ಕಲಬುರಗಿ: ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಹತ್ಯೆ; ಇಬ್ಬರು ಆರೋಪಿಗಳ ಬಂಧನ

posted in: ರಾಜ್ಯ | 0

ಕಲಬುರಗಿ: ವಾಡಿಯಲ್ಲಿ ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದೆ.ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ವಿಜಯ್​ ಕಾಂಬಳೆ (28) ಭೀಕರವಾಗಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

advertisement

ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕಾಗಿ ವಿಜಯ ಕಾಂಬಳೆಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ವಾಡಿಯ ಭೀಮಾನಗರ ಬಡಾವಣೆಯ ನಿವಾಸಿ ವಿಜಯ ಕಾಂಬಳೆ ಅನ್ಯ ಧರ್ಮದ ಮಹಿಳೆಯನ್ನು ಪ್ರೀತಿಸುತ್ತಿದ್ದ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದರು. ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿಜಯ್​ ಕಾಂಬಳೆಯನ್ನು ರೈಲ್ವೇ ನಿಲ್ದಾಣ ಬಳಿ ತಡೆದ ದುಷ್ಕರ್ಮಿಗಳು ಆತನ ಮೇಲೆ ಕಲ್ಲು, ಇಟ್ಟಿಗೆಯಿಂದ ದಾಳಿ ಮಾಡಿದ್ದಾರೆತೀವ್ರ ರಕ್ತ ಸ್ರಾವದಿಂದ ವಿಜಯ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಸಂಬಂಧ ಇಬ್ಬರ ಬಂಧನ
ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮುಸ್ಲಿಂ  ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಎಂ.ಡಿ ಶಾಬುದ್ದಿನ್ (19), ಎಂಡಿ ನವಾಜ್ (19) ಬಂಧಿತ ಆರೋಪಿಗಳು, ಕೊಲೆಯಾದ ವಿಜಯ್ ಕಾಂಬಳೆ, ಆರೋಪಿ ಶಾಬುದ್ಧೀನ್ ಎಂಬಾತನ ಸಹೋದರಿ ಕಳೆದ 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಇದು ಮನೆಯವರಿಗೆ ಸರಿ ಬರಲಿಲ್ಲ. ಇದಕ್ಕಾಗಿ ವಿಜಯ ಕಾಂಬಳೆ ಅವರನ್ನು ಕೊಲೆ ಮಾಡಲಾಗಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾಬುದ್ದೀನ್ , ಸ್ನೇಹಿತರೊಂದಿಗೆ ವಾಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಕಲಬುರ್ಗಿ ಯಲ್ಲಿ ತಲೆ ಮರೆಸಿಕೊಂಡಿದ್ದರು. ಕಲಬುರ್ಗಿಯಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿದ ವಾಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಓದಿರಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

ಫೋನ್ ಕರೆ ಸ್ವೀಕರಿಸಿದ ನಂತರ ಮನೆಯಿಂದ ಹೊರಬಂದಿದ್ದ ಎಂದು ತಾಯಿ ಹೇಳಿದ್ದಾರೆ. ಅವನು ಯಾರೊಂದಿಗೆ ಮಾತನಾಡುತ್ತಿದ್ದಾನೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಅದರ ನಂತರ, ನಾವು ಅವನಿಗೆ ಕೇಳಲಿಲ್ಲ. ಅವನನ್ನು ಹೊಡೆದಿದ್ದಾರೆ ಎಂದು ನನಗೆ ಕರೆ ಬಂದಿತು. ನಾನು ಓಡಿದೆ. ಅವರು ಅವನನ್ನು ಇರಿದು ತಲೆಗೆ ಹೊಡೆದಿದ್ದಾರೆ”ಎಂದು ವಿಜಯ್​ ಕಾಂಬಳೆ ತಾಯಿ ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement