ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಅಸಾನಿ, ಕರ್ನಾಟಕದಲ್ಲೂ ಭಾರಿ ಮಳೆ?

posted in: ರಾಜ್ಯ | 0

ಭುವನೇಶ್ವರ: ಅಸಾನಿ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಮೇ 11ರಂದು ಅಪ್ಪಳಿಸಲಿದ್ದು, ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಅಸಾನಿ ಚಂಡಮಾರುತ ದಿಕ್ಕು ಬದಲಿಸಿದ್ದು, ಕಾಕಿನಾಡು ಆಸುಪಾಸಿನಲ್ಲಿ ಹಾದುಹೋಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾಕಿನಾಡಿಗೆ ಅಪ್ಪಳಿಸಿದ ಬಳಿಕ ಕಾಕಿನಾಡು ವಿಶಾಖಾಪಟ್ಟಣಂ ನಡುವೆ ಸಮುದ್ರದಲ್ಲಿ ಚಲಿಸಲಿದೆ ಎಂದು ಹೇಳಿದೆ. ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರಿ ಅಥವಾ ಅತಿ ಭಾರಿ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ತೆಲಂಗಾಣದ ನಲಗೋಡು, ಸೂರ್ಯಪೇಟೆ, ಭದ್ರಾದ್ರಿ ಕೊಟಾಗುಡೆಂ, ಖಮ್ಮಮ್, ಮುಲುಗು ಜಿಲ್ಲೆಗಳಲ್ಲೂ ಸಾಮಾನ್ಯ ಮಳೆಯಾಗಬಹುದು.

ಈ ನಡುವೆ ಕರ್ನಾಟಕದಲ್ಲೂ ಹವಾಮಾನದಲ್ಲಿ ಬದಲಾವಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಗದಗ, ಕೊಪ್ಪಳ ಜಿಲ್ಲೆಗಳಲ್ಲೂ ಭಾರಿ ಗಾಳಿ ಸಹಿತ ಅಲ್ಲಲ್ಲಿ ಮಳೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ದಟ್ಟ ಮೋಡ ಕವಿದ ವಾತಾವರಣವಿದೆ. ಕುಂದಾಪುರ, ಉಡುಪಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement