ತಾಳಿ ಕಟ್ಟುವ ವೇಳೆ ಮದುವೆ ಬೇಡವೆಂದು ಹೈಡ್ರಾಮಾ ಮಾಡಿದ ವಧು…!

posted in: ರಾಜ್ಯ | 0

ಮೈಸೂರು: ಮದುವೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ವಧು ತನಗೆ ಮದುವೆ ಬೇಡ ಎಂದು ಹೈಡ್ರಾಮಾ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಇಲ್ಲಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ವಧು ತಾಳಿ ಕಟ್ಟುವ ಸಮಯದಲ್ಲಿ ತಲೆ ಸುತ್ತಿ ಬಿದ್ದು ಹೈಡ್ರಾಮಾ ನಡೆಸಿದ್ದಾಳೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಮೈಸೂರಿನ ಸುಣ್ಣದಕೇರಿ ಯುವತಿಯ ಮದುವೆ, ಎಚ್.ಡಿ ಕೋಟೆ ತಾಲೂಕಿನ ಯುವಕನ ಜೊತೆ ನಿಶ್ಚಯವಾಗಿತ್ತು. ಆದರೆ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಈ ವಿಷಯವನ್ನು ಬಾಯಿ ಬಿಟ್ಟಿರಲಿಲ್ಲ. ಈ ನಡುವೆ ಆಕೆಗೆ ಮದುವೆ ನಿಶ್ಚಯವಾದಾಗ ಆಕೆಯ ಪ್ರಿಯಕರನಿಂದ ಮದುವೆಯಾಗದಂತೆ ವರನಿಗೆ ಮೆಸೇಜ್ ಬಂದಿದೆ.
ಈ ಬಗ್ಗೆ ಯುವತಿಯನ್ನು ವಿಚಾರಿಸಿದಾಗ ಈ ಮೆಸೇಜ್​ಗೂ ತನಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾಳೆ. . ಇನ್ನೇನು ಎಲ್ಲಾ ಕಾರ್ಯಗಳು ಮುಗಿದು ಮದುಮಗ ಆಕೆಗೆ ಮಂಗಳಸೂತ್ರ ಕಟ್ಟಬೇಕಿತ್ತು. ಅಷ್ಟರಲ್ಲಿಯೇ ಯುವತಿ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ. ಎಲ್ಲರೂ ಗಾಬರಿಯಿಂದ ಹತ್ತಿರ ಹೋಗಿ ನೋಡಿದಾಗ ಎಚ್ಚರಗೊಂಡವಳಂತೆ ನಾಟಕ ಮಾಡಿದ ಆಕೆ ನಾನು ಈತನನ್ನು ಮದುವೆಯಾಗುವುದಿಲ್ಲ, ನನ್ನ ಪ್ರೇಮಿಯನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದಾಳೆ.

ಓದಿರಿ :-   ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಎತ್ತಂಗಡಿ

ನಂತರ ತಾನು ಈ ಮದುವೆ ಆಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ವರನ ಬದಲಿಗೆ ಮನೆಯ ಪಕ್ಕದ ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಆತನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದಾಳೆ.ಎಚ್‌.ಡಿ. ಕೋಟೆ ತಾಲ್ಲೂಕಿನ ಗ್ರಾಮವೊಂದರ ವರನ ಕಡೆಯವರು ಇದರಿಂದ ಕೋಪಗೊಂಡು ವಧು ಕಡೆಯವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಮದುವೆಗೆ ಈಗಾಗಲೇ ಸುಮಾರು 5 ಲಕ್ಷ ರೂ. ಖರ್ಚು ಮಾಡಿದ್ದು, ಹಣ ವಾಪಸ್‌ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ವಧುವನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದ್ದು, ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ