ಅಗ್ನಿಪಥ ಯೋಜನೆ ಸರಿಯಾದ ದಿಕ್ಕಿನ ಸುಧಾರಣೆ ಕ್ರಮ, ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಾಗಬಾರದು: ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ನವದೆಹಲಿ: ನೂತನ ಅಗ್ನಿಪಥ ಯೋಜನೆಯು ಸರಿಯಾದ ದಿಕ್ಕಿನಲ್ಲಿ ಹೆಚ್ಚು ಅಗತ್ಯವಿರುವ ಸುಧಾರಣೆಯಾಗಿದೆ. ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಾಗಬಾರದು ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ಮನೀಶ್ ತಿವಾರಿ ಗುರುವಾರ ಹೇಳಿದ್ದಾರೆ. ದಶಕಗಳಷ್ಟು ಹಳೆಯದಾದ ಆಯ್ಕೆ ಪ್ರಕ್ರಿಯೆಯ ಪ್ರಮುಖ ಬದಲಾವಣೆಯಾಗಿ, ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರ … Continued

ಈಗ ಜೂನ್ 20 ರಂದು ಇಡಿ ಮುಂದೆ ಮತ್ತೆ ವಿಚಾರಣೆಗೆ ಹಾಜರಾಗಲಿರುವ ರಾಹುಲ್ ಗಾಂಧಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಬೇಕಿದ್ದ ರಾಹುಲ್ ಗಾಂಧಿ ಈಗ ಸೋಮವಾರ (ಜೂನ್‌ ೨೦) ಏಜೆನ್ಸಿಯ ಮುಂದೆ ಹಾಜರಾಗಲಿದ್ದಾರೆ. ರಾಹುಲ್ ಶುಕ್ರವಾರ ಹಾಜರಾಗುವುದರಿಂದ ವಿನಾಯಿತಿ ಕೋರಿದರು ಹಾಗೂ ಅದನ್ನು ಇಡಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರದಿಂದ ಸತತ ಮೂರು ದಿನಗಳ ಕಾಲ ಇಡಿ ರಾಹುಲ್ … Continued

ಪ್ರವಾದಿ ಹೇಳಿಕೆಗಳ ವಿವಾದ: ನೂಪುರ್ ಶರ್ಮಾಗೆ ಸಮನ್ಸ್ ನೀಡಲು ದೆಹಲಿಗೆ ತಲುಪಿದ ಮುಂಬೈ ಪೊಲೀಸರು

ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ಕುರಿತ ವಿವಾದಾತ್ಮಕ ಹೇಳಿಕೆಗಳ ಮೇಲೆ ದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸಮನ್ಸ್‌ ನೀಡಲು ಮುಂಬೈನ ಪೈಡೋನಿ ಪೊಲೀಸರು ಗುರುವಾರ ದೆಹಲಿ ತಲುಪಿದ್ದಾರೆ. ನೂಪುರ್ ಶರ್ಮಾ ಅವರ ಹೇಳಿಕೆಯನ್ನು ದಾಖಲಿಸಲು ಜೂನ್ 25 ರಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಪೈದೋನಿ ಪೊಲೀಸ್ ಠಾಣೆಗೆ … Continued

ಅಗ್ನಿಪಥ ಯೋಜನೆ ಬಗೆಗಿನ ಮಿಥ್ಯೆಗಳಿಗೆ ಸ್ಪಷ್ಟನೆ ನೀಡಿದ ಕೇಂದ್ರ : ಅಗ್ನಿವೀರರ ಭವಿಷ್ಯವು ಸ್ಥಿರ ಎಂದ ಸರ್ಕಾರ | ಮುಖ್ಯಾಂಶಗಳು

ನವದೆಹಲಿ: ಕೇಂದ್ರದ ಅಗ್ನಿಪಥ ಸೇನೆ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಹಲವಾರು ಆಕಾಂಕ್ಷಿಗಳು ಈ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಅಗ್ನಿವೀರರ ಭವಿಷ್ಯವು ಸ್ಥಿರವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರತಿಭಟನೆಗೆ ಕಾರಣವಾಗಿರುವ ಸಮಸ್ಯೆಯ ಸುತ್ತಲಿನ ಕೆಲವು ಕಳವಳಗಳಿಗೆ ಸರ್ಕಾರ ಈಗ ಸ್ಪಷ್ಟನೆ ನೀಡಿದೆ. … Continued

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಹೆಚ್ಚಳ: 833 ಮಂದಿಗೆ ಹೊಸದಾಗಿ ಕೊರೊನಾ ಸೋಂಕು

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಂದು, ಗುರುವಾರ ಇನ್ನಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 833 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು 458 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗೂ ಪಾಸಿಟಿವಿಟಿ ರೇಟ್ ಶೇ. 3.47ಕ್ಕೆ ಏರಿಕೆಯಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 4,371ಕ್ಕೆ … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡು ಪತ್ತೆ: ಅಮೆರಿಕಾ ಪ್ರಜೆ ಬಂಧನ

posted in: ರಾಜ್ಯ | 0

ಬೆಂಗಳೂರು: ಬ್ಯಾಗ್‌ನಲ್ಲಿ ಸಜೀವ ಗುಂಡನ್ನು ಇಟ್ಟುಕೊಂಡು ಬಂದಿದ್ದ ಅಮೆರಿಕಾ ಮೂಲದ ಪ್ರಜೆಯನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ಸಜೀವ ಗುಂಡು ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಅಮೆರಿಕದ ಟೆಕ್ಸಾಸ್ ಮೂಲದ ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬುವವರು ಕೌಬಾಯ್ ಅಸಾಲ್ಟ್ ರೈಫಲ್‌ ನ ಗುಂಡನ್ನು ತಮ್ಮ ಬ್ಯಾಗ್‌ನಲ್ಲಿಟ್ಟು … Continued

ಕಾಶ್ಮೀರಿ ಪಂಡಿತರು, ಗೋ ರಕ್ಷಣೆ ಕುರಿತು ನಟಿ ಸಾಯಿ ಪಲ್ಲವಿ ಹೇಳಿಕೆ ವಿರುದ್ಧ ದೂರು ದಾಖಲು

ಹೈದರಾಬಾದ್‌: ಕಾಶ್ಮೀರಿ ಪಂಡಿತರ ಗುಳೆ ಮತ್ತು ಗೋವಿನ ರಕ್ಷಣೆ ಬಗ್ಗೆ ಪ್ರತಿಕ್ರಿಯಿಸಿದ ನಟಿ ಸಾಯಿ ಪಲ್ಲವಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಜರಂಗದಳದ ಮುಖಂಡರು ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟಿ ಸಾಯಿಪಲ್ಲವಿ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಗೋವು ರಕ್ಷಕರ ಬಗ್ಗೆ … Continued

ತಾಯಿ ಸೋನಿಯಾ ಆಸ್ಪತ್ರೆಯಲ್ಲಿರುವುದರಿಂದ ವಿಚಾರಣೆ ಮುಂದೂಡುವಂತೆ ಇಡಿಗೆ ಪತ್ರ ಬರೆದ ರಾಹುಲ್‌ ಗಾಂಧಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಬೇಕು ಎಂದು ರಾಹುಲ್ ಗಾಂಧಿ ಅವರು ಇಂದು, ಗುರುವಾರ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ಮೂರು ದಿನಗಳಿಂದ 30 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿರುವ ಕಾಂಗ್ರೆಸ್ ಸಂಸದರನ್ನು ನಾಳೆ ಕರೆಸಲಾಗಿದೆ. ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿರುವ ಅವರ ತಾಯಿ … Continued

ಕಟ್ಟಡ ನೆಲಸಮ ಕಾರ್ಯಾಚರಣೆ ತಡೆಯಲು ಸಾಧ್ಯವಿಲ್ಲ, ಆದರೆ ಅದು ಕಾನೂನಿನ ಪ್ರಕಾರವೇ ನಡೆಯಬೇಕು: ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಕ್ರಮದ ಬಗ್ಗೆ ಸುಪ್ರೀಂಕೋರ್ಟ್‌

ನವದೆಹಲಿ: ಪ್ರವಾದಿ ಮುಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಕಟ್ಟಡಗಳನ್ನು ಅಕ್ರಮ ತೆರವು ಕಾರ್ಯಾಚರಣೆಯಡಿ ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಜಮೀಯತ್‌ ಉಲಮಾ-ಎ-ಹಿಂದ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ. ಯಾವುದೇ ಮಧ್ಯಂತರ ಆದೇಶ ನೀಡದ ನ್ಯಾಯಮೂರ್ತಿಗಳಾದ ಎ … Continued

ಎಟಿಎಂನಲ್ಲಿ ಬಂತು 5 ಪಟ್ಟು ಹೆಚ್ಚು ಹಣ…! ಸುದ್ದಿ ತಿಳಿದು ಜನ ಮುಗಿಬಿದ್ರು

ಮುಂಬೈ: ವ್ಯಕ್ತಿಯೊಬ್ಬ ಎಟಿಎಂನಿಂದ 500 ರೂ. ಹಣ ಡ್ರಾ ಮಾಡಲು ಹೋದಾಗ 5 ಪಟ್ಟು ಹೆಚ್ಚಿನ ಹಣ ಬಂದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ನಾಗ್ಪುರದ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಹಣ ಬಂದಿದ್ದು ನೋಡಿ ಕಂಗಾಲಾಗಿದ್ದಾನೆ. 500 ರೂ. ಡ್ರಾ ಮಾಡಿದರೆ 2,500 … Continued