ಉಪರಾಷ್ಟ್ರಪತಿ ಚುನಾವಣೆ ಆಗಸ್ಟ್ 6 ರಂದು: ಚುನಾವಣಾ ಆಯೋಗ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯನ್ನು ಆಗಸ್ಟ್ 6 ರಂದು ನಿಗದಿಪಡಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವು ಜೂನ್ 29 ರಂದು ಬುಧವಾರ ಪ್ರಕಟಿಸಿದೆ. ಅಗತ್ಯ ಬಿದ್ದರೆ ಆಗಸ್ಟ್ 6ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ ಎಂದು ಅದು ಹೇಳಿದೆ. ಚುನಾವಣಾ ಆಯೋಗವು ಜುಲೈ 5 ರಂದು … Continued

ಉದಯಪುರ ಟೈಲರ್ ಹಂತಕರಿಗೆ ಪಾಕ್ ಸಂಪರ್ಕವಿದೆ ಎಂದ ಪೊಲೀಸರು, ಪ್ರಕರಣದಲ್ಲಿ ಐದಕ್ಕೂ ಹೆಚ್ಚು ಜನರ ಬಂಧನ

ಉದಯಪುರ: ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಹಂತಕರಲ್ಲಿ ಒಬ್ಬ ಪಾಕ್ ಮೂಲದ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದು, ಆತನ ಫೋನ್‌ನಲ್ಲಿ 10 ಪಾಕ್ ಸಂಖ್ಯೆಗಳನ್ನು ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ನಿರ್ವಹಿಸುತ್ತಿರುವ ಪ್ರಕರಣದಲ್ಲಿ ಇನ್ನೂ ಐವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಸ್ ಅನ್ಸಾರಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ … Continued

ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಸಿಹಿಸುದ್ದಿ : ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ

ಬೆಂಗಳೂರು: ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಕಾಲೇಜು ಸೇರುವ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡುತ್ತಿದೆ. ಬಾಲಕಿಯರು ಇನ್ನು ಮುಂದೆ ಒಂದೇ ಒಂದು ರೂಪಾಯಿ ಶುಲ್ಕ ಭರಿಸಬೇಕಿಲ್ಲ, ವಿದ್ಯಾರ್ಥಿನಿಯರ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಬೇಕಿದೆ. ಈವರೆಗೆ ಕಾಲೇಜಿಗೆ ದಾಖಲಾಗುವ ವೇಳೆ ವಿದ್ಯಾರ್ಥಿನಿಯರು ಶುಲ್ಕವೆಂದು 456 ರೂ. … Continued

ಹೈದರಾಬಾದ್‌ ಸಂಯೋಜಿತ ಅವಳಿ ಸಹೋದರಿಯರು ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಹೈದರಾಬಾದ್: ಎಲ್ಲ ಅಡೆತಡೆಗಳನ್ನು ಮೀರಿ ಯೂಸುಫ್‌ಗುಡದ ವಾಣಿ ಮತ್ತು ವೀಣಾ ಎಂಬ ಸಂಯೋಜಿತ ಅವಳಿ ಮಕ್ಕಳು ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅರ್ಥಶಾಸ್ತ್ರ, ವಾಣಿಜ್ಯ ಮತ್ತು ರಾಜ್ಯಶಾಸ್ತ್ರವನ್ನು ಮುಖ್ಯ ವಿಷಯಗಳನ್ನಾಗಿ ತೆಗೆದುಕೊಂಡು ಪ್ರತ್ಯೇಕವಾಗಿ ಪರೀಕ್ಷೆ ಬರೆದಿದ್ದ ಸಂಯೋಜಿತ ಅವಳಿ ಸಹೋದರಿಯರಿಬ್ಬರೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿ 712 ಅಂಕ ಪಡೆದರೆ, ವೀಣಾ 707 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಇಬ್ಬರೂ … Continued

ಜಗಳ ಬಗೆಹರಿಸಲು ಬಂದ ಪತ್ನಿ ಸಂಬಂಧಿಕರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ ಪತಿ: ಒಬ್ಬರು ಸಾವು, ಮೂವರಿಗೆ ಗಾಯ

ಯಾದಗಿರಿ : ದಂಪತಿ ಜಗಳ ಸರಿಮಾಡಲು ಹೋಗಿದ್ದ ಪತ್ನಿಯ ಸಂಬಂಧಿಕರನ್ನೇ ಮನೆಯಲ್ಲಿ ಕೂಡಿಹಾಕಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿ, ಇತರ ಮೂವರು ಗಾಯಗೊಂಡ ಘಟನೆ ನಾರಾಯಣಪುರದ ಛಾಯಾ ಕಾಲೊನಿಯಲ್ಲಿ ಬುಧವಾರ ನಡೆದಿದೆ‌. ಆರೋಪಿ ಶರಣಪ್ಪ  ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ … Continued

ಅಗ್ನಿಪಥ ಯೋಜನೆಯಡಿ ಅಗ್ನಿವೀರರಾಗಲು 6 ದಿನಗಳಲ್ಲಿ ವಾಯುಸೇನೆಗೆ 1.83 ಲಕ್ಷಕ್ಕೂ ಹೆಚ್ಚು ಅರ್ಜಿ….!

ನವದೆಹಲಿ: ಭಾರತೀಯ ವಾಯುಪಡೆಯು (IAF) ಅಗ್ನಿಪಥ ನೇಮಕಾತಿ ಯೋಜನೆಯಡಿ ನೋಂದಣಿ ಪ್ರಕ್ರಿಯೆಯ ಆರು ದಿನಗಳಲ್ಲಿ 1.83 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಜೂನ್ 24 ರಂದು ಆರಂಭವಾದ ನೋಂದಣಿ ಪ್ರಕ್ರಿಯೆಯಲ್ಲಿ ಸೋಮವಾರದ ವೇಳೆಗೆ 94,281 ಅರ್ಜಿಗಳು ಮತ್ತು ಭಾನುವಾರದ ವರೆಗೆ 56,960 ಅರ್ಜಿಗಳು ಸಲ್ಲಿಕೆಯಾಗಿತ್ತು. ಜೂನ್ 14ರಂದು ಯೋಜನೆಯನ್ನು ಅನಾವರಣಗೊಳಿಸಿದ … Continued

ಉದಯಪುರದಲ್ಲಿ ಟೈಲರ್‌ ಶಿರಚ್ಛೇದ ಪ್ರಕರಣ: ಹಂತಕರನ್ನು ಪೊಲೀಸರು ಹಿಡಿದ ವೀಡಿಯೊ ವೈರಲ್ | ನೋಡಿ

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ದರ್ಜಿಯನ್ನು ಬರ್ಬರವಾಗಿ ಶಿರಚ್ಛೇದ ಮಾಡಿದ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬೀಳುವ ಮೊದಲು ಬೈಕ್‌ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ ಕಾರಣಕ್ಕೆ ಉದಯಪುರದಲ್ಲಿ ದರ್ಜಿ ಕನ್ನಯ್ಯ ಲಾಲ್ ಎಂಬವರನ್ನು ಬರ್ಬರವಾಗಿ ಹತ್ಯೆಗೈದು ಪೈಶಾಚಿಕ ಕೃತ್ಯವನ್ನು ವಿಡಿಯೋ … Continued

ಬಹುಮತ ಸಾಬೀತು ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಉದ್ಧವ್ ಠಾಕ್ರೆ, ಸಂಜೆ 5 ಗಂಟೆಗೆ ವಿಚಾರಣೆ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲಭಗತ್ ಸಿಂಗ್ ಕೋಶಿಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ಆದೇಶವನ್ನು ಪ್ರಶ್ನಿಸಿ ಮಹಾ ವಿಕಾಸ್‌ ಅಘಾಡಿ (ಎಂವಿಎ)ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಸಂಜೆ 5 ಗಂಟೆಗೆ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಆಡಳಿತಾರೂಢ ಮೈತ್ರಿಯ ಶಿವಸೇನಾ ಮುಖ್ಯ ವಿಪ್‌ … Continued

ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತ್ತರ ಕನ್ನಡ ಯುವಕರ ಉತ್ತಮ ಸಾಧನೆ: ದೇಶಕ್ಕೆ 2ನೇ ರ‍್ಯಾಂಕ್ ಪಡೆದ ವರದರಾಜ ಗಾಂವಕರ, ನವೀನಕುಮಾರ ಹೆಗಡೆಗೆ 62ನೇ ರ‍್ಯಾಂಕ್

ಅಂಕೋಲಾ: ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ)ದಿಂದ ನಡೆಸಲಾಗಿದ್ದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಮುಖ್ಯ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತೊರ್ಕೆಯ ವರದರಾಜ ಗಾಂವಕರ ರಾಷ್ಟ್ರಕ್ಕೆ ಎರಡನೇ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಸಾಧನೆ ಮಾಡಿದ್ದಾರೆ. ಇದೇ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ  ಅಚವೆಯ ಎಸ್. … Continued