ಆಧಾರ ರಹಿತ ಹೇಳಿಕೆ ಬೇಡ, ದಾಖಲೆಗಳನ್ನು ತೋರಿಸಿ: ತಾಜ್‌ ಮಹಲ್‌ ಭೂಮಿ ತಮ್ಮ ವಂಶಸ್ಥರಿಗೆ ಸೇರಿದ್ದೆಂದ ದಿಯಾ ಕುಮಾರಿಗೆ ಸವಾಲು ಹಾಕಿದ ಷಹಜಹಾನ್ ‘ವಂಶಸ್ಥ’

ನವದೆಹಲಿ: ತಾಜ್ ಮಹಲ್ ಭೂಮಿಯ ಮಾಲೀಕತ್ವದ ಬಗ್ಗೆ ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಯುವರಾಜ ಯಾಕೂಬ್ ಹಬೀಬುದ್ದೀನ್ ಟ್ಯೂಸಿ ಅವರು ತಾನು ಮೊಘಲರ ವಂಶಸ್ಥ ಎಂದು ಹೇಳಿಕೊಳ್ಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಬುಧವಾರ, ಜೈಪುರದ ರಾಜಮನೆತನದ ರಾಜಕುಮಾರಿಯೂ ಆಗಿರುವ ಕುಮಾರಿ ಮಾಧ್ಯಮಗಳೊಂದಿಗೆ ಮಾತನಾಡಿ, ತಾಜ್ ಮಹಲ್ ನಿರ್ಮಿಸಲಾದ ಭೂಮಿ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಹೇಳಿದ್ದರು.
ಇದಲ್ಲದೆ, ಅಗತ್ಯವಿದ್ದಲ್ಲಿ ದಾಖಲೆಗಳನ್ನು ನೀಡಲು ಸಿದ್ಧ ಎಂದು ಅವರು ಪ್ರತಿಪಾದಿಸಿದರು. ಅಮೃತಶಿಲೆಯ 22 ಬಾಗಿಲುಗಳನ್ನು ತೆರೆಯುವಂತೆ ಕೋರ್ಟಿಗೆ ಮಾಡಿದ್ದ ಮನವಿಯನ್ನು ಬೆಂಬಲಿಸಿ ಮಾತನಾಡಿದ ಅವರು, “ಸ್ಮಾರಕವನ್ನು ನಿರ್ಮಿಸುವ ಮೊದಲು ಏನಿತ್ತು ಎಂಬುದನ್ನು ತನಿಖೆ ಮಾಡಬೇಕು. ‘ಮಕ್ಬರಾ’ ಮೊದಲು ಏನಿತ್ತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ,ಯಾಕೂಬ್ ಹಬೀಬುದ್ದೀನ್ ಟ್ಯೂಸಿ ವರು ದಿವ್ಯಾ ಕುಮಾರಿ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ ಮತ್ತು “ಅವರಲ್ಲಿ ಒಂದು ಹನಿ ರಜಪೂತ್ ರಕ್ತವಿದ್ದರೆ”, ಅವರು ದಾಖಲೆಗಳನ್ನು ತೋರಿಸಬೇಕು ಎಂದು ಹೇಳಿದ್ದಾರೆ.
ಅವರ ಪ್ರತಿಪಾದನಯನ್ನು “ಮೂರ್ಖ” ನಡೆ ಎಂದು ಕರೆದಿರುವ ಟ್ಯುಸಿ, , ಷಹಜಹಾನ್‌ನ ಎರಡನೇ ಹೆಂಡತಿ ಲಾಲ್ ಬಾಯಿ ರಜಪೂತಳಾಗಿದ್ದಳು ಮತ್ತು ಅಕ್ಬರನ ಹೆಂಡತಿ ಮತ್ತು ಷಹಜಹಾನ್‌ನ ಅಜ್ಜಿ ಜೋಧಾ ಬಾಯಿ ಅಲಿಯಾಸ್ ಹರ್ಕಾ ಬಾಯಿ ಕೂಡ ರಜಪೂತಳಾಗಿದ್ದಳು ಎಂದು ಹೇಳಿದ್ದಾರೆ..

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

ಅವರು ಮೊಘಲರಿಗೆ ರಜಪೂತರಿಂದ ಭೂಮಿಯನ್ನು ಉಡುಗೊರೆಯಾಗಿ ನೀಡುವ ಅಭ್ಯಾಸವನ್ನು ವಿವರಿಸಿದರು. ತಮ್ಮ ಅಳಿಯಂದಿರಿಗೆ ವಿವಿಧ ಸ್ಥಳಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ಉಲ್ಲೇಖಿಸಿದ ಅವರು, ಕುಮಾರಿಯವರ ಭೂಕಬಳಿಕೆಯ ಆರೋಪಗಳನ್ನು “ಆಧಾರರಹಿತ” ಎಂದು ಕರೆದಿದ್ದಾರೆ. ಅಕ್ಬರನ ಆಳ್ವಿಕೆಯ ಆರಂಭದಿಂದಲೂ ರಜಪೂತರು ಮೊಘಲರೊಂದಿಗೆ ಮೈತ್ರಿ ಮಾಡಿಕೊಂಡರು ಎಂದು ಅವರು ಹೇಳಿದರು, “ನನ್ನ 27 ಅಜ್ಜಿಗಳಲ್ಲಿ 14 ಜನ ರಜಪೂತರು ಎಂದು ಹೇಳಿದ್ದಾರೆ.
ಕುಮಾರಿ ಅವರ ಹೇಳಿಕೆಗೆ ನೇರವಾಗಿ ಪ್ರತಿಕ್ರಿಯಿಸಿದ ಟ್ಯೂಸಿ, “ನಿಮ್ಮ ಪೋತಿಖಾನಾದಲ್ಲಿ ದಾಖಲೆಗಳಿದ್ದರೆ ಅವುಗಳನ್ನು ತೋರಿಸಿ. ನಿಮ್ಮೊಳಗೆ ಒಂದು ಹನಿ ರಜಪೂತ ರಕ್ತವಿದ್ದರೆ, ಆ ದಾಖಲೆಗಳನ್ನು ತೋರಿಸಿ. ಅಲ್ಲದೇ ಅನಗತ್ಯ ಆರೋಪಗಳನ್ನು ಮಾಡಿ ವಿವಾದ ಎಬ್ಬಿಸುವುದು ಯಾಕೆ ಎಂದು ಅವರು ಹೇಳಿದ್ದಾರೆ.
ಇಂತಹ ಅಗ್ಗದ ಸ್ಟಂಟ್‌ಗಳ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿರುವ ಇಂತಹವರನ್ನು ನಿರ್ಲಕ್ಷಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ದಿಯಾ ಕುಮಾರಿಯವರು ಅಂತಹ ಹೇಳಿಕೆಗಳನ್ನು ನೀಡಬಾರದು ಮತ್ತು ಮೊಘಲರು ಮತ್ತು ರಜಪೂತರ ಪ್ರೀತಿಯ ಬಂಧಗಳನ್ನು ಮುರಿಯಲು ಪ್ರಯತ್ನಿಸಬಾರದು ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement