ಮಾಜಿ ಪ್ರಧಾನಿ ಶಿಂಜೋ ಅಬೆ ಬಗ್ಗೆ ಅತೃಪ್ತನಾಗಿದ್ದೆ, ಕೊಲ್ಲುವ ಉದ್ದೇಶದಿಂದಲೇ ಬಂದಿದ್ದೆ ಎಂದ ಶೂಟರ್‌: ವರದಿ

ಟೋಕಿಯೊ: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಇಂದು, ಶುಕ್ರವಾರ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಗುಂಡು ಹಾರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಿದೆ ಎಂದು ಜಪಾನ್‌ ಪ್ರಧಾನಿ ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಶಂಕಿತ ಶೂಟರನನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಗುಂಡು ಹಾರಿಸಿದವನನ್ನು ಸ್ಥಳೀಯ ವ್ಯಕ್ತಿ ತಿತ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ. 41ರ ಹರೆಯದ ತಿತ್ಸುಯಾ ಯಮಗಾಮಿ ಜಪಾನಿನ ಕಡಲ ಸ್ವರಕ್ಷಣಾ ಪಡೆಯ ಮಾಜಿ ಸದಸ್ಯ ಎಂದು ನಂಬಲಾಗಿದೆ. ಆತ ಶಿಬೆ ಅವರ ಮೇಲೆ ಗುಂಡು ಹಾರಿಸಿದಾಗ 10 ಅಡಿ ದೂರದಲ್ಲಿರುವ ಶಿಂಜೋ ಅಬೆಯ ಹಿಂದೆ ನಿಂತಿದ್ದ ಎಂದು ನಂಬಲಾಗಿದೆ. ಗುಂಡೇಟು ಬಿದ್ದ ನಂತರ ಶಿಂಜೋ ಅಬೆ ಭಾಷಣದ ಮಧ್ಯೆಯೇ ವೇದಿಕೆಯ ಮೇಲೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಭದ್ರತಾ ಅಧಿಕಾರಿಗಳು ತಕ್ಷಣವೇ ಯಮಗಾಮಿಯನ್ನು ನೆಲಕ್ಕೆ ಕೆಡವಿ ಬಂಧಿಸಿದರು.

ಜಪಾನ್‌ನ ಸಾರ್ವಜನಿಕ ಪ್ರಸಾರಕ NHK ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಓಡಿಹೋಗಲು ಪ್ರಯತ್ನಿಸಲಿಲ್ಲ. ಸದ್ಯ ಆತನನ್ನು ನರ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಆತ ಅಬೆಯ ಅವರಿಗೆ ಎರಡು ಗುಂಡುಗಳನ್ನು ಹೊಡೆದಿದ್ದಾನೆ – ಒಂದು ಅವರ ಎಡ ಎದೆಗೆ ಹೊಕ್ಕಿದರೆ ಮತ್ತು ಇನ್ನೊಂದು ಅವರ ಕುತ್ತಿಗೆಗೆ ಹೊಕ್ಕಿದೆ.ಆ ವ್ಯಕ್ತಿ ತಾನು ಅಬೆಯನ್ನು ಕೊಲ್ಲುವ ಉದ್ದೇಶದಿಂದ ಬಂದಿದ್ದೆ ಎಂದು ಅವರು ಪೊಲೀಸರಿಗೆ ತಿಳಿಸಿರುವುದಾಗಿ ಎಂದು ವರದಿಗಳು ಹೇಳುತ್ತವೆ.
ತನಗೆ ಶಿಂಜೊ ಅಬೆ ಅವರ ಬಗ್ಗೆ “ಅಸಮಾಧಾನವಿತ್ತು” ಎಂದು ಹೇಳಿದ್ದಾನೆ ಎಂದು ವರದಿಗಳು ತಿಳಿಸಿವೆ. ಆತನ ಮೇಲೆ ಕೊಲೆ ಯತ್ನ ಆರೋಪ ಹೊರಿಸಲಾಗಿದೆ. ಅಬೆ ಮೇಲೆ ದಾಳಿ ಮಾಡಲು ಶೂಟರ್ ಕೈಯಿಂದ ತಯಾರಿಸಿದ ಗನ್ ಬಳಸಿದ್ದಾನೆ. ಹಾಗೂ ಶೂಟರ್ ಸ್ವತಃ ಬಂದೂಕನ್ನು ತಯಾರಿಸಿದ್ದಾನೆ ಎಂದು ನಂಬಲಾಗಿದೆ. ಆತ 2005 ರಲ್ಲಿ ಸ್ವಯಂ ರಕ್ಷಣಾ ಪಡೆಯಿಂದ ಹೊರಬಂದಿದ್ದಾನೆ.

ಪ್ರಮುಖ ಸುದ್ದಿ :-   ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರ್‌ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್‌ನ ಅಪ್ರತಿಮ ಬ್ಯಾಟರ್‌ ಕೇನ್ ವಿಲಿಯಮ್ಸನ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement