ಕಾರಿನ ಬಾನೆಟ್‌ನಲ್ಲಿ ಸಿಲುಕಿಕೊಂಡ ಚಿರತೆ: ಒದ್ದಾಡುತ್ತಲೇ ಕಷ್ಟಪಟ್ಟು ತಪ್ಪಿಸಿಕೊಂಡು ಓಡಿಹೋದ ಚಿರತೆ… ದೃಶ್ಯ ಸೆರೆ

ಕಾಡು ಮೃಗಕ್ಕೆ ಸಂಬಂಧಿಸಿದಂತೆ ಮನ ಕರಗಿಸುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ಬಾನೆಟ್‌ನಲ್ಲಿ ಚಿರತೆಯೊಂದು ಸಿಲುಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಾನೆಟ್‌ನಲ್ಲಿ ಸಿಲುಕಿಕೊಂಡಿರುವ ಚಿರತೆ ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ದೃಶ್ಯದ ಮೂಲಕ 7 ಸೆಕೆಂಡುಗಳ ಈ ಕ್ಲಿಪ್ ಶುರುವಾಗುತ್ತದೆ. ಇದಾದ ಬಳಿಕಬ ಚಿರತೆ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತದೆ.

ಈ ದೃಶ್ಯವನ್ನು ಇದೇ ದಾರಿಯಲ್ಲಿದ್ದ ವಾಹನ ಸವಾರರು ಸೆರೆ ಹಿಡಿದಿದ್ದಾರೆ. `ಚಿರತೆಗೆ ಏನಾಯಿತು ಎಂದು ತಿಳಿಯಲು ಹಲವರು ಬಯಸಿದ್ದರು. ವಾಹನಕ್ಕೆ ಡಿಕ್ಕಿ ಹೊಡೆದ ಚಿರತೆ ಗಾಯಗೊಂಡಿತ್ತು, ಆದರೆ, ಸಾವಿನಿಂದ ಸದ್ಯಕ್ಕೆ ಪಾರಾಗುವಲ್ಲಿ ಯಶಸ್ವಿಯಾಗಿದೆ. ಗಾಯಗೊಂಡ ಚಿರತೆಯನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆಯುತ್ತಿವೆ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಪುಣೆ ನಾಸಿಕ್ ಹೈವೇಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಚಿರತೆಯನ್ನು ಉಳಿಸುವ ಸಲುವಾಗಿ ಕಾರು ಚಾಲಕ ತಮ್ಮ ವಾಹನವನ್ನು ನಿಧಾನಕ್ಕೆ ರಿವರ್ಸ್‌ ತೆಗೆಯುವುದನ್ನೂ ನೋಡಬಹುದು. ಇದಾದ ಬಳಿಕ ಚಿರತೆ ಪ್ರಯತ್ನ ಪಟ್ಟು ಬಾನೆಟ್‌ನಿಂದ ಹೊರಬಂದು ಹೇಗೋ ಕಾಡು ಸೇರಿದೆ. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. ಆದರೆ ಗಾಯವಾದ ಚಿರತೆಗೆ ಚಿಕಿತ್ಸೆ ಹೇಗೆ ಎಂಬ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement