ರಾಷ್ಟ್ರೀಯ ಹೆದ್ದಾರಿ ಇದು…!: ಕಣ್ಣು ಹಾಯಿಸಿದಷ್ಟು ದೂರವೂ ಕೆರೆಯ ಗಾತ್ರದ ಹೊಂಡಗಳೇ ಕಾಣುತ್ತವೆ | ವೀಕ್ಷಿಸಿ

ಪಾಟ್ನಾ: ಭಾರತವು ಡಾಂಬರ್‌ಗಿಂತಲೂ ಹೆಚ್ಚು ಗುಂಡಿಗಳಿರುವ ರಸ್ತೆಗಳನ್ನು ನೋಡಿದೆ, ಆದರೆ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ದೈತ್ಯ ಹೊಂಡಗಳನ್ನೇ ಕಾಣವ ಚಿತ್ರಗಳು ಇನ್ನೂ ಅಪರೂಪದ ವಿದ್ಯಮಾನವಾಗಿದೆ.
ದೈನಿಕ್ ಭಾಸ್ಕರ್ ಪತ್ರಿಕೆಯ ಪ್ರವೀಣ್ ಠಾಕೂರ್ ರಸ್ತೆ ಮೂಲಕ ಚಿತ್ರೀಕರಿಸಿದ ವೈಮಾನಿಕ ವೀಡಿಯೊದಲ್ಲಿ ಬಿಹಾರದ ಮಧುಬನಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 227ರ ಆತಂಕಕಾರಿ ಸ್ಥಿತಿಯನ್ನು ಇದು ಬಯಲು ಮಾಡಲಾಗಿದೆ.ಇದು 90ರ ದಶಕದ ಜಂಗಲ್ ರಾಜ್‌ನಲ್ಲಿ ಬಿಹಾರದ ರಸ್ತೆಗಳ ಸ್ಥಿತಿಯನ್ನು ನೆನಪಿಸುತ್ತದೆ,

ಇದು ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227 (ಎಲ್) ಆಗಿದೆ. ಬಿಹಾರವನ್ನು 15 ವರ್ಷಗಳ ಕಾಲ ಆಳಿದ ಲಾಲು ಪ್ರಸಾದ್‌ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ಕುರಿತಾಗಿದೆ. ಅರಾಜಕತೆ ಮತ್ತು ಕೆಟ್ಟ ರಸ್ತೆಗಳ ಬಗ್ಗೆ ಆರ್‌ಜೆಡಿ ತೀವ್ರ ಟೀಕೆಗೆ ಒಳಗಾಗಿತ್ತು. 2005ರಲ್ಲಿ ಆರ್‌ಜೆಡಿಯನ್ನು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸೋಲಿಸಿ ಅಧಿಕಾರಕ್ಕೆ ಬಂತು.ಇತ್ತೀಚೆಗೆ, ನಿತೀಶ್ ಕುಮಾರ್ ಅವರು ರಸ್ತೆ ನಿರ್ಮಾಣ ವಿಭಾಗದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬಿಹಾರದ ರಸ್ತೆಗಳ ಉತ್ತಮ ಸ್ಥಿತಿಯ ಬಗ್ಗೆ ಅವರು ಎಲ್ಲರಿಗೂ ತಿಳಿಸಬೇಕು ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ದೈನಿಕ್ ಭಾಸ್ಕರ್ ವರದಿ ಪ್ರಕಾರ 2015ರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ದುರಸ್ತಿಗೆ ಇದುವರೆಗೆ ಮೂರು ಬಾರಿ ಟೆಂಡರ್‌ ಕರೆದರೂ ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದರಿಂದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗಳು ಸಣ್ಣ ಕೆರೆಗಳಂತೆಯೇ ಕಾಣುತ್ತವೆ. ಕಣ್ಣು ಹಾಯಿಸಿದಷ್ಟು ದೂರವೂ ಇವು ಕಾಣುತ್ತಲೇ ಹೋಗುತ್ತವೆ. ಬಿಹಾರದ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್, ಹೊಂಡಗಳಿಂದ ತುಂಬಿದ ಹೆದ್ದಾರಿಯ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಹಾರದ ರಸ್ತೆ ಮೂಲಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಅಮೆರಿಕಕ್ಕೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಬಿಹಾರದ ರಸ್ತೆ ಜಾಲವು ಮಹತ್ತರವಾದ ಸುಧಾರಣೆಯನ್ನು ಕಂಡಿದೆ ಎಂದು ಹಾಜಿಪುರದಲ್ಲಿ ಗಂಗಾ ನದಿಯ ಮೇಲೆ ಪುನರ್ನಿರ್ಮಿಸಿದ ಮಹಾತ್ಮ ಗಾಂಧಿ ಸೇತುವಿನ ಪೂರ್ವ ಪಾರ್ಶ್ವವನ್ನು ಉದ್ಘಾಟಿಸಿದಾಗ ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement