ಪ್ರಾಂಶುಪಾಲ ಪತಿಗೆ ಕ್ರಿಕೆಟ್ ಬ್ಯಾಟ್‍, ದೊಣ್ಣೆಯಿಂದ ಥಳಿಸುವ ಪತ್ನಿ :ಸಿಸಿಟಿವಿ ಸಾಕ್ಷ್ಯದೊಂದಿಗೆ ಕೋರ್ಟ್‌ ಮೊರೆ ಹೋದ ಪತಿ…ವೀಕ್ಷಿಸಿ

ಜೈಪುರ: ಕೌಟುಂಬಿಕ ಹಿಂಸಾಚಾರದ ವಿಚಿತ್ರ ಪ್ರಕರಣದಲ್ಲಿ, ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಪ್ರಾಂಶುಪಾಲರೊಬ್ಬರು ತಮ್ಮ ಪತ್ನಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ರಕ್ಷಣೆ ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ.
ಪ್ರಾಂಶುಪಾಲರ ಪ್ರಕಾರ, ಅವರ ಹೆಂಡತಿ ಅವರನ್ನು ಹೊಡೆಯುವುದರಿಂದ ತಾವು ಮಾನಸಿಕವಾಗಿ ದುರ್ಬಲರಾಗಿರುವುದಾಗಿ ಕೋರ್ಟಿಗೆ ತಿಳಿಸಿದ್ದಾರೆ.

ಪೊಲೀಸ್ ದೂರಿನಲ್ಲಿ, ತೊಂದರೆಗೀಡಾದ ಪ್ರಾಂಶುಪಾಲರು, ಪತ್ನಿ ತನ್ನ ಮೇಲೆ ಪ್ಯಾನ್, ಸ್ಟಿಕ್ ಮತ್ತು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಾಂಶುಪಾಲರು ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಮನೆಯಲ್ಲಿ ಗೊತ್ತಾಗದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ, ಮಗನ ಮುಂದೆಯೇ ಮಹಿಳೆ ಪ್ರಾಂಶುಪಾಲರನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಪ್ರಾಂಶುಪಾಲರು ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋದ ಸಂದರ್ಭದಲ್ಲಿ ಘಟನೆಯ ದೃಶ್ಯಾವಳಿಗಳನ್ನು ಹಾಜರುಪಡಿಸಿದ್ದಾರೆ. ಹಾಗೂ ನನ್ನ ಪತ್ನಿ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಈ ಹಿನ್ನೆಲೆ ನನಗೆ ರಕ್ಷಣೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಅವರಿಗೆ ಭದ್ರತೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಾಂಶುಪಾಲ ಅಜಿತ್ ಸಿಂಗ್ ಯಾದವ್ ಏಳು ವರ್ಷಗಳ ಹಿಂದೆ ಹರಿಯಾಣದ ಸೋನಿಪತ್ ನಿವಾಸಿ ಸುಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಆರಂಭದಲ್ಲಿ, ಅವರ ಜೀವನವು ಶಾಂತಿಯುತವಾಗಿತ್ತು ಆದರೆ ಸ್ವಲ್ಪ ಸಮಯದ ನಂತರ ಹಿಂಸಾಚಾರ ಪ್ರಾರಂಭವಾಯಿತು. ಆಗಾಗ್ಗೆ ಹೆಂಡತಿಯ ಹಿಂಸಾಚಾರದಿಂದ, ಅಜಿತ್ ಸಿಂಗ್ ಹಲವಾರು ಗಾಯಗೊಂಡಿದ್ದೆ ಮತ್ತು ಗುಣಪಡಿಸಲು ವೈದ್ಯಕೀಯ ಸಹಾಯವನ್ನು ಪಡೆಯುತ್ತಿದ್ದೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ತನ್ನ ಶಿಕ್ಷಕ ವೃತ್ತಿಯ ಘನತೆಯನ್ನು ಗಮನದಲ್ಲಿಟ್ಟುಕೊಂಡು ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದೆ ಎಂದು ಸಿಂಗ್ ಹೇಳುತ್ತಾರೆ. “ಆದರೆ ಈಗ ನನ್ನ ಹೆಂಡತಿ ಎಲ್ಲಾ ಮಿತಿಗಳನ್ನು ದಾಟಿದ ಕಾರಣ ನಾನು ಕೋರ್ಟ್‌ ಮೊರೆ ಹೋಗಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವತ್ತೂ ಸುಮನ್ ಮೇಲೆ ಕೈ ಎತ್ತಿಲ್ಲ ಮತ್ತು ಕಾನೂನನ್ನು ಕೈಗೆ ತೆಗೆದುಕೊಂಡಿಲ್ಲ. ನಾನು ಒಬ್ಬ ಶಿಕ್ಷಕ. ಶಿಕ್ಷಕ ಮಹಿಳೆಯ ಮೇಲೆ ಕೈ ಎತ್ತಿ ಕಾನೂನನ್ನು ತನ್ನ ಕೈಗೆ ತೆಗೆದುಕೊಂಡರೆ ಅದು ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಕ ಸ್ಥಾನದ ಗೌರವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement