ಭಾರತದ ದೊಡ್ಡ ಬ್ಯಾಂಕಿಂಗ್‌ ವಂಚನೆ ಪ್ರಕರಣ: ಡಿಎಚ್‌ಎಫ್‌ಎಲ್‌ನ ಕಪಿಲ್, ಧೀರಜ್ ವಾಧವನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

ನವದೆಹಲಿ: 34,614 ಕೋಟಿ ರೂ. ಗಳ ಭಾರತದ ಬೃಹತ್ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಚ್‌ಎಫ್‌ಎಲ್‌, ಅದರ ಪ್ರವರ್ತಕರಾದ ಕಪಿಲ್‌ ವಾಧವನ್, ಧೀರಜ್ ವಾಧವನ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತು ಇತರರಿಗೆ ಸಂಬಂಧಪಟ್ಟ ಮಹಾರಾಷ್ಟ್ರದ 12 ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ಶೋಧ ಆರಂಭಿಸಿದೆ. ನೀರವ್‌ ಮೋದಿ ಪ್ರಕರಣದ ಮೂರು ಪಟ್ಟು ಹೆಚ್ಚು ಬ್ಯಾಂಕಿಂಗ್‌ ವಂಚನೆ ಇದಾಗಿದ್ದು, ದೇಶ ಕಂಡ ಬೃಹತ್‌ ಬ್ಯಾಂಕಿಂಗ್‌ ವಂಚನೆ ಎಂದು ಹೇಳಲಾಗಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್‌ (ಡಿಎಚ್‌ಎಫ್‌ಎಲ್​)ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕಪಿಲ್ ವಾಧವನ್, ನಿರ್ದೇಶಕರಾಗಿದ್ದ ಧೀರಜ್ ವಾಧವನ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತು ಇತರ ಆರೋಪಿಗಳು ಯೂನಿಯನ್ ಬ್ಯಾಂಕ್ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಲು ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ಎಫ್‌ಐಆರ್‍‌ ದಾಖಲಿಸಲಾಗಿದೆ.

ಆರೋಪಿ ಕಪಿಲ್ ವಾಧವನ್ ಮತ್ತು ಇತತರು 42,871 ಕೋಟಿ ರೂ.ಗಳ ಬೃಹತ್‌ ಸಾಲವನ್ನು ಮಂಜೂರು ಮಾಡಿಕೊಳ್ಳಲು ಒಕ್ಕೂಟದ ಬ್ಯಾಂಕ್‌ಗಳನ್ನು ಪ್ರೇರೇಪಿಸಿದ್ದರು. ಡಿಎಚ್‌ಎಫ್‌ಎಲ್‌ ನಕಲು ದಾಖಲೆಗಳ ನೆರವಿನಿಂದ ಈ ಮೊತ್ತದ ದೊಡ್ಡ ಭಾಗವನ್ನು ಪಡೆದುಕೊಂಡರು. ಬಳಿಕ ಈ ಬ್ಯಾಂಕ್‌ಗಳಿಗೆ ಈ ಮೊತ್ತವನ್ನು ಮರುಪಾವತಿ ಮಾಡದೆ ವಂಚಿಸಿದರು. ಇದರಿಂದ ಈ ಬ್ಯಾಂಕ್‌ಗಳಿಗೆ 34,615 ಕೋಟಿ ರೂ.ನಷ್ಟು ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಸಿಬಿಐ ಎಫ್‌ಐಆರ್‍ನಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

ಡಿಎಚ್‌ಎಫ್‌ಎಲ್‌, ಕಪಿಲ್ ವಾಧವನ್, ಧೀರಜ್ ವಾಧವನ್, ಸ್ಕೈಲಾಕ್‌ ಬಿಲ್ಡ್‌ಕಾನ್‌ ಪ್ರೈ.ಲಿ., ದರ್ಶನ್ ಡೆವಲಪರ್ಸ್ ಪ್ರೈವೇಟ್‌ ಲಿಮಿಟೆಡ್‌, ಸಿಗಿಟಿಯಾ ಕನ್‌ಸ್ಟ್ರಕ್ಷನ್ ಬಿಲ್ಟರ್‍ಸ್‌ ಪ್ರೈ. ಲಿ., ಟೌನ್‌ಷಿಪ್‌ ಡೆವಲಪರ್‍ಸ್‌ ಪ್ರೈ. ಲಿ., ಶಿಶಿರ್ ರಿಯಾಲ್ಟಿ ಪ್ರೈ. ಲಿ., ಸನ್‌ಬ್ಲಿಕ್ ರಿಯಲ್ ಎಸ್ಟೇಟ್‌ ಪ್ರೈ. ಲಿ., ಸುಧಾಕರ್ ಶೆಟ್ಟಿ ಮತ್ತು ಇತರರನ್ನು ಪ್ರಕರಣದಲ್ಲಿ ಸಿಬಿಐಯು ಆರೋಪಿಗಳೆಂದು ಹೇಳಿದೆ.
ಈ ವಾಧವನ್‌ ಸಹೋದರರ ಮೇಲಿನ ಬ್ಯಾಂಕಿಂಗ್‌ ವಂಚನೆ ಆರೋಪ ಇದೇ ಮೊದಲಲ್ಲ. ಯೆಸ್‌ ಬ್ಯಾಂಕ್‌ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿಯೂ ಇವರಿಬ್ಬರ ಮೇಲೆ ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದೆ.
ಇದಕ್ಕೂ ಮೊದಲು ಎಬಿಜಿ ಶಿಪ್‌ಯಾರ್ಡ್‌ ಕಂಪನಿಯು 28 ಬ್ಯಾಂಕ್‌ಗಳಿಗೆ 23 ಸಾವಿರ ಕೋಟಿ ರೂ. ವಂಚಿಸಿರುವ ಕುರಿತು ಸಿ‌ಬಿಐ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರಾದ ರಿಷಿ ಅಗರ್‌ವಾಲ್‌, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್‌ ಸೇರಿದಂತೆ ಇತರರು ಭಾಗಿಯಾಗಿದ್ದಾರೆ ಎಂದು ಸಿಬಿಐ ಹೇಳಿತ್ತು.
2005ರಿಂದ 2012ರವರೆಗೆ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಸೇರಿದಂತೆ 28 ಬ್ಯಾಂಕ್‌ಗಳಿಂದ ಇವರು ಕೋಟ್ಯಂತರ ಸಾಲವಾಗಿ ಪಡೆದಿದ್ದರು. ಎಬಿಜಿ ಶಿಪ್‌ಯಾರ್ಡ್‌ ಕಂಪನಿಯ ಅಧಿಕಾರಿಗಳು ಅನ್ಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಇವರು ಬ್ಯಾಂಕ್‌ಗಳಿಗೆ 22,842 ಕೋಟಿ ರೂ. ವಂಚನೆ ಎಸಗಿದ್ದಾರೆ ಎಂದು ಸಿಬಿಐ ತಿಳಿಸಿತ್ತು.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement