ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ: ಉತ್ತರ ಪ್ರದೇಶದ ಶ್ರುತಿ ಶರ್ಮಾ ಟಾಪರ್, ಕರ್ನಾಟಕದ 27 ಅಭ್ಯರ್ಥಿಗಳು ಆಯ್ಕೆ

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ(UPSC) ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶದ ಶ್ರುತಿ ಶರ್ಮಾ ಅವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಈ ವರ್ಷ ಮೊದಲ ನಾಲ್ಕು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿರುವುದು ವಿಶೇಷ. ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಿ ಶರ್ಮಾ ಮೊದಲ ರ‍್ಯಾಂಕ್‌ ಪಡೆದರೆ ಕ್ರಮವಾಗಿ ಎರಡನೇ ಹಾಗೂ ಮೂರನೇ ರ‍್ಯಾಂಕ್‌ನ್ನು ಅಂಕಿತಾ ಅಗರ್ವಾಲ್ ಎರಡನೇ ಸ್ಥಾನ ಹಾಗೂ ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

advertisement

ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪ್​ 10 ರ್ಯಾಂಕ್‌ ಬಂದವರ ಪಟ್ಟಿ

1. ಶ್ರುತಿ ಶರ್ಮಾ
2. ಅಂಕಿತಾ ಅಗರ್ವಾಲ್
3. ಗಾಮಿನಿ ಸಿಂಘಾಲ್
4. ಐಶ್ವರ್ಯ ವರ್ಮಾ
5. ಉತ್ಕರ್ಷ ದ್ವಿವೇದಿ
6. ಯಕ್ಷ್ ಚೌಧರಿ
7. ಸಮ್ಯಕ್ ಜೈನ್
8. ಇಶಿತಾ ರಾಠಿ
9. ಪ್ರೀತಮ್ ಕುಮಾರ್
10. ಹರ್ಕೀರತ್ ಸಿಂಗ್ ರಾಂಧವಾ

ಕರ್ನಾಟಕದಿಂದ 25 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಅವಿನಾಶ್ ಬಿ. 31ನೇ ರ‍್ಯಾಂಕ್‌ ಪಡೆದಿದ್ದಾರೆ.

ಓದಿರಿ :-   ನ್ಯೂಯಾರ್ಕ್ ನಗರದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ: ಎರಡು ವಾರಗಳಲ್ಲಿ ಇದು ಎರಡನೇ ದಾಳಿ

ಕರ್ನಾಟಕದಿಂದ ಆಯ್ಕೆಯಾದವರು ಹಾಗೂ ಅವರ ರ್ಯಾಂಕ್‌
ಅವಿನಾಶ vi. -31ನೇ ಸ್ಥಾನ
ಬೆನಕ ಪ್ರಸಾದ ಎನ್‌.ಜೆ.- 92
ಮೆಲ್ವಿನ್‌ ವರ್ಗೀಸ್‌-118
ನಿಖಿಲ ಬಸವರಾಜ ಪಾಟೀಲ-139
ವಿನಯಕುಮಾರ ಗಡ್ಗೆ-151
ಚಿತ್ತರಂಜನ ಎಸ್‌-155
ಅಪೂರ್ವ ಬಾಸೂರ-191
ಮನೋಜ ಆರ್‌.ಹೆಗಡೆ-213
ಮಂಜುನಾಥ ಆರ್‌-219
ರಾಜೇಶ ಪೊನ್ನಪ್ಪ ಎಂ.ಪಿ-222
ಕಲ್ಪಶ್ರೀ ಕೆ.ಆರ್‌.-291
ಅರುಣಾ ಎಂ-308

ದೀಪಕ ರಾಮಚಂದ್ರ ಶೇಟ್‌-311
ಹರ್ಷವರ್ಧನ ಬಿ.ಜೆ-318
ಹಜಾನನ ಬಾಳೆ-319
ವಿನಯಕುಮಾರ ಡಿ.ಎಚ್‌-352
ಮಹಮ್ಮದ್ ಖಮರುದ್ದೀನ್‌ ಖಾನ್‌-414
ಮೇಘನಾ ಕೆ.ಟಿ.-425
ರವೀಂದ್ರನ್‌ ಬಿ.ಎಂ.-455
ಸವಿತಾ ಗೊತ್ಯಾಲ್‌-479

ತಹಸೀನ್‌ ಬಾನು ದಾವಡಿ-482
ಮಹಮ್ಮದ್‌ ಸಿದ್ದಿಕ್‌ ಶರೀಫ್‌-516
ಚೇತನ ಕೆ.-532
ನಾಗರ್ಗೋಜೆ ಶುಭಂ ಭಾವುಸಾಹೇಬ್‌-568
ಪ್ರಶಾಂತಕುಮಾರ ಬಿ.ಒ-641
ರಾಘವೇಂದ್ರ ಎನ್‌-649
ಸಚಿನ್‌ ಕೆ.ವಿ.-682
ಯುಪಿಎಸ್‍ಸಿ ಸಿಎಸ್‍ಇ ಪೂರ್ವಭಾವಿ ಪರೀಕ್ಷೆಯು 2021ರ ಅಕ್ಟೋಬರ್ 10 ರಂದು ನಡೆದಿತ್ತು. ಇದರ ಫಲಿತಾಂಶ ಅಕ್ಟೋಬರ್ 29ರಂದು ಪ್ರಕಟಗೊಂಡಿತ್ತು. ಮುಖ್ಯ ಪರೀಕ್ಷೆಯನ್ನು ಜನವರಿ 2 ರಿಂದ 16 ನಡೆಸಲಾಗಿತ್ತು. ಇದರ ಫಲಿತಾಂಶವನ್ನು ಮಾರ್ಚ್ 17 ಪ್ರಕಟಿಸಲಾಗಿತ್ತು. ಸಂದರ್ಶನವು ಕೊನೆಯ ಸುತ್ತಿನ ಪರೀಕ್ಷೆಯಾಗಿದ್ದು, ಏಪ್ರಿಲ್ 5ರಂದು ಪ್ರಾರಂಭವಾಗಿ ಮೇ 26 ರಂದು ಮುಕ್ತಾಯಗೊಂಡಿತ್ತು

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ತರಗತಿಯಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಕುಳಿತು ಓದುವುದು ಅಪಾಯಕಾರಿ: ಕೇರಳ ಮುಸ್ಲಿಂ ಸಂಘಟನೆ ನಾಯಕನ ವಿವಾದಾತ್ಮಕ ಹೇಳಿಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement