8ನೇ ಮಹಡಿ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬ ಟವರ್ ಮೇಲೆ ಹತ್ತಿದ ವೀಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ಕಝಾಕಿಸ್ತಾನ್‌ನಲ್ಲಿ ಈ ಘಟನೆ ನಡೆದಿದ್ದು, ಸಾಬಿತ್ ಶೊಂಟಕ್‌ಬೇವ್ ಎಂಬ ವ್ಯಕ್ತಿ ಟವರ್ ಬ್ಲಾಕ್‌ನ 8ನೇ ಮಹಡಿ ಕಿಟಕಿಯಿಂದ ನೇತಾಡುತ್ತಿರುವ ಪುಟ್ಟ ಮಗುವನ್ನು ರಕ್ಷಿಸಿದ್ದಾನೆ. ಈ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಗುಡ್ ನ್ಯೂಸ್ ವರದಿಗಾರರಿಂದ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊ ಪ್ರಕಾರ, ಮೂರು ವರ್ಷದ ಬಾಲಕಿಯನ್ನು ರಕ್ಷಿಸಲು ಸಬಿತ್ ಸುಮಾರು 80 ಅಡಿಗಳಷ್ಟು ಎತ್ತರಕ್ಕೆ ಏರುತ್ತಿರುವುದನ್ನು ತೋರಿಸುತ್ತದೆ. “ಸಬಿತ್ ಶೊಂಟಾಕ್‌ಬೇವ್ ನಿನ್ನೆ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಕಟ್ಟಡದ 8ನೇ ಮಹಡಿಯಲ್ಲಿ ಕಿಟಕಿಯಿಂದ ತೂಗಾಡುತ್ತಿರುವ ಪ್ರಾಣ ಹಿಡಿದುಕೊಂಡ ಮಗುವನ್ನು ನೋಡಿದ್ದಾನೆ. ತಕ್ಷಣವೇ, ಸಾಬಿತ್ ಕಟ್ಟಡದೊಳಗೆ ಧಾವಿಸಿ ಕೆಳಗಿನ ಅಪಾರ್ಟ್ಮೆಂಟಿಗೆ ಪ್ರವೇಶವನ್ನು ಪಡೆದಿದ್ದಾರೆ.”
‘ನನಗೆ ಸುರಕ್ಷತಾ ಸರಂಜಾಮು ಇರಲಿಲ್ಲ, ಆದ್ದರಿಂದ ನನ್ನ ಸ್ನೇಹಿತ ನನ್ನ ಕಾಲುಗಳನ್ನು ಹಿಡಿದನು.’ ಆ ಕ್ಷಣದಲ್ಲಿ ನಾನು ಯಾವುದರ ಬಗ್ಗೆ ಯೋಚಿಸಲಿಲ್ಲ, ನಾನು ಮಗುವಿಗೆ ಸಹಾಯ ಮಾಡಲು ಬಯಸಿದ್ದೆ ಎಂದು ಸಾಬಿತ್ ಹೇಳಿದರು.
ನನಗೂ 4 ಮಕ್ಕಳದ್ದಾರೆ. ಹೀಗಾಗಿ ನಾನು ಬೇರೆ ಎನನ್ನೂ ಯೋಚಿಸಿದೆ ಮಗುವನ್ನು ರಕ್ಷಿಸಲು ಮುಂದಾದೆ ಎಂದು ಹೇಳಿದ್ದಾರೆ. ಅವರ ಸಾಹಸಕ್ಕೆ ನಗರದ ಉಪ ತುರ್ತು ಸಚಿವರಿಂದ ಪದಕವನ್ನು ನೀಡಲಾಯಿತು ಎಂದು ಟ್ವಿಟರ್ ಥ್ರೆಡ್ ನಲ್ಲಿ ಹೇಳಲಾಗಿದೆ.
ಈ ವೀಡಿಯೊ ಅನೇಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅಂಬೆಗಾಲಿಡುವ ಮಗುವನ್ನು ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಕ್ಕಾಗಿ ಜನರು ಧೈರ್ಯಶಾಲಿ ವ್ಯಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ