ಬಾಗಲಕೋಟೆ: ಸಲೂನ್ನಲ್ಲಿ ತಲೆ ಕೂದಲಿಗೆ ಕಲರ್ ಹಾಕುವ ಬೆಲೆಯ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಗುರುವಾರ (ಮೇ 26) ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ಸಾಗರ ಅವಟಿ (22) ಕೊಲೆಯಾದ ಯುವಕ ಎಂದು ಗರುತಿಸಲಾಗಿದೆ.
ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ ಎಂದು ಹೇಳಲಾಗಿದೆ. ಈ ಘಟನೆ ಅಸಂಗಿ ಗ್ರಾಮದ ಪ್ರಜ್ವಲ್ ಜೆಂಟ್ಸ್ ಪಾರ್ಲರ್ನಲ್ಲಿ ಈ ಘಟನೆ ನಡೆದಿದ್ದು, ಸಾಗರ ಎಂಬ ಯುವಕ ತಲೆಗೆ ಬಣ್ಣ ಹಚ್ಚಲು ಸಲೂನ್‌ಗೆ ಆಗಮಿಸಿದ್ದ ಎನ್ನಲಾಗಿದೆ. ಸಲೂನ್ ಮಾಲೀಕ ಲಕ್ಷ್ಮಣ ಬಣ್ಣ ಹಚ್ಚಲು ಮುಂದಾಗಿದ್ದ ವೇಳೆ ಪಕ್ಕದ ಟೇಬಲ್ನಲ್ಲಿ ಸದಾಶಿವ ನಾವಿ ಎಂಬ ಕ್ಷೌರಿಕ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದ.

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/ಕಲರ್ ಹಚ್ಚಲು 29 ರೂಪಾಯಿ ಕೊಡುವುದಾಗಿ ಲಕ್ಷ್ಮಣನಿಗೆ ಸಾಗರ ಹೇಳಿದ್ದ. ಇದಕ್ಕೆ ತಕರಾರು ತೆಗದ ಸದಾಶಿವ ನಾವಿ ಜಗಳಕ್ಕೆ ಇಳಿದಿದ್ದ. ಈ ಹಿಂದೆ ಸದಾಶಿವ ನಾವಿಯನ್ನು ಸಾಗರ ರೇಗಿಸುತ್ತಿದ್ದನಂತೆ. ಹೀಗಾಗಿ ಈ ಬಾರಿ ಈತ ಸಾಗರ ಜೊತೆ ಜಗಳಕ್ಕೆ ಇಳಿದಿದ್ದ ಎಂದು ಹೇಳಲಾಗಿದೆ. ಇಬ್ಬರ ಜಗಳ ತಾರಕಕ್ಕೇರಿದಾಗ ತಾಳ್ಮೆ ಕಳೆದುಕೊಂಡ ಸದಾಶಿವ ಕತ್ತರಿಯಿಂದ ಸಾಗರನ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಕೂಡಲೆ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದಾಶಿವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ