ತನ್ನ ಶ್ರಾದ್ಧದ ದಿನವೇ ಪ್ರತ್ಯಕ್ಷನಾದ ಸತ್ತು ಹೋಗಿದ್ದ ಮಗ…!

ಅಗರ್ತಲಾ (ತ್ರಿಪುರ): ಸತ್ತು ಹೋಗಿದ್ದ ಮಗ, ತನ್ನ ತಿಥಿ ದಿನವೇ ಮನೆಗೆ ಬಂದ ವಿಲಕ್ಷಣ ಘಟನೆಯೊಂದು ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ.
ಮೋಹನಪುರ್‌ ಕಾಳಿಬಜಾರ್‌ನ ನಿವಾಸಿ ಆಗಿದ್ದ 22 ವರ್ಷದ ಆಕಾಶ ಸರ್ಕಾರ್‌ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೂ ದೂರು ನೀಡಿದ್ದರು. ಜೂನ್ 3ರಂದು ಅಗರ್ತಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೇಲರ್ಮತ್‌ ಬಳಿಯ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ, ಅದು ಕಾಣೆಯಾದ ಆಕಾಶ್‌ ಸರ್ಕಾರ್‌ ಶವ ಎಂದು ಎಂಬ ನಿರ್ಣಯಕ್ಕೆ ಬಂದ ಪೊಲೀಸರು ಕುಟುಂಬದವರಿಗೆ ಮಾಹಿತಿ ತಿಳಿಸಿದರು ಹಾಗೂ ಮೃತ ದೇಹ ಗುರುತು ಪತ್ತೆಗೆ ಆಸ್ಪತ್ರೆಗೆ ಕರೆಸಲಾಗಿತ್ತು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಆದರೆ, ಮಗನ ಶವ ಗುರುತು ಪತ್ತೆ ವೇಳೆ ತಂದೆ ಪ್ರಣಬ್‌, ಇದು ಮಗನ ಶವ ಅಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ಮಗನ ದೇಹಕ್ಕೂ, ಶವಕ್ಕೂ ಸಾಮ್ಯತೆ ಇಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ಪೊಲೀಸರು, ಶವ ನೀರಿನಲ್ಲಿ ಕೆಲ ದಿನಗಳ ಕಾಲ ಇದ್ದಿದ್ದರಿಂದ ಉಬ್ಬಿಕೊಂಡಿದೆ ಉತ್ತರಿಸಿದ್ದರು. ನಂತರ ಕುಟುಂಬದವರು ಪೊಲೀಸರ ಒತ್ತಾಯಕ್ಕೆ ಮಣಿದು ಶವ ಸಂಸ್ಕಾರ ಮಾಡಿದ್ದರು. ಈಗ ತಿಥಿ ಕಾರ್ಯ ಮಾಡುವಾಗ ಸತ್ತ ಮಗ ಮತ್ತೆ ಮರಳಿ ಬಂದಿದ್ದಾನೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಉದಯಪುರ ಹತ್ಯೆ: ಹಿಂದೂ ವ್ಯಕ್ತಿಯ ಶಿರಚ್ಛೇದ ಮಾಡಿದ ಆರೋಪಿಗಳಿಗೆ ಪಾಕ್ ಉಗ್ರ ಸಂಘಟನೆ ನಂಟು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ