ರಾಹುಲ್ ಗಾಂಧಿ ಭೇಟಿಗೆ ಅನುಮತಿ ನಿರಾಕರಿಸಿದ ಉಸ್ಮಾನಿಯಾ ವಿಶ್ವವಿದ್ಯಾಲಯ: ಕಾಂಗ್ರೆಸ್

ಹೈದರಾಬಾದ್: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಯಾಂಪಸ್‌ಗೆ ಭೇಟಿ ನೀಡಲು ಉಸ್ಮಾನಿಯಾ ವಿಶ್ವವಿದ್ಯಾಲಯದ ಆಡಳಿತವು ‘ಅನಧಿಕೃತವಾಗಿ’ ಅನುಮತಿ ನಿರಾಕರಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ಅದರಲ್ಲಿ ರಾಜ್ಯ ಸರ್ಕಾರ ಶಾಮೀಲಾಗಿದೆ ಎಂದು ಶನಿವಾರ ಆರೋಪಿಸಿದ್ದಾರೆ. ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಮುಖಂಡರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ಕಾಲೇಜು ಎದುರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ … Continued

ಆಸ್ಪತ್ರೆಗೆ ದಾಖಲಾಗಿದ್ದ ನಟ ಧರ್ಮೇಂದ್ರ ಈಗ ವಾಪಸ್‌ ಮನೆಗೆ

ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಧರ್ಮೇಂದ್ರ ಮನೆಗೆ ಮರಳಿದ್ದಾರೆ. ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಚಿತ್ರೀಕರಣದಲ್ಲಿದ್ದ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ ಮತ್ತು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಧರ್ಮೇಂದ್ರ ಭಾನುವಾರ ಖಚಿತಪಡಿಸಿದ್ದಾರೆ. … Continued

ಮೇ 4ರ ನಂತರ ಮಹಾರಾಷ್ಟ್ರದ ಶಕ್ತಿ ನಿಮಗೆ ತೋರಿಸ್ತೇನೆ: ಧ್ವನಿವರ್ಧಕದ ಗಡುವು ಸಮೀಪಿಸಿದಂತೆ ಗುಡುಗಿದ ರಾಜ್ ಠಾಕ್ರೆ

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಭಾನುವಾರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ, ಮೇ 4 ರೊಳಗೆ ಮಹಾರಾಷ್ಟ್ರದ ಮಸೀದಿಗಳಲ್ಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ, ಹನುಮಾನ್ ಚಾಲೀಸಾವನ್ನು ಮುಂದೆ ‘ಡಬಲ್ ಪವರ್’ ನಲ್ಲಿ ನುಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮೇ 3 ರಂದು ಈದ್ ಇದೆ, ಹಬ್ಬಕ್ಕೆ ತೊಂದರೆ ಮಾಡಲು … Continued

ಸ್ವಮೂತ್ರ ಪ್ರತಿದಿನ ಕುಡಿಯುವ ಬ್ರಿಟನ್‌ ವ್ಯಕ್ತಿ… ಇದು 10 ವರ್ಷ ಚಿಕ್ಕವನಾಗಿ ಕಾಣುವಂತೆ ಮಾಡಿದೆಯಂತೆ…!

ಇಂಗ್ಲೆಂಡಿನಲ್ಲಿ 34 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು, ಪ್ರತಿದಿನ ತನ್ನದೇ ಆದ ಮೂತ್ರವನ್ನು ಕುಡಿಯುತ್ತಾನೆ, ವಿಲಕ್ಷಣ ಅಭ್ಯಾಸವು ತನ್ನ ಖಿನ್ನತೆಯನ್ನು “ಗುಣಪಡಿಸಿದೆ” ಮತ್ತು ತನ್ನ ನೈಜ ವಯಸ್ಸಿಗಿಂತ 10 ವರ್ಷ ಚಿಕ್ಕವನಾಗಿ ಕಾಣುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಹ್ಯಾಂಪ್‌ಶೈರ್‌ನ ಹ್ಯಾರಿ ಮಟಾಡೀನ್ 2016 ರಲ್ಲಿ ತನ್ನ ಸ್ವಂತ ಮೂತ್ರವನ್ನು ಸೇವಿಸಲು ಪ್ರಾರಂಭಿಸಿದರು. ಏಕೆಂದರೆ … Continued

ಮಿಜೋರಾಂನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ: ನಾಲ್ವರ ಬಂಧನ

ಐಜ್ವಾಲ್ (ಮಿಜೋರಾಂ) : ಅಸ್ಸಾಂ ರೈಫಲ್ಸ್ ಭಾನುವಾರ ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ 3,000 ಕೆಜಿ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ ಮತ್ತು ಈ ಸಂಬಂಧ ನಾಲ್ವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. . ಕಳೆದ ಕೆಲವು ವರ್ಷಗಳಲ್ಲಿ ನಡೆದ ಅತಿದೊಡ್ಡ ಶಸ್ತ್ರಾಸ್ತ್ರಗಳ ವಶ ಎಂದು ಹೇಳಲಾಗಿದೆ. ಸುಳಿವಿನ ಮೇರೆಗೆ … Continued

ಭಾರತೀಯ ಮೂಲದ ನಂದ ಮುಲ್ಚಂದಾನಿ ಅಮೆರಿಕದ ಸಿಐಎಯ ಮೊದಲ ಮುಖ್ಯ ತಾಂತ್ರಿಕ ಅಧಿಕಾರಿ

ನವದೆಹಲಿ: ಭಾರತೀಯ ಮೂಲದ ವ್ಯಕ್ತಿ ನಂದ ಮುಲ್ಚಂದಾನಿ ಅವರು ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆಯ (CIA) ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಮುಲ್ಚಂದಾನಿ ದೆಹಲಿಯ ಬ್ಲೂಬೆಲ್ಸ್ ಸ್ಕೂಲ್ ಇಂಟರ್‌ನ್ಯಾಶನಲ್‌ನಲ್ಲಿ 1979 ಮತ್ತು 1987 ರ ನಡುವೆ ಅಧ್ಯಯನ ಮಾಡಿದವರು. ಸಿಐಎ ನಿರ್ದೇಶಕ ವಿಲಿಯಂ ಜೆ ಬರ್ನ್ಸ್ ಅವರು ಈ ಘೋಷಣೆ ಮಾಡಿದ್ದಾರೆ. CIA ಪ್ರಕಾರ, … Continued

ಮೂರೂರು ಪ್ರಗತಿ ವಿದ್ಯಾಲಯದಲ್ಲಿ ‘ಸಾಗರಸೇತು’ ರಾಮಕಥೆ ಮಂಗಲ-ಸಜ್ಜನರ ಸಿಟ್ಟು ಲೋಕಕ್ಕೆ ಅಪಾಯಕಾರಿ; ರಾಘವೇಶ್ವರ ಶ್ರೀ

ಕುಮಟಾ: ಸಜ್ಜನರ ಸಮಾಧಾನ, ಕ್ಷಮೆ, ಸರಳತೆಯನ್ನು ಎಂದೂ ಅವರ ಅಸಾಮರ್ಥ್ಯ ದೌರ್ಲಲ್ಯ ಎಂದು ಭಾವಿಸಬಾರದು; ಏಕೆಂದರೆ ಅವರ ಸಿಟ್ಟು ಲೋಕದ ಪಾಲಿಗೆ ಅಷ್ಟೇ ಕಂಟಕ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ಸಾಗರ ಸೇತು’ ರಾಮಕಥಾ ಸರಣಿಯ ಮಂಗಲ ಪ್ರವಚನ ಅನುಗ್ರಹಿಸಿದ ಅವರು, … Continued

24 ಗಂಟೆಯಲ್ಲಿ ಪಾಕ್ ಪ್ರಧಾನಿಗೆ ಎರಡು ಬಾರಿ ಅವಮಾನ: 17 ಭದ್ರತಾ ಸಿಬ್ಬಂದಿ ವಜಾ

ದುಬೈ: ಇತ್ತೀಚೆಗಷ್ಟೇ ಪಾಕಿಸ್ತಾನದ ನೂತನ ಪ್ರಧಾನಿಯಾಗಿರುವ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಅಪಮಾನವಾದ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಕಾರಣದಿಂದ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್-ಇ-ನಬಾವಿಗೆ … Continued

ಹಿಂದೂಸ್ಥಾನೀ ಸಂಗೀತದ ಮೇರು ಗಾಯಕ, ದುರ್ಲಭ ರಾಗಗಳ ನಿಧಿ ಡಾ. ರಾಜಶೇಖರ ಮನ್ಸೂರ ಇನ್ನಿಲ್ಲ

ಧಾರವಾಡ: ಹಿಂದುಸ್ಥಾನಿ ಸಂಗೀತದ ಮೇರು ಗಾಯಕ, ಅಪ್ರಚಲಿತ ರಾಗಗಳನ್ನು ಪ್ರಸ್ತುತಪಡಿಸುವ ದೇಶದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರಾಗಿದ್ದ ಡಾ. ರಾಜಶೇಖರ ಮನ್ಸೂರ ಅವರು ಇಂದು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಡಾ. ರಾಜಶೇಖರ ಮನ್ಸೂರ ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ತಂದೆ ದಿವಂಗತ ಡಾ.ಮಲ್ಲಿಕಾರ್ಜುನ ಮನ್ಸೂರ ಅವರಂತೆಯೇ ಹಿಂದೂಸ್ಥಾನೀ ಸಂಗೀತದ ಜೈಪುರ-ಅತ್ರೌಲಿ ಘರಾಣೆಯ ಅಗ್ರ ಗಾಯಕರಾಗಿದ್ದ ರಾಜಶೇಖರ … Continued

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಪ್ರಮುಖ ಆರೋಪಿ ನೀರಾವರಿ ಇಲಾಖೆ ಅಧಿಕಾರಿ ಸಿಐಡಿಗೆ ಶರಣಾಗತಿ…!

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ 20 ದಿ‌ನಗಳಿಂದ ತಲೆಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿ, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾ ಭಾನುವಾರ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ. ನಗರದ ಐವಾನ್ ಶಾಹಿ‌ ಅತಿಥಿಗೃಹದಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಕೊರಳಿಗೆ ಒಂದು ಬ್ಯಾಗ್ ಹಾಕಿಕೊಂಡು ಮಂಜುನಾಥ ಬಂದಿದ್ದಾರೆ. ಈ ವೇಳೆ ಪಿಎಸ್ಐ ಪರೀಕ್ಷೆ … Continued