ಔರಂಗಾಬಾದ್ ಸಮಾವೇಶದಲ್ಲಿ ಉದ್ರೇಕಕಾರಿ ಭಾಷಣ : ರಾಜ್ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲು

ಔರಂಗಾಬಾದ್: ಔರಂಗಾಬಾದ್ ಪೊಲೀಸರು ಮಂಗಳವಾರ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮೇ 1ರಂದು ಜಿಲ್ಲೆಯಲ್ಲಿ ಭಾಷಣ ಮಾಡಿದ ರ‍್ಯಾಲಿ ಕುರಿತು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಔರಂಗಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ರ್ಯಾಲಿಯ ಸಂಘಟಕರು ಸೇರಿದಂತೆ ಇತರ ಮೂವರನ್ನು ಸಹ ಹೆಸರಿಸಿದ್ದಾರೆ. ರಾಜ್ ಠಾಕ್ರೆ ಅವರ ರ್ಯಾಲಿಗೆ ಪೊಲೀಸರು 16 ಷರತ್ತುಗಳನ್ನು ಹಾಕಿದ್ದರು. … Continued

ಖ್ಯಾತ ತಮಿಳು ನಟ ಧನುಷ್‌ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ: ಮದ್ರಾಸ್ ಹೈಕೋರ್ಟ್‌ನಿಂದ ನಟ ಧನುಷ್‌ಗೆ ಸಮನ್ಸ್

ನಟ ಧನುಷ್ ಅವರನ್ನು ತಮ್ಮ ಮಗ ಎಂದು ಹೇಳಿಕೊಳ್ಳುವ ದಂಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ನಟ ಧನುಷ್ ತಮ್ಮ ಮಗ ಎಂದು ಕಥಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಹೇಳಿದ್ದಾರೆ. ಕೆಲವು ವರ್ಷಗಳಿಂದ ಪ್ರಕರಣ ನಡೆಯುತ್ತಿದ್ದು, ತೀರ್ಪು ಇನ್ನೂ ಬರಬೇಕಿದೆ. ನಟ ಧನುಶ್‌ ಪಿತೃತ್ವ ಪರೀಕ್ಷೆಯ … Continued

ಚಲಿಸುತ್ತಿರುವ ವಿಮಾನದಲ್ಲಿ 37,000 ಅಡಿಗಳಷ್ಟು ಎತ್ತರದಲ್ಲಿ ಮದುವೆಯಾದ ಜೋಡಿ…!

ನ್ಯೂಯಾರ್ಕ್​: ಬಹು ದಿನಗಳ ತಮ್ಮ ಕನಸಿನಂತೆ ಜೋಡಿಯೊಂದು ತಮ್ಮ ಮದುವೆಯನ್ನು ವಿಮಾನದಲ್ಲಿ ಮಾಡಿಕೊಂಡಿದ್ದಾರೆ. ಅಮೆರಿಕದ ಒಕ್ಲಾಹೊಂ ನಗರದ ಈ ಜೋಡಿ ಚಲಿಸುತ್ತಿರುವ ವಿಮಾನದಲ್ಲಿ ವಿವಾಹವಾಗಿದ್ದು, ಇವರ ವಿಶಿಷ್ಟ ಮದುವೆಗೆ ಅನೇಕರು ಸಾಕ್ಷಿಯಾಗಿದ್ದಾರೆ. ಪಾಮ್​ ಪ್ಯಾಟರ್​ಸನ್​ ಮತ್ತು ಜೆರಿಮಿ ಸಾಲ್ಡಾ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಪಾಮ್​ ತನ್ನ ಗೆಳತಿ ಆಸೆಯಂತೆ ತಮ್ಮಿಬ್ಬರ ಮದುವೆ ದಿನವನ್ನು ಶಾಶ್ವತವಾಗಿ … Continued

ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ರಷ್ಯಾ ಅಧ್ಯಕ್ಷ ಪುತಿನ್‌, ತಾತ್ಕಾಲಿಕವಾಗಿ ಅಧಿಕಾರ ಹಸ್ತಾಂತರ: ವರದಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಮತ್ತು ತಾತ್ಕಾಲಿಕವಾಗಿ ಅಧಿಕಾರವನ್ನು ಮಾಜಿ ಫೆಡರಲ್ ಪೊಲೀಸ್ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್ ಅನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ರಷ್ಯಾದ ಸರ್ಕಾರದ ನಿಯಂತ್ರಣವನ್ನು ನಿಕೊಲಾಯ್ ಪಟ್ರುಶೆವ್‌ ಅವರಿಗೆ ವರ್ಗಾಯಿಸಲಾಗುತ್ತದೆ. ಪಟ್ರುಶೆವ್ ರಷ್ಯಾದ ಫೆಡರಲ್ ಪೋಲಿಸ್‌ ಭದ್ರತಾ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಆದರೆ … Continued

ಒಂದೇ ಸ್ಥಳದಲ್ಲಿ ಮೂವರನ್ನು ವಿವಾಹವಾದ ಮಧ್ಯಪ್ರದೇಶದ ಬುಡಕಟ್ಟು ವ್ಯಕ್ತಿ…!

ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್‌ಪುರ ಜಿಲ್ಲೆ ಭಾನುವಾರ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದು, ಗ್ರಾಮದ ಮಾಜಿ ಸರಪಂಚರೊಬ್ಬರು ತಮ್ಮ ಮೂವರು ಲಿವ್‌-ಇನ್ ಪಾರ್ಟನರ್‌ಗಳನ್ನು ಒಂದೇ ಸ್ಥಳದಲ್ಲಿ ವಿವಾಹವಾಗಿ ಸುದ್ದಿಯಾಗಿದ್ದಾರೆ..! 40ರ ಹರೆಯದ ಸಾಮ್ರಾಟ್‌ ಮೌರ್ಯ ಅವರು ತಮ್ಮ ಲಿವ್‌-ಇನ್ ದಂಪತಿಗಳಾದ ನನ್‌ಬಾಯಿ, ಮೇಲಾ ಮತ್ತು ಸಕ್ರಿ ಎಂಬವರನ್ನು ವಿವಾಹವಾದ ಘಟನೆ ನಾನ್‌ಪುರ್ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ … Continued

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬುದು ಕಪೋಲಕಲ್ಪಿತ: ಬಿಜೆಪಿ‌ ರಾಜ್ಯ ಉಸ್ತುವಾರಿ ಅರುಣ ಸಿಂಗ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಎಂಬುದು ಕಪೋಲಕಲ್ಪಿತ. ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿದ್ದಾರೆ. ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಮುಖ್ಯಮಂತ್ರಿ. ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಹೀಗಾಗಿ ಕಾಲ್ಪನಿಕ ಪ್ರಶ್ನೆಗಳಿಗೆ … Continued

ರಾಹುಲ್ ಗಾಂಧಿ ಕಠ್ಮಂಡು ನೈಟ್‌ಕ್ಲಬ್ ಪಾರ್ಟಿ ವೀಡಿಯೊ ಶೇರ್‌ ಮಾಡಿದ ಬಿಜೆಪಿ, ಇದರಲ್ಲಿ ತಪ್ಪೇನಿದೆ ಎಂದ ಕಾಂಗ್ರೆಸ್‌..

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ಲಬ್ ಒಂದರಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ವೀಡಿಯೊ ಹೊರಬಿದ್ದಿದೆ. ದಿನಾಂಕವಿಲ್ಲದ ವೀಡಿಯೊವನ್ನು ಕಠ್ಮಂಡುವಿನ ನೈಟ್‌ಕ್ಲಬ್ LOD- ಲಾರ್ಡ್ಸ್ ಆಫ್ ಡ್ರಿಂಕ್ಸ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಂಬಲಾಗಿದೆ. ರಾಹುಲ್ ಪ್ರಸ್ತುತ ನೇಪಾಳದಲ್ಲಿ ತಮ್ಮ ಪತ್ರಕರ್ತೆ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ನಿನ್ನೆ ಕಠ್ಮಂಡುವಿನ ಮ್ಯಾರಿಯಟ್ ಹೋಟೆಲ್‌ನಲ್ಲಿ … Continued

ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಫ್ಯಾನ್ ಬಿದ್ದು ವಿದ್ಯಾರ್ಥಿನಿಗೆ ಗಾಯ

ಅಮರಾವತಿ (ಆಂಧ್ರಪ್ರದೇಶ): ಸೋಮವಾರ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಸ್ಥಳೀಯ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಸೀಲಿಂಗ್ ಫ್ಯಾನ್ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಗಾಯಗೊಂಡ ಘಟನೆ ನಡೆದಿದೆ. ಮುಖಕ್ಕೆ ಗಾಯವಾಗಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಚಿಕಿತ್ಸೆಯ ನಂತರ, ಅವಳು ಮತ್ತೆ ಪರೀಕ್ಷೆಗೆ ಬರೆದಿದ್ದಾರೆ. ಪರೀಕ್ಷೆಗೆ ಎರಡು ದಿನ ಮೊದಲು ನಿರ್ವಹಣೆ ನಡೆಸಲಾಗಿದೆ ಎಂದು … Continued

ರಾಜ್ಯದಲ್ಲಿ ಮೇ 10ರೊಳಗೆ ಮುಖ್ಯಮಂತ್ರಿಗಳ ಬದಲಾವಣೆ ಆಗಬಹುದು: ಹೊಸ ಬಾಂಬ್‌ ಸಿಡಿಸಿದ ಯತ್ನಾಳ

ವಿಜಯಪುರ: ಮೇ 10ರ ಒಳಗಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇ 10 ರೊಳಗೆ ಮುಖ್ಯಮಂತ್ರಿ ಬದಲಾಗಬಹುದು, ಪರಿಸ್ಥಿತಿ ಅವಲೋಕನ ಮಾಡಲೆಂದು ಅಮಿತ್‌ ಷಾ ಬೆಂಗಳೂರಿಗೆ ಬಂದಿದ್ದಾರೆ. ಅಮಿತ್‌ ಶಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ರಾಜ್ಯ ಹಾಗೂ ಪಕ್ಷದ … Continued

ಭಾರತದ ನಿರುದ್ಯೋಗ ಸಮಸ್ಯೆ ಏಪ್ರಿಲ್‌ನಲ್ಲಿ ಶೇಕಡಾ 7.83ಕ್ಕೆ ಏರಿಕೆ: ಸಿಎಂಐಇ

ನವದೆಹಲಿ: : ಭಾರತದ ನಿರುದ್ಯೋಗ ಸಮಸ್ಯೆಯು ಮಾರ್ಚ್‌ನಲ್ಲಿ 7.60% ರಿಂದ ಏಪ್ರಿಲ್‌ನಲ್ಲಿ 7.83% ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ. ಅಂಕಿ ಅಂಶಗಳ ಪ್ರಕಾರ ನಗರಗಳಲ್ಲಿ ಯೋಗ್ಯ ಉದ್ಯೋಗಗಳ ಕೊರತೆಯಿಂದಾಗಿ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದತ್ತಾಂಶವು ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚಿದೆ ಎಂದು ತೋರಿಸುತ್ತದೆ. … Continued