ ರಾಜಕಾರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿವೃತ್ತ ಅಧಿಕಾರಿಗಳ ಗುಂಪು ಬರೆದಿದ್ದ ಪತ್ರಕ್ಕೆ ನಿವೃತ್ತ ಅಧಿಕಾರಿಗಳ ಮತ್ತೊಂದು ತಂಡವೊಂದು ತಿರುಗೇಟು ನೀಡಿದ್ದು, ಜನಾಭಿಪ್ರಾಯವನ್ನು ತಿರುಚುವ ಪ್ರಯತ್ನವನ್ನುಕೆಲವರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದೆ. ಮೋದಿ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅದರ ಬಗ್ಗೆ ಜನರ ನಡುವೆ ಗೌರವವಿದೆ. ಆ … Continued