ಮದುವೆಗೆ ಫೋಟೋಗ್ರಾಫರ್-ವಿಡಿಯೋಗ್ರಾಫರ್ ಕರೆಸಲಿಲ್ಲವೆಂದು ಮಂಟಪದಲ್ಲೇ ಮದುವೆ ಮುರಿದುಬಿತ್ತು….!

ಕಾನ್ಪುರ: ಉತ್ತರ ಪ್ರದೇಶದ ವಧುಗಳು ಧೈರ್ಯಶಾಲಿಯಾಗುತ್ತಿದ್ದಾರೆ ಮತ್ತು ಕಳೆದ ಕೆಲವು ವಾರಗಳಲ್ಲಿ ವಧುಗಳು ಬೇರೆಬೇರೆ ಕಾರಣಕ್ಕೆ ತಾವು ಮದುವೆಯಾಗುವ ಗಂಡುಗಳನ್ನು ದೂರ ಮಾಡಿದ್ದಾರೆ. ಬೋಳು ತಲೆಯಿರಬಹುದು ಅಥವಾ ಮತ್ತಿನ್ನೇನೋ ಕಾರಣಕ್ಕೆ ಇರಬಹುದು. ಈಗ ಇಂಥದ್ದೇ ಒಂದು ಕ್ಷುಲ್ಲಕ ಕಾರಣ ಉತ್ತರ ಪ್ರದೇಶದಲ್ಲಿ ಮದು ಮಗಳು ಮದುವೆ ಮಂಟಪದಲ್ಲೇ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

advertisement

ಇದಕ್ಕೆ ಕಾರಣ ವರನು ಛಾಯಾಗ್ರಾಹಕನನ್ನು ಕರೆತರಲು ಮರೆತಿದ್ದರಿಂದ ವಧುವು ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.
ಭಾನುವಾರ ಇಲ್ಲಿನ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ವರದಿಯಾಗಿದೆ. ದೇಹತ್‌ನ ಮಂಗಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುವ ರೈತನ ಮಗಳ ಮದುವೆಯನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಶ್ಚಯಿಸಲಾಗಿತ್ತು.
‘ಜೈ ಮಾಲಾ’ ಸಮಾರಂಭಕ್ಕೆ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ವಧುವಿನ ಕುಟುಂಬದಿಂದ ‘ಬಾರಾತ್’ (ಮದುವೆ ಮೆರವಣಿಗೆ) ಅನ್ನು ಸ್ವಾಗತಿಸಲಾಗಿತ್ತು ಮತ್ತು ವಧು ಮತ್ತು ವರರು ಸಮಾರಂಭಕ್ಕಾಗಿ ಮದುವೆ ಮಂಟಪವನ್ನೂ ತಲುಪಿದ್ದರು.
ಆದಾಗ್ಯೂ, ಮದುವೆಯ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ವ್ಯವಸ್ಥೆ ಮಾಡಿರಲಿಲ್ಲ. ಇದು ಗೊತ್ತಾಗದ ನಂತರ ಕೋಪಗುಂಡ ವಧು ಮದುವೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದಳು…! ಹಾಗೂ ಮಂಟಪದಿಂದ ಹೊರಬಂದು ಅಕ್ಕಪಕ್ಕದವರ ಮನೆಗೆ ತೆರಳಿದಳು..!

ಓದಿರಿ :-   ಈ ಆಹಾರವನ್ನು ಪ್ರಾಣಿಗಳೂ ತಿನ್ನುವುದಿಲ್ಲ; ಪೊಲೀಸ್ ಮೆಸ್‌ನ​ ಕಳಪೆ ಊಟ ಹಿಡಿದು ರಸ್ತೆಯಲ್ಲಿ ನಿಂತು ಅಳುತ್ತ ಜನರ ಗಮನ ಸೆಳೆದ ಕಾನ್​ಸ್ಟೆಬಲ್ | ವೀಕ್ಷಿಸಿ

ಎಲ್ಲರೂ ಮದುವೆ ಹುಡುಗಿಯ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಅವಳು “ಇಂದು ನಮ್ಮ ಮದುವೆಯ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯಕ್ತಿ, ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂದು ಪ್ರಶ್ನಿಸಿದಳು. ಕುಟುಂಬದ ಹಿರಿಯರೂ ಆಕೆ ಮನವೊಲಿಸಲು ಪ್ರಯತ್ನಿಸಿದರೂ ಅದು ವ್ಯರ್ಥವಾಯಿತು.
ವಿಷಯ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತು. ನಂತರ ಹೆಣ್ಣು ಹಾಗೂ ಗಂಡಿನ ಕುಟುಂಬದವರ ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಒಪ್ಪಿಕೊಂಡರು. ಈ ವಿಷಯವನ್ನು ಪರಸ್ಪರ ಬಗೆಹರಿಸಿಕೊಳ್ಳಲಾಗಿದೆ ಎಂದು ಮಂಗಲ್‌ಪುರ ಸಬ್ ಇನ್ಸ್‌ಪೆಕ್ಟರ್ ಡೋರಿ ಲಾಲ್ ತಿಳಿಸಿದ್ದಾರೆ. “ವರನ ಕಡೆಯಿಂದ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ವ್ಯವಸ್ಥೆ ಮಾಡದ ಬಗ್ಗೆ ವಿವಾದವಿತ್ತು. ಅವರಿಲ್ಲ ಎಂದು ಕೋಪಗೊಂಡ ಹುಡುಗಿ ಮದುವೆಯಾಗಲು ನಿರಾಕರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement