ಬಡ್ಡೀಸ್ ಸಿನೆಮಾ ಪ್ರಚಾರ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು ಜಖಂ: ಅದೃಷ್ಟವಶಾತ್‌ ಕನ್ನಡತಿ ನಟ ಕಿರಣ್ ರಾಜ್-ತಂಡ ಪಾರು

posted in: ರಾಜ್ಯ | 0

ಕನ್ನಡ ಸಿನೆಮಾ ಬಡ್ಡೀಸ್’ ಪ್ರಚಾರದ ವೇಳೆ ಸಿನಿಮಾ ಪ್ರಚಾರದ ವಾಹನ ಜಖಂ ಆಗಿದೆ. ಅದೃಷ್ಟವಶಾತ್‌ ನಟ ಕಿರಣರಾಜ್ ಮತ್ತು ತಂಡದವರು ಪಾರಾಗಿದ್ದಾರೆ.
ಕಿರುತೆರೆಯ `ಕನ್ನಡತಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟ ಕಿರಣ ರಾಜ್ ಅವರು ಜೂನ್‌ 24ರಂದು ಬಿಡುಗಡೆ ಆಗಲಿರುವ ‘ಬಡ್ಡೀಸ್’ ಸಿನಿಮಾ ಪ್ರಚಾರಾರ್ಥ ಬೆಳಗಾವಿಯ ಕಾಲೇಜ್‌ ಒಂದಕ್ಕೆ ಹೋಗುವ ವೇಳೆ ಪ್ರಚಾರಕ್ಕಾಗಿ ಸಿದ್ಧಪಡಿಸಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು, ವಾಹನ ಜಖಂ ಆಗಿದೆ. ಸಿನಿಮಾ ಪ್ರಚಾರಕ್ಕೆ ಹೋಗುವಾಗ ವಿದ್ಯುತ್‌ ಕಂಬ ಸಿನಿಮಾದ ಪ್ರಚಾರ ವಾಹನದ ಮೇಲೆ ಬಿದ್ದಿದೆ. ವಾಹನ ನುಜ್ಜುಗುಜ್ಜಾಗಿದ್ದು, ಸಿನಿಮಾ ತಂಡದ ಯಾರಿಗೂ ಏನೂ ಆಗಿಲ್ಲ ಎಂದು ಕಿರಣ್ ರಾಜ್ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಕಿರಣ್ ರಾಜ್ ಅವರು ಪ್ರಚಾರಕ್ಕೆಂದೇ ಸಿದ್ಧಗೊಳಿಸಿರುವ ವಾಹನದಲ್ಲಿ ಕೆಲಕಾಲ ಟ್ರಾವೆಲ್ ಮಾಡಿದ್ದರು. ಬೆಳಗಾವಿಯಲ್ಲಿ ಒಂದು ಕಾಲೇಜ್‌ಗೆ ಭೇಟಿ ನೀಡಿದ ನಂತರ ಇನ್ನೊಂದು ಕಾಲೇಜಿಗೆ ಭೇಟಿ ಕೊಡುವಾಗ ಅವರು ಕಿರಣ ರಾಜ್ ಅವರು ಪ್ರಚಾರದ ವಾಹನದಿಂದ ಇಳಿದು, ಕಾರ್‌ ಹತ್ತಿದ್ದರು.
ಬಳಿಕ ಪ್ರಚಾರದ ವಾಹನದವರು ಟೀ ಕುಡಿಯುವ ಸಲುವಾಗಿ ವಾಹನವನ್ನು ನಿಲ್ಲಿಸಿ ಅದರಿಂದ ಇಳಿದಿದ್ದಾರೆ. ಆ ವೇಳೆ ಆ ವಾಹನದ ಮೇಲೆ ಕಂಬ ಬಿದ್ದಿದೆ. ಹೀಗಾಗಿ ಯಾವ ಅಪಾಯವೂ ಆಗಿಲ್ಲ. ಆ ವಾಹನಕ್ಕೆ ಅಪಾಯ ಆಗುವ ಅರ್ಧ ಗಂಟೆ ಮುಂಚೆ ನಾನು ಅದರಿಂದ ಇಳಿದಿದ್ದೆ. ಯಾರಿಗೂ ಯಾವ ಹಾನಿಯೂ ಆಗಿಲ್ಲ ಎಂದು ನಟ ಕಿರಣ ರಾಜ್ ತಿಳಿಸಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   13 ವರ್ಷದ ಮಂಗಳೂರಿನ ಬಾಲಕನ ‘ಕೋಮು ದಾಳಿ’ ಎಂಬ ಕಟ್ಟು ಕಥೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ