ಧ್ವನಿವರ್ಧಕದಲ್ಲಿ ಆಜಾನ್‌ ಕೂಗುತ್ತಿದ್ದ ಮುಂಬೈನ ಮಸೀದಿ ಬಳಿ ಧ್ವನಿವರ್ಧಕದಲ್ಲಿ ಹನುಮಾನ ಚಾಲೀಸಾ ಪ್ಲೇ ಮಾಡಿದ ಎಂಎನ್‌ಎಸ್ ಕಾರ್ಯಕರ್ತರು | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಯಕರ್ತರು ಬುಧವಾರ ಬೆಳಗ್ಗೆ ಮುಂಬೈನ ಚಾರ್ಕೋಪ್ ಪ್ರದೇಶದ ಮಸೀದಿಯ ಬಳಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದಲ್ಲಿ ನುಡಿಸಿದ್ದಾರೆ.
ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಅವರು ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದರ ವಿರುದ್ಧ ಪ್ರತಿಭಟಿಸಲು ಧಾರ್ಮಿಕ ಸ್ತೋತ್ರವನ್ನು ಪಠಿಸಲು ಕರೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ವೀಡಿಯೋವೊಂದರಲ್ಲಿ, ಎಂಎನ್‌ಎಸ್ ಕಾರ್ಯಕರ್ತರೊಬ್ಬರು ಪಕ್ಷದ ಧ್ವಜವನ್ನು ಹಿಡಿದುಕೊಂಡಿದ್ದು, ಇಲ್ಲಿನ ಬಹುಮಹಡಿ ಕಟಕಟಡದಿಂದ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸುತ್ತಿರುವುದು ಕಂಡುಬಂದಿದೆ. ಹಿನ್ನಲೆಯಲ್ಲಿ ಪಕ್ಕದ ಮಸೀದಿಯ ಧ್ವನಿವರ್ಧಕದಿಂದ ‘ಆಜಾನ್’ ಕೇಳಿಸುತ್ತಿತ್ತು.

ತಮ್ಮ ವಿರುದ್ಧದ ಪ್ರಕರಣದ ದಾಖಲಾದರೂ ಹಿಂಜರಿಯದೆ, ಎಂಎನ್‌ಎಸ್‌ ಅಧ್ಯಕ್ಷ ರಾಜ್ ಠಾಕ್ರೆ ಅವರು ಮಂಗಳವಾರ “ಅಜಾನ್ (ಇಸ್ಲಾಮಿಕ್ ಪ್ರಾರ್ಥನೆ ಕರೆ)” ಧ್ವನಿವರ್ಧಕಗಳನ್ನು ಕೇಳುತ್ತದೆಯೋ ಅಲ್ಲಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸುವಂತೆ ಜನರನ್ನು ಒತ್ತಾಯಿಸಿದ್ದರು.
ಆಜಾನ್ ಕೂಗುವ ಶಬ್ದದಿಂದ ಜನರು ತೊಂದರೆಗೊಳಗಾದರೆ 100 ಅನ್ನು ಡಯಲ್ ಮಾಡುವ ಮೂಲಕ ಪೊಲೀಸರಿಗೆ ದೂರು ನೀಡುವಂತೆ ಬಹಿರಂಗ ಪತ್ರದಲ್ಲಿ ಠಾಕ್ರೆ ಕೇಳಿಕೊಂಡಿದ್ದಾರೆ.

ಮೇ 4 ರಂದು ನೀವು ಧ್ವನಿವರ್ಧಕದಲ್ಲಿ ಆಜಾನ್ ಕೂಗುವುದನ್ನು ಕೇಳಿದರೆ ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ; ಆ ಸ್ಥಳಗಳಲ್ಲಿ, ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸಿ. ಆಗ ಅವರಿಗೆ ಈ ಧ್ವನಿವರ್ಧಕಗಳಿಂದಾಗುವ ಕಿರಿಕಿರಿಯ ಅರಿವಾಗುತ್ತದೆ ಎಂದು ಎಂಎನ್‌ಎಸ್ ನಾಯಕ ಹೇಳಿದ್ದಾರೆ.
ಮುಂಬೈ ಮತ್ತು ರಾಜ್ಯದ ಇತರ ಹಲವು ಭಾಗಗಳಲ್ಲಿ ಪೊಲೀಸರು ಈಗಾಗಲೇ ಭದ್ರತೆಯನ್ನು ಹೆಚ್ಚಿಸಿದ್ದಾರೆ, ವಿಶೇಷವಾಗಿ ಎಂಎನ್‌ಎಸ್ ಗಮನಾರ್ಹ ಉಪಸ್ಥಿತಿ ಹೊಂದಿರುವಲದಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಓದಿರಿ :-   ಪೆಟ್ರೋಲ್ ಲೀಟರ್​ಗೆ 9.5 ರೂ.ಗಳು, ಡೀಸೆಲ್ 7 ರೂ.ಗಳಷ್ಟು ಇಳಿಕೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ