ನೆಲಬಾಂಬ್ ಸ್ಫೋಟದಲ್ಲಿ ಎರಡೂ ಕಾಲು ಕಳೆದುಕೊಂಡ ಉಕ್ರೇನಿಯನ್ ನರ್ಸ್ ತನ್ನ ಪತಿಯೊಂದಿಗಿನ ಡಾನ್ಸ್‌ ಹಂಚಿಕೊಂಡಿದ್ದಾರೆ…ಮನಕರಗುವ ಈ ವೀಡಿಯೊ ವೀಕ್ಷಿಸಿ

ಎಲ್ವಿವ್‌ನ ಆಸ್ಪತ್ರೆಯ ವಾರ್ಡ್‌ನಲ್ಲಿ, ನವವಿವಾಹಿತರಾದ ಒಕ್ಸಾನಾ ಬಾಲಂಡಿನಾ ಮತ್ತು ವಿಕ್ಟರ್ ವಾಸಿಲಿವ್, ಅಂತಿಮವಾಗಿ ತಮ್ಮ ಮೊದಲ ಮದುವೆಯ ನೃತ್ಯವನ್ನು ಹಂಚಿಕೊಂಡಿದ್ದಾರೆ. ದಂಪತಿಗೆ, ಇದು ಎಂದಿಗೂ ಸಂಭವಿಸದ ಕ್ಷಣ, ಆದರೂ ಅವರು ಡ್ಯಾನ್ಸ್‌ ಮಾಡಿ ಸಂಭ್ರಮಿಸಿದ್ದಾರೆ. ಮಾರ್ಚ್ 27 ರಂದು, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಒಂದು ತಿಂಗಳ ನಂತರ, ದಂಪತಿ ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದ … Continued

ಭಾಷೆ ಯಾವುದೇ ಇರಲಿ, ಸಾಂಸ್ಕೃತಿಕ ವೈವಿಧ್ಯವಿರಲಿ ನಮ್ಮ ಸಂಸ್ಕೃತಿ ಭಾರತೀಯ, ಇದೇ ನಮ್ಮ ಶಕ್ತಿ: ಡೆನ್ಮಾರ್ಕ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಭಾಷಣದಲ್ಲಿ ಅಂತರ್ಗತತೆ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಅಸ್ಮಿತೆ ಬಗ್ಗೆ ಮಾತನಾಡಿದ ಅವರು ಭಾಷೆ ಯಾವುದೇ ಇರಲಿ ನಮ್ಮ ಸಂಸ್ಕೃತಿ ಭಾರತೀಯ ಎಂದರು. ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಶಕ್ತಿಯಾಗಿದೆ. ನಾವು … Continued

ಕಾರವಾರ: ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ

posted in: ರಾಜ್ಯ | 0

ಕಾರವಾರ: ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮೇಘ (20) ಎಂದು ಗುರುತಿಸಲಾಗಿದೆ. ಈ ಯುವತಿ ಮೂಲತಃ ಸಿದ್ದಾಪುರದವಳಾಗಿದ್ದು, ಕಾರವಾರದ ಹಬ್ಬುವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ. ಪ್ಯಾರಾಮೇಡಿಕಲ್ ಕೋರ್ಸ್ … Continued

ಬೆಕ್ಕಿಗೆ ಹಾಲು ಕುಡಿಯುವ ಆಸೆಯಾಗಿತ್ತು, ಅದಕ್ಕಾಗಿ ಏನು ಮಾಡ್ತು ನೋಡಿ…

posted in: ರಾಜ್ಯ | 0

ಬೆಕ್ಕಿನ ಕೆಲವೊಂದು ತಮಾಷೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಈಗ ಅಂಥದ್ದೇ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಗೋಪಾಲಕನೊಬ್ಬ ಹಸುವಿನ ಹಾಲು ಕರೆಯುತ್ತಿದ್ದಾನೆ. ಅದೇ ವೇಳೆಗೆ ಬೆಕ್ಕು ಬಂದಿದೆ. ಹಾಲನ್ನು ನೋಡಿ ಬೆಕ್ಕಿಗೂ ಕುಡಿಯುವ ಆಸೆಯಾಗಿದ್ದು, ಹಸಿದ ಬೆಕ್ಕು ಗೋಪಾಲಕನಿಗೆ ತನಗೆ ಹಾಲು ನೀಡುವಂತೆ ಸನ್ನೆ ಮಾಡುತ್ತದೆ. ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ … Continued

ನಾಳೆ ಧ್ವನಿವರ್ಧಕಗಳಲ್ಲಿ ಎಲ್ಲಿ ಆಜಾನ್ ಕೂಗಿದರೂ ಅಲ್ಲಿ ಹನುಮಾನ್ ಚಾಲೀಸಾ ಪ್ಲೇ ಮಾಡಿ : ರಾಜ್ ಠಾಕ್ರೆ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಹೇಳಿಕೆ ನೀಡಿದ್ದು, ನಾಳೆ ಮೇ 4 ರಂದು ಧ್ವನಿವರ್ಧಕಗಳಲ್ಲಿ ಆಜಾನ್‌ ಕೂಗುವಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿ ಎಂದು ಬೆಂಬಲಿಗರಿಗೆ ಹೇಳಿದ್ದಾರೆ. ನಾಳೆ, ಮೇ 4 ರಂದು, ಧ್ವನಿವರ್ಧಕಗಳು ಅಜಾನ್‌ನೊಂದಿಗೆ ಮೊಳಗುವುದನ್ನು ಕೇಳಿದರೆ, ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ; ಆ ಸ್ಥಳಗಳಲ್ಲಿ, … Continued

ಲಾರಿ-ಕಾರು ಡಿಕ್ಕಿ: ಸ್ಥಳದಲ್ಲೇ ದಂಪತಿ, ಮಗು ಸಾವು

posted in: ರಾಜ್ಯ | 0

ತುಮಕೂರು: ಲಾರಿ- ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ದಂಪತಿ ಹಾಗೂ ಮಗು ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಸೇಗೌಡನದೊಡ್ಡಿಯಲ್ಲಿ ಇಂದು, ಮಂಗಳವಾರ ನಡೆದಿದೆ. ಮೃತರು ಚನ್ನಪಟ್ಟಣ ಮೂಲದವರು ಎಂದು ಹೇಳಲಾಗಿದ್ದು, ಮೃತರು ಹುಲಿಯೂರುದುರ್ಗ‌ ಕಡೆಯಿಂದ ಮದ್ದೂರು ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅವಘಡ ನಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ಹುಲಿಯೂರು … Continued

ಸೋಲಾರ್ ಸೆಕ್ಸ್ ಹಗರಣ: ಕೇರಳ ಸಿಎಂ ಅಧಿಕೃತ ನಿವಾಸದಲ್ಲಿ ಸಿಬಿಐ ಸಾಕ್ಷ್ಯ ಸಂಗ್ರಹ

ತಿರುವನಂತಪುರಂ: ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಒಳಗೊಂಡಿದ್ದಾರೆ ಎಂದು ಆರೋಪಿಸಲಾದ ಸೋಲಾರ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹದ ಭಾಗವಾಗಿ ಸಿಬಿಐ ಅಧಿಕಾರಿಗಳು ಕೇರಳ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್‌ನಲ್ಲಿ ತಪಾಸಣೆ ನಡೆಸಿದರು. ಲೈಂಗಿಕ ಶೋಷಣೆ ಆರೋಪದ ಆಧಾರದ ಮೇಲೆ ಇನ್ಸ್‌ಪೆಕ್ಟರ್ ನಿಬುಲ್ ಶಂಕರ್ ನೇತೃತ್ವದ ಸಿಬಿಐನ ಎರಡು … Continued

ಮೈಸೂರು ಬಾರ್‌ನಲ್ಲಿ ನಾಲ್ಕೈದು ಜನರಿಂದ ಬಿಯರ್ ಬಾಟಲ್, ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

posted in: ರಾಜ್ಯ | 0

ಮೈಸೂರಿನ ಬನ್ನೂರು ಬಡಾವಣೆಯ ಬಾರ್‌ವೊಂದರಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‌ನ ನಾಲ್ಕೈದು ಮಂದಿ ಸದಸ್ಯರು ಬಿಯರ್ ಬಾಟಲಿಗಳು ಮತ್ತು ಮಚ್ಚಿನಿಂದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಾರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.ಮತ್ತೊಂದು ಗ್ಯಾಂಗ್‌ಗೆ ಸೇರಿದ ದಯಾನಂದ್ ಕೂಡ ಹಿಸ್ಟರಿ ಶೀಟರ್‌ … Continued

ಸಾಗರ: ಮಂಗನ ಕಾಯಿಲೆಗೆ ಗ್ರಾಮ ಪಂಚಾಯತ ಸದಸ್ಯ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಇಂದು, ಮಂಗಳವಾರ ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ ಸದಸ್ಯ ರಾಮಸ್ವಾಮಿ ಕರುಮನೆ ((55) ಅವರಿಗೆ ಏಪ್ರಿಲ್‌ 24ರಂದು ಜ್ವರ ಕಾಣಿಸಿಕೊಂಡು ಆಸ್ಪತ್ರಗೆ ದಾಖಲಾಗಿದ್ದರು. ಬಳಿಕ ಇದು ಮಂಗನ ಕಾಯಿಲೆ ಎಂದು ದೃಢವಾಗಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ … Continued

ಉತ್ತರ ಪ್ರದೇಶ ಮುಜಾಫರ್ ನಗರದ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ 775 ಕೋಟಿ ರೂ. ಮೌಲ್ಯದ 155 ಕೆಜಿ ಹೆರಾಯಿನ್ ವಶ

ಅಹಮದಾಬಾದ್: ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರ ನೆರವಿನೊಂದಿಗೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಉತ್ತರ ಪ್ರದೇಶದ ಮುಜಾಫರ್‌ನಗರದ ಮನೆಯೊಂದರಿಂದ 775 ಕೋಟಿ ರೂಪಾಯಿ ಮೌಲ್ಯದ 155 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 775 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಭಾನುವಾರ ಮುಜಾಫರ್‌ನಗರದಲ್ಲಿರುವ ಪ್ರಮುಖ ಡ್ರಗ್ … Continued