ಶ್ರೀಲಂಕಾದಲ್ಲಿ ಅಧ್ಯಕ್ಷ ರಾಜಪಕ್ಸೆ ಕುಟುಂಬದ ಪೂರ್ವಜರ ಮನೆಗೆ ಪ್ರತಿಭಟನಾಕಾರರಿಂದ ಬೆಂಕಿ

ಕೊಲಂಬೊ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಮಧ್ಯೆ ಹಂಬಂಟೋಟಾದಲ್ಲಿ ರಾಜಕೀಯವಾಗಿ ಪ್ರಭಾವಿ ರಾಜಪಕ್ಸೆ ಕುಟುಂಬದ ಪೂರ್ವಜರ ಮನೆಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಕೊಲಂಬೊದಲ್ಲಿರುವ ಅಧ್ಯಕ್ಷ ಗೊತಾಬಯ ರಾಜಪಕ್ಸೆ ಅವರ ಕಚೇರಿಯ ಹೊರಗೆ ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ತಮ್ಮ … Continued

ಪೋಷಕರಿಂದ ನೇರವಾಗಿ ಮಗು ದತ್ತು ಪಡೆಯುವುದು ಬಾಲ ನ್ಯಾಯ ಕಾಯಿದೆ ಸೆಕ್ಷನ್‌ 80ರ ಅಡಿ ಅಪರಾಧವಲ್ಲ: ಹೈಕೋರ್ಟ್‌

ಬೆಂಗಳೂರು: ಪೋಷಕರಿಂದ ಮಗುವನ್ನು ನೇರವಾಗಿ ದತ್ತು ಪಡೆದುಕೊಳ್ಳುವುದು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 80ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರಲ್ಲಿ ಮಗುವನ್ನು ದತ್ತು ನೀಡಿದ್ದ ಹಾಗೂ ದತ್ತು ಪಡೆದಿದ್ದವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿದೆ. ಮಗುವಿನ ದತ್ತು … Continued

ದೇಶದ್ರೋಹ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ್ರೋಹದ ಕಾನೂನಿನ ಐಪಿಸಿ ಸೆಕ್ಷನ್ 124 ಎ ಅನ್ನು ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ದೇಶವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ವಸಾಹತುಶಾಹಿ ಕಾನೂನುಗಳನ್ನು ತೊಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಸರ್ಕಾರ ವಿವಿಧ ವಸಾಹತುಶಾಹಿ ಕಾನೂನುಗಳನ್ನು ಮರುಪರಿಶೀಲಿಸಲು ನಿರ್ಧರಿಸಿದೆ … Continued

ಯುವಕನ ಕೖೆಗೆ ಮಗು ನೀಡಿ ನಾಪತ್ತೆಯಾದ ಮಹಿಳೆ…!

ಮೈಸೂರು: ತನ್ನ ವೈಯಕ್ತಿಕ ಕೆಲಸಕ್ಕೆಂದು ರಾಯಚೂರಿಗೆ ತೆರಳಿದ್ದ ಯುವಕ ಮೈಸೂರು ಬಸ್ಸಿಗೆ ಕಾಯುತ್ತಿದ್ದ ವೇಳೆ ಅಪರಿಚಿತ ಮಹಿಳೆಯೊಬ್ಬರು ತನ್ನ 9 ತಿಂಗಳ ಮಗುವನ್ನು ಯುವಕನ ಕೈಗೆ ನೀಡಿ ಮೂರು ಗಂಟೆಗಳು ಕಳೆದರು ವಾಪಸ್‌ ಬಾರದೆ ನಾಪತ್ತೆಯಾಗಿರುವ ಘಟನೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಿವಾಸಿ ರಘು ಕೆಲಸದ … Continued

ವಿದ್ಯುತ್ ಕೈಕೊಟ್ಟು ಯಡವಟ್ಟು : ತನ್ನ ಸಹೋದರಿಯ ವರನಿಗೆ ಹಾರಹಾಕಿ ಮದುವೆಯಾದ ವಧು..!

ಉಜ್ಜಯಿನಿ (ಮಧ್ಯಪ್ರದೇಶ) : ಇಬ್ಬರು ಸಹೋದರಿಯರು ಇಬ್ಬರು ವರಗಳ ಜೊತೆ ಮದುವೆಯಾಗಬೇಕಿದ್ದ ಸಮಾರಂಭದಲ್ಲಿ ವಿದ್ಯುತ್ ಕೈಕೊಟ್ಟು ದೊಡ್ಡ ಯಡವಟ್ಟಾಗಿದೆ. ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲಿಯೇ ಹಾರ ಬದಲಾಯಿಸುವಾಗ ವಧು-ವರರೇ ಅದಲುಬದಲಾಗಿದ್ದಾರೆ…! ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದಾಗ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿ ಕತ್ತಲೆಯಲ್ಲಿ, ವಧು-ವರರು ಅದಲು ಬದಲಾಗಿ ತಮಗೆ ನಿಗದಿಯಾದ ವರನಿಗೆ ಹಾರ ಹಾಕದೆ … Continued

ರಾಜ್ಯದಲ್ಲಿ ಆಜಾನ್-ಭಜನೆ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಬಳಕೆಗೆ ಶೀಘ್ರವೇ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಧ್ವನಿವರ್ಧಕಗಳಲ್ಲಿ ಆಜಾನ್-ಭಜನೆ ಸಂಘರ್ಷದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಸಂಬಂಧಿಸಿದಂತೆ ಶೀಘ್ರ ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಜಾನ್-ಭಜನೆ ಸಂಘರ್ಷದ ಬಗ್ಗೆ ಸೋಮವಾರ ತುರ್ತು ಸಭೆ ನಡೆಸಿದ್ದು, ಡಿಜಿ ಐಜಿಪಿ ಪ್ರವೀಣ್ ಸೂದ್, ಬೆಂಗಳೂರು … Continued

ನಾಳೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ; ಸಂಪುಟ ವಿಸ್ತರಣೆ ಚರ್ಚೆ ಮುನ್ನಲೆಗೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ನವದೆಹಲಿಗೆ ತೆರಳಲಿದ್ದು, ಬೆಳಗ್ಗೆ ಎಂಟು ಗಂಟೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ರಾಜ್ಯ ಸಂಪುಟ ವಿಸ್ತರಣೆ/ಪುನಾರಚನೆಯ ಸುದ್ದಿ ಮತ್ತೆ ಚರ್ಚೆಗೆ ಬಂದಿದೆ. ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದು, ನಂತರ ಸಂಜೆ ‘ಇನ್ವೆಸ್ಟ್ ಕರ್ನಾಟಕ‌’ ವಿಚಾರವಾಗಿ ವಿವಿಧ ದೇಶಗಳ ರಾಯಭಾರಿಗಳು ಹಾಗೂ … Continued

ಪೋಲೆಂಡ್‌ನಲ್ಲಿ ನಡೆದ ಎರಡನೇ ಮಹಾಯುದ್ಧದ ವಿಜಯದ ದಿವಸ ಕಾರ್ಯಕ್ರಮದಲ್ಲಿ ರಷ್ಯಾದ ರಾಯಭಾರಿ ಮೇಲೆ ಕೆಂಪು ಬಣ್ಣ ಎರಚಿದ ಪ್ರತಿಭಟನಾಕಾರರು…ವೀಕ್ಷಿಸಿ

ಎರಡನೇ ಮಹಾಯುದ್ಧದ ಅಂತ್ಯದ ಸ್ಮರಣಾರ್ಥ ವಾರ್ಷಿಕ ವಿಕ್ಟರಿ ಡೇ ಕಾರ್ಯಕ್ರಮದಲ್ಲಿ ಪೋಲೆಂಡ್‌ನಲ್ಲಿರುವ ರಷ್ಯಾದ ರಾಯಭಾರಿ ಸೆರ್ಗೆ ಆಂಡ್ರೀವ್ ಅವರ ಕೆಂಪು ಬಣ್ಣ ಬಳಿಯಲಾಗಿದೆ. ಇಂಡಿಪೆಂಡೆಂಟ್ ಪ್ರಕಾರ, ಸೋವಿಯತ್ ಒಕ್ಕೂಟದ ಸೈನಿಕರ ಸ್ಮಶಾನದ ಮುಂದೆ ಪ್ರತಿಭಟನಾಕಾರರು ಆಂಡ್ರೀವ್ ಮೇಲೆ ದಾಳಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಲಾದ ದೃಶ್ಯಾವಳಿಗಳು ಆಂಡ್ರೀವ್‌ ಅವರ ಹಿಂದಿನಿಂದ ಕೆಂಪು ಬಣ್ಣವನ್ನು ಎಸೆದಿರುವುದನ್ನು … Continued

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಆಡಳಿತ ಪಕ್ಷ -ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದ ಸಾವು: ವರದಿ

ಕೊಲಂಬೊ: ಶ್ರೀಲಂಕಾದ ನಿಟ್ಟಂಬುವಾ ಪಟ್ಟಣದಲ್ಲಿ ಸೋಮವಾರ ಶ್ರೀಲಂಕಾದ ಆಡಳಿತ ಪಕ್ಷ ಮತ್ತು ಸರ್ಕಾರದ ವಿರೋಧಿ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದರಿಂದ ಹಿರಿಯ ಸಂಸದರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾದ ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೋರಾಲಾ ಅವರು ಸೋಮವಾರ ರಾಜಧಾನಿ ಕೊಲಂಬೊದ ಹೊರಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯ ನಂತರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸುದ್ದಿ … Continued

ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವು ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಮೊಳಗಿದ ಸುಪ್ರಭಾತ

ಬೆಂಗಳೂರು: “ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿ ಶ್ರೀರಾಮ ಸೇನೆಯು ಈಗ ಮಂದಿರಗಳಲ್ಲಿ ಹುನಾಮನ ಚಾಲೀಸಾಹ ಹಾಗೂ ಭಕ್ತಿಗೀತೆಗಳನ್ನು ಧ್ವನಿವರ್ಕದಲ್ಲಿ ಹಾಕಲು ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಹಲವಾರು ದೇವಸ್ಥಾನಗಳಲ್ಲಿ ಸೋಮವಾರ ( ಮೇ 9) ಬೆಳಿಗ್ಗೆ 5 ಗಂಟೆಗೆ ಸ್ತೋತ್ರ, ಹುಮನ ಚಾಲೀಸಾ ಹಾಗೂ ಭಕ್ತಿಗಳನ್ನು ಪ್ಲೇ … Continued