ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ…! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಜಮೈಕಾ: ಬೋನ್‍ನಲ್ಲಿದ್ದ ಸಿಂಹದ ಜೊತೆಗೆ ಚೆಲ್ಲಾಟವಾಡುತ್ತಿದ್ದ ವ್ಯಕ್ತಿಯೊಬ್ಬನ ಬೆರಳನ್ನು ಸಿಂಹವೊಂದು ಕಿತ್ತು ತಿಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಮೈಕಾ ಮೃಗಾಲಯದ್ದು ಎಂದು ಹೇಳಲಾದ ಈ ವೀಡಿಯೊದಲ್ಲಿ ಪ್ರವಾಸಿಗನೊಬ್ಬ ಬೋನ್‍ನಲ್ಲಿದ್ದ ಸಿಂಹದ ಜೊತೆ ಆಟವಾಡಲು ಪ್ರಯತ್ನಿಸಿದ್ದಾನೆ. ಬೋನಿನ ಒಳಗೆ ಕೈ ಬೆರಳು ಹಾಕಿದ್ದಾನೆ.

ಮೊದಮೊದಲು ಆರ್ಭಟಿಸುತ್ತಿದ್ದ ಸಿಂಹ ನಂತರ ಈ ವ್ಯಕ್ತಿ ಪದೇಪದೇ ಬೋನಿನೊಳಗೆ ಬೆರಳನ್ನು ಹಾಕಿ ಅದಕ್ಕೆ ಕಿರಿಕಿರ ಮಾಡಿದ್ದಕ್ಕೆ ಸಿಟ್ಟುಗೊಂಡು ಆತನ ಕೈ ಬೆರಳನ್ನೇ ಕಚ್ಚಿ ಹಿಡಿದಿದೆ. ಸಿಂಹದ ದವಡೆಗೆ ಕೈ ಸಿಲುಕಿಸಿಕೊಂಡು ಅದರಿಂದ ಬಿಡಿಸಿಕೊಳ್ಳಲು ವ್ಯಕ್ತಿ ಹೆಣಗಾಡಿದ್ದಾನೆ. ಕೊನೆಗೂ ಸಿಂಹದ ಬಾಯಿಯಿಂದ ಕೈಯನ್ನು ಬಿಡಿಸಿಕೊಳ್ಳುವ ವೇಳೆ ಆತನ ಬೆರಳೇ ಕಟ್‌ ಆಗಿದೆ ಹೊರತು ಸಿಂಹ ತನ್ನ ಹಿಡಿತ ಬಿಡಲೇ ಇಲ್ಲ.

https://twitter.com/OneciaG/status/1528082220547809281?ref_src=twsrc%5Etfw%7Ctwcamp%5Etweetembed%7Ctwterm%5E1528082220547809281%7Ctwgr%5E%7Ctwcon%5Es1_&ref_url=https%3A%2F%2Fpublictv.in%2Flion-bites-off-mans-finger-at-jamaica-zoo-in-horrifying-footage-watch-viral-video%2F

ಈ ದೃಶ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವೀಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಶೋ ಆಫ್ ಮಾಡಲು ಹೋದರೆ ಹೇಗೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಮತ್ತು ಅದನ್ನು ಗೊಂದಲಕ್ಕೀಡಾಗುವಂತೆ ಮಾಡುವುದು ಒಳ್ಳೆಯದಲ್ಲ. ಪ್ರಾಣಿಸಂಗ್ರಹಾಲಯಗಳಿಗೆ ಭೇಟಿ ನೀಡುವ ಜನರು ನಿಯಮಗಳನ್ನು ಅನುಸರಿಸಬೇಕು ಮತ್ತು ಈ ಪ್ರಾಣಿಗಳ ಸಾಮೀಪ್ಯಕ್ಕೆ ಹೋಗುವುದರಿಂದ ದೂರವಿರಬೇಕು.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement