ಮಹಿಳೆಯನ್ನು ಕೊಂದ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ…!

ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಕುರಿಯೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ನಂತರ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸುಡಾನ್‌ನ ಐ ರೇಡಿಯೊ ಪ್ರಕಾರ, ಈ ತಿಂಗಳ ಆರಂಭದಲ್ಲಿ ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ದಾಳಿ ಮಾಡಿದ ನಂತರ ಕುರಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಕುರಿ ಚಾಪಿಂಗ್‌ ಮೇಲೆ ಪದೇ ಪದೇ ತಲೆಬಾಗಿಸಿ ದಾಳಿ ಮಾಡಿ ಆಕೆಯ ಪಕ್ಕೆಲುಬುಗಳನ್ನು ಮುರಿದಿತ್ತು. 45 ವರ್ಷದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರಿಂದ ತಕ್ಷಣವೇ ಮೃತಪಟ್ಟಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ರುಂಬೆಕ್ ಪೂರ್ವದ ಅಕುಯೆಲ್ ಯೋಲ್ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಲೆಂಗ್ ಆಗೋಕ್ ಪಾಯಂನ ಪೊಲೀಸ್ ಠಾಣೆಯಲ್ಲಿ ಕುರಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ಈ ಕುರಿಯು ಮುಂದಿನ ಮೂರು ವರ್ಷಗಳ ಕಾಲ ಸುಡಾನ್‌ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯಲ್ಲಿ ಮಿಲಿಟರಿ ಶಿಬಿರದಲ್ಲಿ ಕಳೆಯಲಿದೆ ಎಂದು ವರದಿ ಮಾಡಿದೆ. ಕುರಿ ಮಾಲೀಕ ಡುಯೋನಿ ಮಾನ್ಯಂಗ್ ಧಾಲ್ ಕೂಡ ಐದು ಹಸುಗಳನ್ನು ಮೃತ ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಬೇಕೆಂದು ಸ್ಥಳೀಯ ನ್ಯಾಯಾಲಯವು ತೀರ್ಪು ನೀಡಿದೆ.

ಓದಿರಿ :-   "ಟೆಕ್ಸಾಸ್‌ನಲ್ಲಿ ದುರಂತ": ಟ್ರಕ್‌ನೊಳಗೇ 46 ವಲಸಿಗರ ಸಾವು, ಅನೇಕರು ಆಸ್ಪತ್ರೆಗೆ ದಾಖಲು

ಧಲ್ ತನ್ನ ಶಿಕ್ಷೆಯ ಕೊನೆಯಲ್ಲಿ ಕುರಿಯನ್ನು ಕಳೆದುಕೊಳ್ಳುತ್ತಾನೆ ಏಕೆಂದರೆ ಪ್ರದೇಶದ ಸಾಂಪ್ರದಾಯಿಕ ಕಾನೂನುಗಳು ವ್ಯಕ್ತಿಯನ್ನು ಕೊಲ್ಲುವ ಯಾವುದೇ ಸಾಕುಪ್ರಾಣಿಗಳನ್ನು ಸಂತ್ರಸ್ತರ ಕುಟುಂಬಕ್ಕೆ ಪರಿಹಾರವಾಗಿ ನೀಡಲಾಗುತ್ತದೆ ಎಂದು ಹೇಳುತ್ತದೆ.
ಏತನ್ಮಧ್ಯೆ, ಕುರಿಯಿಂದ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಹಿಳೆಯೊಬ್ಬರು ಕೂಡ ಜಮೀನಿನಲ್ಲಿ ಕುರಿಗಳ ದಾಳಿಯಿಂದ ಸಾವಿಗೀಡಾಗಿದ್ದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ