ತಕ್ಷಣದಿಂದಲೇ ಜಾರಿಗೆ ಬರುವಂತೆ ಬೃಹತ್ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಬೃಹತ್ ಅವಧಿಯ ಠೇವಣಿಗಳ ( 2 ಕೋಟಿ ರೂ.ಗಳು ಮತ್ತು ಅದಕ್ಕಿಂತ ಹೆಚ್ಚಿನ) ಬಡ್ಡಿ ದರವನ್ನು ಮೇ 10 ರಿಂದ ಜಾರಿಗೆ ಬರುವಂತೆ 40-90 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. ಬಜಾಜ್ ಫೈನಾನ್ಸ್, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯು ಸ್ಥಿರ ಠೇವಣಿ … Continued

300 ಶತಕೋಟಿ ಮೌಲ್ಯದ ಬಾಕಿ ಪಾವತಿಸದಿದ್ದರೆ ವಿದ್ಯುತ್‌ ಸ್ಥಾವರದ ಸ್ಥಗಿತದ ಎಚ್ಚರಿಕೆ ನೀಡಿದ ಪಾಕ್‌ನಲ್ಲಿರುವ ಚೀನಾದ ವಿದ್ಯುತ್‌ ಕಂಪನಿಗಳು: ವರದಿ

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಕಂಪನಿಗಳು, 300 ಶತಕೋಟಿ ಪಾಕಿಸ್ತಾನಿ ರೂಪಾಯಿ ( 1.59 ಶತಕೋಟಿ ಡಾಲರ್‌) ಮೊತ್ತವನ್ನು ಪಾವತಿಸದಿದ್ದರೆ ಈ ತಿಂಗಳು ತಮ್ಮ ವಿದ್ಯುತ್ ಸ್ಥಾವರಗಳನ್ನು ಮುಚ್ಚುವಂತೆ ಸೂಚಿಸಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿವೆ. ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಅವರೊಂದಿಗಿನ ಸಭೆಯಲ್ಲಿ, … Continued

ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಮನನೊಂದು ಪತ್ನಿ ಆತ್ಮಹತ್ಯೆ

ಚೆನ್ನೈ: ತನ್ನ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದಿರುವುದಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂ ಗ್ರಾಮದ ರಮ್ಯಾ ಎಂಬವರು ಆತ್ಮಹತ್ಯೆ ಶರಣಾದ ಮಹಿಳೆ ಎಂದು ಹೇಳಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಏಪ್ರಿಲ್ 6 ರಂದು ಕಾರ್ತಿಕೇಯನ್ ಎಂಬವರನ್ನು ವಿವಾಹವಾಗಿದ್ದರು. … Continued

ಸುಪ್ರೀಂಕೋರ್ಟಿನಿಂದ ಮಹತ್ವದ ತೀರ್ಪು, ಎಲ್ಲ ರಾಜ್ಯಗಳಿಗೂ ಅನ್ವಯ : ಶೀಘ್ರವೇ ಬಿಬಿಎಂಪಿ ಚುನಾವಣೆ ಸಾಧ್ಯತೆ

posted in: ರಾಜ್ಯ | 0

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಶೀಘ್ರದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಧ್ಯಪ್ರದೇಶದಲ್ಲಿ ಎರಡು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿರಲಿಲ್ಲ. ಈ ಬಗ್ಗೆ ಸಲ್ಲಿಕೆಯಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಕೋರ್ಟ್‌, ಸ್ಥಳೀಯ ಸಂಸ್ಥೆಗಳಿಗೆ ಎರಡು … Continued

ಶ್ರೀಲಂಕಾದಲ್ಲಿ ಹಿಂಸಾಚಾರ : ಅಶಾಂತಿ ಶಮನಕ್ಕೆ ಕಂಡಲ್ಲಿ ಗುಂಡಿಕ್ಕಲು’ ಆದೇಶಿಸಿದ ಸರ್ಕಾರ

ಕೊಲಂಬೊ: ಸಾವುಗಳು. ಅಗ್ನಿಸ್ಪರ್ಶ. ರಾಷ್ಟ್ರವ್ಯಾಪಿ ಕರ್ಫ್ಯೂ. ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರತಿಭಟನೆ ಮುಂದುವರಿದಿರುವಂತೆಯೇ ಕಳೆದ ಎರಡು ದಿನಗಳಿಂದ ಶ್ರೀಲಂಕಾ ಅಭೂತಪೂರ್ವ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಸೋಮವಾರ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ನೀಡಿದ ನಂತರ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಆಹಾರ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆ ಮತ್ತು ದೀರ್ಘಕಾಲದ … Continued

ಆಜಾನ್‌-ಹನುಮಾನ ಚಾಲೀಸಾ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಇನ್ಮುಂದೆ ಲೌಡ್​ಸ್ಪೀಕರ್ (Loudspeaker) ಬಳಸುವವರು ಅಧಿಕೃತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಮಾರ್ಗಸೂಚಿ ಹೊರಡಿಸಿದ್ದಾರೆ. ಇದಕ್ಕೂ ಮೊದಲು … Continued

ಸೆಕ್ಷನ್ 124ಎ ಮರುಪರಿಶೀಲನೆ ಆಗುವ ವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ಐಪಿಸಿ ಸೆಕ್ಷನ್ 124 ಎ ಮರುಪರಿಶೀಲನೆ ಮಾಡುವ ಕೇಂದ್ರ ಸರ್ಕಾರದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಾಕಿ ಉಳಿದಿರುವ ಎಲ್ಲ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರಗಳಿಗೆ ನಿರ್ದೇಶನ ನೀಡಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನಾಳೆಯೊಳಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ … Continued

ಅಸಾನಿ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ ಮುಳುಗಿದ ದೋಣಿಗಳು: 60 ಮೀನುಗಾರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು | ವೀಕ್ಷಿಸಿ

ಗಂಜಾಮ್ (ಒಡಿಶಾ): ಅಸಾನಿ ಚಂಡಮಾರುತದ ಕಾರಣದಿಂದ ಒಡಿಶಾ ಕರಾವಳಿಯಲ್ಲಿ ಅಲೆಗಳ ಆರ್ಭಟಕ್ಕೆ ದೋಣಿಗಳು ಮುಳುಗಿದ್ದು, ಸುಮಾರು 60 ಮೀನುಗಾರರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಣಾರ್ಯಪಲ್ಲಿ, ಬಡಾ ಆರ್ಯಪಲ್ಲಿ ಮತ್ತು ಗೋಲಬಂಧ ಭಾಗದ ಮೀನುಗಾರರು ತಮ್ಮ ಆರು ಮೀನುಗಾರಿಕಾ ಬೋಟುಗಳಲ್ಲಿ ಹೆಚ್ಚಿನ ಪ್ರಮಾಣದ ಮೀನುಗಳೊಂದಿಗೆ ತೀರಕ್ಕೆ ಮರಳುತ್ತಿದ್ದರು. ಇದ್ದಕ್ಕಿದ್ದಂತೆ ಸಮುದ್ರ ಪ್ರಕ್ಷುಬ್ಧವಾಯಿತು. ಮಂಗಳವಾರ ಗಂಜಾಂನ ಛತ್ರಪುರ ಬಳಿಯ ಆರ್ಯಪಲ್ಲಿ … Continued

ಸಾರಿಗೆ ಇಲಾಖೆಯ ತಾತ್ಕಾಲಿಕ ನೌಕರರ ಹುದ್ದೆ 1 ವರ್ಷ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ

posted in: ರಾಜ್ಯ | 0

ಬೆಂಗಳೂರು: ಸಾರಿಗೆ ಇಲಾಖೆಯಡಿ ವಿವಿಧ ಹಂತದಲ್ಲಿ ತಾತ್ಕಾಲಿಕ ಹುದ್ದೆಗೆ ನೇಮಕಗೊಂಡಿದ್ದ ಅಧಿಕಾರಿ, ಸಿಬ್ಬಂದಿಗಳನ್ನು ಒಂದು ವರ್ಷ ಅವಧಿ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದ್ದು, ಮುಂದಿನ ವರ್ಷದ ಅವಧಿ ವರೆಗೂ ವಿಸ್ತರಿಸಿದೆ. ಇಲಾಖೆಯ ವಿವಿಧ ವೃಂದಗಳ ಒಟ್ಟು 796 ತಾತ್ಕಾಲಿಕ ಹುದ್ದೆಗಳಿಗೆ ಅನ್ವಯವಾಗುವಂತೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರ ಕ್ರಮ … Continued

ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿ: ಅಭ್ಯರ್ಥಿಗಳು ವಾಚ್ ಕಟ್ಟಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ…! ಇಲ್ಲಿದೆ ಮಾರ್ಗಸೂಚಿಗಳು

posted in: ರಾಜ್ಯ | 0

ಬೆಂಗಳೂರು: ಇತ್ತೀಚಿನ ಪರೀಕ್ಷಾ ಅಕ್ರಮಗಳಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಲರ್ಟ್ ಆಗಿದೆ. ಶಿಕ್ಷಕರ ನೇಮಕಾತಿಗಾಗಿ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆ ಈಗ ಟೆಕ್ನಾಲಜಿ ಬಳಸಿ ಪರೀಕ್ಷಾ ಅಕ್ರಮಕ್ಕೆ ಕಡಿವಾಣಕ್ಕೆ ಮುಂದಾಗಿದೆ. ಮೇ 21 ಹಾಗೂ 22 ರಂದು 15 ಸಾವಿರ ಶಿಕ್ಷಕರ ನೇಮಕಾತಿ ಉದ್ದೇಶದಿಂದ ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಈ … Continued