2019 ರ ವಿಧಾನಸಭಾ ಚುನಾವಣೆ ನಂತರ ಮೈತ್ರಿ ಮುರಿದಾಗ ಕತ್ತೆಗಳನ್ನು ಶಿವಸೇನೆ ಹೊರಹಾಕಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮುಂಬೈ:ಮಹಾರಾಷ್ಟ್ರದಲ್ಲಿ 2019 ರ ವಿಧಾನಸಭಾ ಚುನಾವಣೆಯ ನಂತರ ಪಕ್ಷದೊಂದಿಗಿನ ಮೈತ್ರಿ ಮುರಿದಾಗ ಶಿವಸೇನೆ ‘ಕತ್ತೆಗಳನ್ನು’ ಹೊರಹಾಕಿದೆ ಎಂದು ಬಿಜೆಪಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗದಾಳಿ ನಡೆಸಿದ್ದಾರೆ.
ಶನಿವಾರ ಸಂಜೆ ಮುಂಬೈನಲ್ಲಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “[ದೇವೇಂದ್ರ] ಫಡ್ನವಿಸ್ ನಾವು ಗಧಾ [ಕತ್ತೆ] ಧಾರಿ ಹಿಂದೂಗಳು ಎಂದು ಹೇಳಿದರು, ಆದರೆ ನಾನು ನಿಮಗೆ ಹೇಳುತ್ತೇನೆ, ನಾವು ನಿಮ್ಮೊಂದಿಗೆ (ಬಿಜೆಪಿ) ಮೈತ್ರಿ ಮುರಿದಾಗ ನಾವು ಕತ್ತೆಗಳನ್ನು ಹೊರಹಾಕಿದ್ದೇವೆ. ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ನಮ್ಮ 25 ವರ್ಷಗಳು ವ್ಯರ್ಥವಾಯಿತು ಎಂದು ಹೇಳಿದ್ದಾರೆ ಎಂದು ಇಂಡಿಯಾ ಟುಡೆ.ಇನ್‌ ವರದಿ ಮಾಡಿದೆ.
ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ತಹಸಿಲ್ ಕಚೇರಿಯಲ್ಲಿ ಭಯೋತ್ಪಾದಕರು ಕೊಂದರು, ಈಗ ನೀವು [ಬಿಜೆಪಿ] ಏನು ಮಾಡುತ್ತೀರಿ? ನೀವು ಅಲ್ಲಿ ಹನುಮಾನ್ ಚಾಲೀಸಾವನ್ನು ಓದುತ್ತೀರಾ? ಎಂದು ಉದ್ಧವ್‌ ಠಾಕ್ರೆ ಪ್ರಶ್ನಿಸಿದರು.
ಕೆಲವು ನಕಲಿ ಹಿಂದುತ್ವವಾದಿಗಳು ನಮ್ಮ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ, ಬಾಳಾಸಾಹೇಬ್ ಠಾಕ್ರೆ ದೇವಸ್ಥಾನಗಳಲ್ಲಿ ಗಂಟೆ ಬಾರಿಸುವ ಹಿಂದೂಗಳು ನಮಗೆ ಬೇಕಾಗಿಲ್ಲ, ನಮಗೆ ಭಯೋತ್ಪಾದಕರನ್ನು ಹೊಡೆದುರುಳಿಸುವ ಹಿಂದೂಗಳು ನಮಗೆ ಬೇಕು ಎಂದು ನಮಗೆ ಕಲಿಸಿದ್ದಾರೆ. ನಮ್ಮ ರಕ್ತನಾಳಗಳಲ್ಲಿ ಕೇಸರಿ ರಕ್ತವಿದೆ, ಸವಾಲು ಹಾಕಲು ಪ್ರಯತ್ನಿಸಬೇಡಿ ಎಂದು ಉದ್ಧವ್ ಠಾಕ್ರೆ ಗುಡುಗಿದ್ದಾರೆ.
ನಮ್ಮ ಹಿಂದುತ್ವವನ್ನು ನಿರ್ಧರಿಸಲು ನೀವು ಯಾರು? ನಾವು ಕಾಂಗ್ರೆಸ್ ಜೊತೆ ಹೋಗಿದ್ದರಿಂದ ನಾವು ಹಿಂದುತ್ವ ಕಡಿಮೆಯೇ? ಧ್ವನಿವರ್ಧಕ ಸಮಸ್ಯೆಯನ್ನು ಅಸಂಬದ್ಧ ಎಂದು ಹೇಳಿದ ನಿತೀಶ್ ಕುಮಾರ್ ಬಗ್ಗೆ ನಿಮ್ಮ ನಿಲುವು ಏನು ಎಂದು ಕೇಳಿದ್ದಾರೆ ಎಂದು ವರಿ ಹೇಳಿದೆ.

ಓದಿರಿ :-   ಎನ್‌ಐಎ ಅಧಿಕಾರಿ-ಪತ್ನಿ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ