1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು…ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ವಿಶ್ವದ ಪ್ರತಿಷ್ಠಿತ ಕಾರ್‌ ಕಂಪನಿಗಳಲ್ಲಿ ಒಂದಾದ ಮರ್ಸಿಡಿಸ್‌ ಬೆಂಜ್ (Mercedes-Benz) ಜರ್ಮನ್ ಮೂಲದ ಐಷಾರಾಮಿ ವಾಹನ ಬ್ರಾಂಡ್ ಆಗಿದೆ. ಪ್ರಸ್ತುತ 1955ರ ಮರ್ಸಿಡಿಸ್ ಬೆಂಜ್ ಕಾರ್‌ ಈಗ ದಾಖಲೆಯ ಬೆಲೆಗೆ ಹರಾಜಿನಲ್ಲಿ ಮಾರಟವಾಗಿದ್ದು, ಈ ಮೂಲಕ ಇದುವರೆಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ಕಾರು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1955ರ ಮರ್ಸಿಡಿಸ್-ಬೆಂಜ್ ಅನ್ನು ಈ ತಿಂಗಳ ಆರಂಭದಲ್ಲಿ 135 ಮಿಲಿಯನ್ ಯುರೋಗಳಿಗೆ (ಅಂದರೆ 1100 ಕೋಟಿ ಭಾರತೀಯ ರೂಪಾಯಿ) ಹರಾಜಾಗಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಈ ಮಾರಾಟದಿಂದ ಈ ಬೆಂಜ್‌ ಕಾರು ಇದುವರೆಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಕೆನಡಾ ಮೂಲದ ಹರಾಜು ಕಂಪನಿ ಆರ್‌ಎಂ ಸೋಥೆಬಿ ತಿಳಿಸಿದೆ.
1955ರ ಮರ್ಸಿಡಿಸ್-ಬೆನ್ಜ್ 300 SLR ಉಹ್ಲೆನ್‌ಹಾಟ್ ಕೂಪೆಯನ್ನು ಖಾಸಗಿ ಸಂಗ್ರಾಹಕರಿಗೆ 1,35,000,000 ಯುರೋಗಳ ದಾಖಲೆ ಬೆಲೆಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ” ಎಂದು ಕ್ಲಾಸಿಕ್ ಕಾರ್ ಹರಾಜು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್-ಬೆಂಜ್ ವಸ್ತುಸಂಗ್ರಹಾಲಯದಲ್ಲಿ ಮೇ 5 ರಂದು ನಡೆದ ರಹಸ್ಯ ಹರಾಜಿನಲ್ಲಿ ಈ ದಾಖಲೆಯ ಮಾರಾಟವನ್ನು ಮಾಡಲಾಗಿದೆ ಎಂದು ಮರ್ಸಿಡಿಸ್ ಬೆಂಜ್ ಅಧ್ಯಕ್ಷ ಓಲಾ ಕೆಲೆನಿಯಸ್ ಖಚಿತಪಡಿಸಿದ್ದಾರೆ. ಮಾಂಟೆ ಕಾರ್ಲೋ ಬಳಿ ಮೇ 18 ರಂದು ನಡೆದ ಸಂದರ್ಶನವೊಂದರಲ್ಲಿ ಕೆಲೆನಿಯಸ್ ಹೇಳಿದ್ದಾರೆ.

ಓದಿರಿ :-   2028ರ ವೇಳೆಗೆ ಬಾಹ್ಯಾಕಾಶದಲ್ಲೇ ಸೌರ ವಿದ್ಯುತ್ ಸ್ಥಾವರ ನಿರ್ಮಾಣ, ಅಲ್ಲಿಂದಲೇ ಭೂಮಿಗೆ ವಿದ್ಯುತ್ ರವಾನೆ : ಚೀನಾ ಯೋಜನೆ...!

ಈ ಹರಾಜು ಬೆಲೆ $ 143 ಮಿಲಿಯನ್ ಮಾರಾಟವಾಗಿದ್ದು, ಇದು ಹಿಂದಿನ ದಾಖಲೆ $95 ಮಿಲಿಯನ್‌ ಅನ್ನು ಮುರಿದಿದೆ. ಈ ಹಿಂದೆ 2018ರಲ್ಲಿ 1962ರ ಫೆರಾರಿ 250 ಜಿಟಿ 48 ಮಿಲಿಯನ್‌ ಗೆ ಮಾರಟವಾಗುವ ಮೂಲಕ ತನ್ನ ಹೆಸರಿಗೆ ಮಾರಾಟವಾದ ಅತ್ಯಂತ ದುಬಾರಿ ಕಾರು ಎಂಬ ದಾಖಲೆಯನ್ನು ಹೊಂದಿತ್ತು. ಇದನ್ನು ಅಮೆರಿಕದ ಉದ್ಯಮಿ ಮತ್ತು ಪ್ರಮುಖ ಫೆರಾರಿ ಸಂಗ್ರಾಹಕ ಡೇವಿಡ್ ಮ್ಯಾಕ್‌ನೀಲ್ ಖರೀದಿಸಿದ್ದರು. ಸದ್ಯ ಈ ದಾಖಲೆಯನ್ನು ಬ್ರೇಕ್‌ ಮಾಡಿರುವ ಮರ್ಸಿಡಿಸ್-ಬೆಂಜ್ 300 SLR ಅದರ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.
ಈ ಕಾರು 1954 ಮತ್ತು 1955 ರಲ್ಲಿ ಇಟಾಲಿಯನ್ ಜುವಾನ್ ಮ್ಯಾನುಯೆಲ್ ಫಾಂಗಿಯೊ ಅವರೊಂದಿಗೆ ಎರಡು ಫಾರ್ಮುಲಾ 1 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದುಕೊಂಡಿದೆ. “ಯಾವುದೇ ಸಂಗ್ರಹಣೆ ವರ್ಗದಲ್ಲಿ ಹರಾಜಿನಲ್ಲಿ ಮಾರಾಟವಾದ ಟಾಪ್ 10 ಅತ್ಯಮೂಲ್ಯ ವಸ್ತುಗಳಲ್ಲಿ ಇದನ್ನು ಇರಿಸಲಾಗಿದೆ” ಎಂದು ಹರಾಜು ಸಂಸ್ಥೆ ಹೇಳಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ