ಬ್ರಿಟನ್‌ ಪ್ರಧಾನಿ ಆಯ್ಕೆಯ ರೇಸ್‌ನ 2ನೇ ಸುತ್ತಿನಲ್ಲೂ ಅತಿ ಹೆಚ್ಚು ಮತಗಳನ್ನು ಪಡೆದು ಗೆದ್ದ ಭಾರತೀಯ ಮೂಲಕದ ರಿಷಿ ಸುನಕ್

ಲಂಡನ್‌: ಜುಲೈ 14 ರಂದು ಗುರುವಾರ ಬ್ರಿಟಿಷ್ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಬ್ರಿಡನ್ನಿನ ಕನ್ಸರ್ವೇಟಿವ್ ನಾಯಕತ್ವದ ರೇಸ್‌ನಲ್ಲಿ 101 ಮತಗಳೊಂದಿಗೆ ಎರಡನೇ ಮತದಾನವನ್ನು ಗೆದಿದ್ದಾರೆ.
ಕಿರಿಯ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಪಡೆದರೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದರು. ಗುರುವಾರ 49 ಮತಗಳನ್ನು ಪಡೆದ ಕಿಮ್ ಬಡೆನೋಚ್ ನಾಲ್ಕನೇ ಸ್ಥಾನದಲ್ಲಿದ್ದರೆ, 32 ಮತಗಳನ್ನು ಗಳಿಸಿದ ಟಾಮ್ ತುಗೆಂಧತ್ ನಂತರದ ಸ್ಥಾನದಲ್ಲಿದ್ದಾರೆ. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಸ್ಪರ್ಧೆಯಿಂದ ಹೊರಬಿದ್ದರು.
ಬುಧವಾರದಂದು ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಅವರ ರಾಜೀನಾಮೆಗೆ ಕಾರಣರಾದ ರಿಷಿ ಸುನಕ್, ಮೊದಲ ಸುತ್ತಿನ ಮತದಾನವನ್ನು ಗೆಲ್ಲುವ ಮೂಲಕ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್‌ನ ಪ್ರಧಾನಿಯಾಗುವ ರೇಸ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದರು.

ಮೊದಲ ಮತದಾನ
ಕನ್ಸರ್ವೇಟಿವ್ ಸಂಸದರ ಮೊದಲ ಮತದಾನದಲ್ಲಿ ಸುನಕ್ 88 ಮತಗಳನ್ನು ಪಡೆದರೆ, ಪೆನ್ನಿ ಮೊರ್ಡಾಂಟ್ 67 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 50 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.
ಇಂದು, ಗುರುವಾರ ಮುಂಜಾನೆ, ಸುನಕ್ ಅವರು ಆರ್ಥಿಕ ಕುಸಿತದ ಸಮಯದಲ್ಲಿ ದೇಶವನ್ನು ನಡೆಸಲು ಅವರು ತುಂಬಾ ಶ್ರೀಮಂತರು ಎಂಬ ಹೇಳಿಕೆಗಳನ್ನು ನಿರಾಕರಿಸಿದರು. ಕಠಿಣ ಸವಾಲುಗಳನ್ನು ಎದುರಿಸುವ ಅನುಭವ ಅವರಿಗಿತ್ತು ಎಂದು ಸಮರ್ಥಿಸಿಕೊಂಡರು.
ಬಿಬಿಸಿ ರೇಡಿಯೊದೊಂದಿಗಿನ ಅವರ ಸಂಭಾಷಣೆಯಲ್ಲಿ ಅವರು, “ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗ, ಅದು ದೇಶದ ಮೇಲೆ ಮತ್ತು ಲಕ್ಷಾಂತರ ಜನರ ಮೇಲೆ ಬೀರಬಹುದಾದ ಪರಿಣಾಮವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement