ಕೋತಿಗಳು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು. ಅವು ಕೆಲವೊಮ್ಮೆ ಮನುಷ್ಯರಂತೆ ವರ್ತಿಸುತ್ತವೆ.
ಇದಕ್ಕೆ ನಿದರ್ಶನವೆಂಬಂತೆ ಹಸಿದ ಚಿಂಪಾಂಜಿಯು ಜನರಂತೆ ವರ್ತಿಸುವುದನ್ನು ತೋರಿಸುವ ಒಂದು ಉಲ್ಲಾಸದ ವೀಡಿಯೊ ವೈರಲ್ ಆಗುತ್ತಿದೆ. ಚಿಂಪಾಂಜಿಯು ಕಾಡಿನಲ್ಲಿ ಬಹಳಷ್ಟು ಕಿತ್ತಳೆ ಹಣ್ಣುಗಳನ್ನು ಹೊತ್ತೊಯ್ಯುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ.
ಚಿಂಪಾಂಜಿ ಕೈಗಳು ಹಣ್ಣುಗಳಿಂದ ತುಂಬಿವೆ, ಅದು ಕಿತ್ತಳೆಗಳನ್ನು ಕೇಔಲ ಕೈಗಳಷ್ಟೇ ಅಲ್ಲದೆ, ಪ್ರತಿಯೊಂದು ಪಾದಗಳಲ್ಲಿ ಎರಡು ಮತ್ತು ಬಾಯಿಯಲ್ಲಿ ಒಂದನ್ನು ಒಯ್ಯುತ್ತದೆ. ನಡೆಯಲು ತೊಂದರೆಯಿದ್ದರೂ ಕಾಲುಗಳಲ್ಲಿಯೂ ಕಿತ್ತೆಳೆ ಹಣ್ಣುಗಳನ್ನು ಹಿಡಿದು ಒಯ್ಯುವುದು ತಮಾಷೆಯಾಗಿದೆ. ಮಂಗವು ತಾನೇ ಎಲ್ಲಾ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತದೆ.
ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ‘Buitengebieden’ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದು 60 ಲಕ್ಷ ವೀಕ್ಷಣೆಗಳು ಮತ್ತು 118k ಲೈಕ್‌ಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು ವೀಡಿಯೊವನ್ನು ವೀಕ್ಷಿಸಲು ಸಂತೋಷಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ