ಕೈಯಲ್ಲಿ ಒಳಉಡುಪು ತೆಗೆದುಕೊಂಡು ಹೊರಡಿ”: ನೀಟ್‌ ಪರೀಕ್ಷೆಯಲ್ಲಿ ಒಳಉಡುಪು ಬಿಚ್ಚಿಸಿದ ಪ್ರಕರಣದ ಭಯಾನಕತೆ ಬಿಚ್ಚಿಟ್ಟ ಕೇರಳದ ಹುಡುಗಿ

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ಮುನ್ನ ಬಲವಂತವಾಗಿ ಬ್ರಾ ತೆಗೆದವರಲ್ಲಿ ಒಬ್ಬಳಾದ ಹದಿಹರೆಯದ ಯುವತಿಯೊಬ್ಬಳು ನಂತರ ತನ್ನ ತಲೆಗೂದಲನ್ನು ಎದೆಗೆ ಮುಚ್ಚಿಕೊಂಡು ಪರೀಕ್ಷೆ ಬರೆದಿರುವುದಾಗಿ ಹೇಳಿದ್ದಾಳೆ ಹಾಗೂ ತನಗಾದ ಅವಮಾನವನ್ನು ವಿವರಿಸಿದ್ದಾಳೆ.
ನೀಟ್‌ ಪರೀಕ್ಷೆಯಲ್ಲಿ ಒಳಉಡುಪುಗಳನ್ನು ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು “ಅತ್ಯಂತ ಕೆಟ್ಟ ಅನುಭವ” ಎಂದು 17 ವರ್ಷದ ವಿದ್ಯಾರ್ಥಿನಿ ಹೇಳಿದ್ದಾಳೆ. ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರವ್ಯಾಪಿ ಪರೀಕ್ಷೆಯಾದ NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಗಾಗಿ ಕೇಂದ್ರದಲ್ಲಿ ನಡೆದದ್ದನ್ನು ಅವಳು ಬಹಳ ದುಃಖದಿಂದ ಹಂಚಿಕೊಂಡಿದ್ದಾಳೆ.
ಅವರು (ಪರೀಕ್ಷಾ ಕೇಂದ್ರದವರು) ನನ್ನನ್ನು ಕರೆದರು ಮತ್ತು ಸ್ಕ್ಯಾನಿಂಗ್ ಇದೆ ಎಂದು ಹೇಳಿದರು. ಅವರು ಸ್ಕ್ಯಾನ್ ಮಾಡಿದ ನಂತರ ನಮ್ಮನ್ನು ಬಿಡುತ್ತಾರೆ ಎಂದು ನಾವು ಭಾವಿಸಿದೆವು. ಆದರೆ ಅವರು ನಮ್ಮನ್ನು ಎರಡು ಸಾಲಿನಲ್ಲಿ ನಿಲ್ಲುವಂತೆ ಮಾಡಿದರು – ಒಂದು ಲೋಹದ ಕೊಕ್ಕೆಗಳಿಲ್ಲದ ಬ್ರಾಗಳನ್ನು ಧರಿಸಿರುವ ಹುಡುಗಿಯರಿಗೆ, ಮತ್ತು ಇನ್ನೊಂದು ಸಾಲು …,” ಅವಳು ಹೇಳಿದಳು. .
ಅವರು ನನ್ನನ್ನು ಕೇಳಿದರು, ನೀವು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ನಾನು ಹೌದು ಎಂದು ಹೇಳಿದೆ, ಆದ್ದರಿಂದ ಮತ್ತೊಂದು ಸಾಲಿಗೆ ಸೇರಲು ಸೂಚಿಸಲಾಯಿತು. ಏನಾಗುತ್ತಿದೆ ಮತ್ತು ಏಕೆ ಆಗುತ್ತಿದೆ ಎಂದು ತನಗೆ ಅರ್ಥವಾಗಲಿಲ್ಲ ಎಂದು ಹುಡುಗಿ ಹೇಳಿದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಅವರು ಸೂಚಿಸಿದರು. ಎಲ್ಲಾ ಬ್ರಾಗಳು ಒಟ್ಟಿಗೆ ಜೋಡಿಸಲ್ಪಟ್ಟಿದ್ದವು. ನಾವು ಹಿಂತಿರುಗಿದಾಗ ಹಿಂತಿರುಗಿದಾಗ ಅಲ್ಲಿ ಕಿಕ್ಕಿರಿದಿತ್ತು. ಅದು ಹರಸಾಹಸವಾಗಿತ್ತು. ಆದರೆ ನನಗೆ ನನ್ನದು ಸಿಕ್ಕಿತು,” ಎಂದು ಅವಳು ಹೇಳಿದಳು ಹಾಗೂ ಯಾವುದೇ ವೈದ್ಯಕೀಯ ಆಕಾಂಕ್ಷಿಗಳು ತೆಗೆದುಕೊಳ್ಳಬಹುದಾದ ಪ್ರಮುಖ ಪರೀಕ್ಷೆಗಿಂತ ಮೊದಲು ಕೊನೆಯಿಲ್ಲದ ಆತಂಕದ ಕ್ಷಣಗಳನ್ನು ವಿವರಿಸಿದಳು.
ಕೆಲವು ಹುಡುಗಿಯರು ನಾಚಿಕೆಯಿಂದ ಅಳುತ್ತಿದ್ದರು. ಮಹಿಳಾ ಭದ್ರತಾ ಉದ್ಯೋಗಿಯೊಬ್ಬರು, “ನೀವು ಯಾಕೆ ಅಳುತ್ತೀರಿ? ಎಂದು ಕೇಳಿದರು. ಹಾಗೂ ನಿಷ್ಠುರತೆಯಿಂದ, ಭದ್ರತಾ ಸಿಬ್ಬಂದಿ ಹುಡುಗಿಯರಿಗೆ ತಮ್ಮ ಬ್ರಾಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು.
ಅವರು ನಿಮ್ಮ ಬ್ರಾವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಬಿಡಿ, ಅವುಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಅದನ್ನು ಕೇಳಿ ನಮಗೆ ತುಂಬಾ ಮುಜುಗರವಾಯಿತು. ಆದರೆ ಎಲ್ಲರೂ ಬದಲಾಯಿಸಲು ಕಾಯುತ್ತಿದ್ದರು. ಕತ್ತಲೆಯಾಗಿತ್ತು ಮತ್ತು ಬದಲಾಯಿಸಲು ಅಲ್ಲಿ ಸ್ಥಳವಿರಲಿಲ್ಲ … ಇದು ಭಯಾನಕ ಅನುಭವವಾಗಿದೆ. .ನಾವು ಪರೀಕ್ಷೆ ಬರೆಯುವಾಗ ವೇಲ್‌ ಇಲ್ಲದ ಕಾರಣ ತಲೆಗೂದಲನ್ನು ಎದೆಗೆ ಮುಚ್ಚಿಕೊಂಡೆವು.. ಹುಡುಗರು ಮತ್ತು ಹುಡುಗಿಯರಿದ್ದು ನಿಜಕ್ಕೂ ಕಷ್ಟ ಮತ್ತು ಅನಾನುಕೂಲವಾಗಿತ್ತು” ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

17 ವರ್ಷದ ಹುಡುಗಿಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಆಘಾತಕಾರಿ ಘಟನೆ ಹೊರಬಿದ್ದಿದೆ. ಪರೀಕ್ಷೆ ಬರೆಯುವ ಮುನ್ನ ಶೇ.90ರಷ್ಟು ಹೆಣ್ಣುಮಕ್ಕಳು ತಮ್ಮ ಒಳಉಡುಪು ತೆಗೆಯಬೇಕಾಯಿತು ಎಂದು ಹೇಳುತ್ತ ಗದ್ಗದಿತರಾದರು.
ನಿಮ್ಮ ಭವಿಷ್ಯ ಮುಖ್ಯವೋ ಅಥವಾ ಒಳಉಡುಪು ನಿಮಗೆ ದೊಡ್ಡದೋ? ಅದನ್ನು ತೆಗೆದುಹಾಕಿ ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಹೇಳಲಾಯಿತು ಎಂದು ಭದ್ರತಾ ಸಿಬ್ಬಂದಿ ಉಲ್ಲೇಖಿಸಿ ತಂದೆಯ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮತ್ತೆ ಎರಡು ದೂರುಗಳು ದಾಖಲಾಗಿವೆ.
ಘಟನೆಯ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸತ್ಯಶೋಧನಾ ತಂಡಕ್ಕೆ ಆದೇಶಿಸಿದೆ. ಸಂಸ್ಥೆಯು ಈ ಹಿಂದೆ ಆರೋಪಗಳನ್ನು ನಿರಾಕರಿಸಿತ್ತು ಮತ್ತು ದೂರು “ಕಾಲ್ಪನಿಕ” ಎಂದು ಹೇಳಿತ್ತು. ರಾಷ್ಟ್ರೀಯ ಮಹಿಳಾ ಆಯೋಗವು ಈ ಘಟನೆಯನ್ನು “ನಾಚಿಕೆಗೇಡಿತನ ಮತ್ತು ಅತಿರೇಕ ಎಂದು ಕರೆದಿದೆ. ಹಾಗೂ ಕ್ರಮಕ್ಕಾಗಿ ಸೂಚಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement