5 ಜೀವಗಳನ್ನು ಉಳಿಸಿದ ದೆಹಲಿಯ ಏಮ್ಸ್‌ನ 6 ವರ್ಷದ ಏಮ್ಸ್‌ನ ಅತ್ಯಂತ ಕಿರಿಯ ಅಂಗದಾನಿ…!

ನವದೆಹಲಿ: ನೋಯ್ಡಾದಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಸಾವಿಗೀಡಾದ 6 ವರ್ಷದ ಮಗು ರೋಲಿ ಪ್ರಜಾಪತಿಯ ಪೋಷಕರು ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಿ ಐದು ಜೀವಗಳನ್ನು ಉಳಿಸಿದ್ದಾರೆ, ಏಮ್ಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ರೋಲಿ ಪ್ರಜಾಪತಿ ಪಾತ್ರರಾಗಿದ್ದಾರೆ. ರೋಲಿ ತಲೆಗೆ ಗುಂಡು ತಗುಲಿದ ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಶೀಘ್ರದಲ್ಲೇ, … Continued

ಕಾರವಾರ: ಮೊಮ್ಮಗು ನೋಡಲು ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ…!

ಕಾರವಾರ: ಮಗು ನೋಡಲು ಬಂದ ಪ್ರಿಯತಮೆಯ ತಾಯಿಗೆ ಕುಡಿದ ಅಮಲಿನಲ್ಲಿ ಆಸ್ಪತ್ರೆಯಲ್ಲೇ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ದಾಂಡೇಲಿ ಮೂಲದ ರಮಜಾನ್ (25) ಎಂಬಾತ ತನ್ನ ಅತ್ತೆ ಕದ್ರಾದವಳಾದ ಮಹಮ್ಮದಬೀ ಎಂಬಾಕೆಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಮಹಮ್ಮದಬೀ ತನ್ನ … Continued

ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ನವದೆಹಲಿ: ಶೇಕಡಾ 50 ರಷ್ಟು ಮಿತಿಯೊಂದಿಗೆ ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ತನ್ನ ಒಪ್ಪಿಗೆ ನೀಡಿದೆ. ಎರಡು ವಾರಗಳಲ್ಲಿ ಸ್ಥಳೀಯ ಚುನಾವಣೆಯ ಬಗ್ಗೆ ಸುಪ್ರೀಂ ಕೋರ್ಟಿಗೆ ತಿಳಿಸಲು ಮಧ್ಯಪ್ರದೇಶದ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಐದು ವರ್ಷಗಳ ಅವಧಿ ಮುಗಿದ ನಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಬಾಕಿಯಿದ್ದರೆ, ಡಿಲಿಮಿಟೇಶನ್‌ ಮತ್ತು ಮೀಸಲಾತಿ … Continued

ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ, ಜೂನ್‌​ 9ಕ್ಕೆ ಕಾಲೇಜು ಆರಂಭ- ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಹಿಜಬ್ ವಿವಾದ ಹಿನ್ನಲೆಯಲ್ಲಿ ಪಿಯುಸಿ ಬೋರ್ಡ್ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ವರ್ಷದಿಂದ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಪಿಯು ಬೋರ್ಡ್‌ ಎಲ್ಲ ಕಾಲೇಜುಗಳಿಗೆ ಸೂಚಿಸಿದೆ.2022-23ನೇ‌ ಸಾಲಿನ‌ ಶೈಕ್ಷಣಿಕ ವರ್ಷಕ್ಕೆ ಪಿಯು ಬೋರ್ಡ್‌ ಕಾಲೇಜು ಪ್ರವೇಶ ಸಂಬಂಧ 128 ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪದವಿಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಪಿಯು … Continued

ಕುತುಬ್ ಮಿನಾರ್ ನಿರ್ಮಿಸಿದ್ದು ರಾಜಾ ವಿಕ್ರಮಾದಿತ್ಯ: ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರ ಹೇಳಿಕೆ

ನವದೆಹಲಿ: ಸ್ಮಾರಕಗಳ ವಿವಾದವು ತೀವ್ರಗೊಳ್ಳುತ್ತಿದ್ದಂತೆ, ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರ್ಮವೀರ ಶರ್ಮಾ ಅವರು ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಕುತುಬ್ ಮಿನಾರ್ ಅನ್ನು ರಾಜ ವಿಕ್ರಮಾದಿತ್ಯನಿಂದ ನಿರ್ಮಿಸಲಾಗಿದೆ. ಕುತುಬ್ ಅಲ್-ದಿನ್ ಐಬಕ್ ಅದನ್ನು ನಿರ್ಮಿಸಿಲ್ಲ ಎಂದು ಹೇಳಿದ್ದಾರೆ. ಇದು ಕುತುಬ್ ಮಿನಾರ್ ಅಲ್ಲ, ಇದು ಸೂರ್ಯನ ಗೋಪುರ (ವೀಕ್ಷಣಾ ಗೋಪುರ). … Continued

ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್‌ನ ಸಭಾಪತಿ ಸ್ಥಾನ ಹಾಗೂ ಪರಿಷತ್‌ ಸ್ಥಾನಕ್ಕೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಬಸವರಾಜ ಹೊರಟ್ಟಿ ಅವರು ಇಂದು, ಬುಧವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌ಟಿ ನಗರದ ನಿವಾಸದಲ್ಲಿ ಸರಳ ಕಾರ್ಯಕ್ರಮದಲ್ಲಿ ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ … Continued

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಜೀನಾಮೆ

ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಅನಿಲ್ ಬೈಜಾಲ್ ಬುಧವಾರ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅನಿಲ್ ಬೈಜಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ ಅವರ ಹಠಾತ್ ರಾಜೀನಾಮೆಯ ನಂತರ 2016 ಡಿಸೆಂಬರ್ 31 ರಂದು ದೆಹಲಿಯ ಲೆಫ್ಟಿನೆಂಟ್ … Continued

ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: 2015ರಲ್ಲಿ ನಡೆದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೀನಾ ತಾಯಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ. ಇಂದ್ರಾಣಿ ಕಳೆದ 6.5 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಪರಿಗಣಿಸಿತು. ನಾವು ಇಂದ್ರಾಣಿ … Continued

ನಾಳೆ ಮಧ್ಯಾಹ್ನ 12:30ಕ್ಕೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ

ಬೆಂಗಳೂರು: ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ನಾಳೆ, ಮೇ 19ರಂದು ಪ್ರಕಟವಾಗಲಿದೆ. ಮಾರ್ಚ್ 28 ರಿಂದ ಏ.11ರ ವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದಿದೆ. ಈಗಾಗಲೇ ಮೌಲ್ಯಮಾಪನ ಪೂರ್ಣಗೊಂಡಿದ್ದು, ಫಲಿತಾಂಶಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಾಳೆ, ಮೇ 19ರಂದು ಮಧ್ಯಾಹ್ನ 12:30ಕ್ಕೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶಕ್ಕಾಗಿ … Continued

ಈಜಿಪ್ಟ್‌ನಲ್ಲಿ ಪತ್ತೆಯಾದ ಬಾಹ್ಯಾಕಾಶ ಬಂಡೆ ಅಪರೂಪದ ಸೂಪರ್ನೋವಾ ಸ್ಫೋಟದ ಭೂಮಿಯ ಮೇಲಿನ ಮೊದಲ ಸಾಕ್ಷಿ ಎಂದ ವಿಜ್ಞಾನಿಗಳು..!

ನೈಋತ್ಯ ಈಜಿಪ್ಟ್‌ನಲ್ಲಿ ಕಂಡುಬಂದ ಸಣ್ಣ ಬೆಣಚುಕಲ್ಲು ಭೂಮಿಯಿಂದ ಬಂದದ್ದಲ್ಲ ಎಂದು ಸಂಶೋಧಕರು 2013 ರಲ್ಲಿ ಘೋಷಿಸಿದರು. ಎರಡು ವರ್ಷಗಳ ನಂತರ, ಇದು ಯಾವುದೇ ತಿಳಿದಿರುವ ಉಲ್ಕಾಶಿಲೆ ಅಥವಾ ಧೂಮಕೇತುವಿನ ಭಾಗವಲ್ಲ ಎಂದು ವಿಶ್ಲೇಷಣೆ ತೋರಿಸಿದೆ. ಮೊದಲ ಘೋಷಣೆಯ ಸುಮಾರು ಒಂದು ದಶಕದ ನಂತರ, ಅಂದರೆ ಈಗ ಸಂಶೋಧಕರು ನಮ್ಮ ಸೌರವ್ಯೂಹದ ಹೊರಗಿನ ಸೂಪರ್ನೋವಾ ಸ್ಫೋಟವಾದ ಹೈಪೇಷಿಯಾ … Continued