ಮೈ ಜುಂ ಎನ್ನುವ ಅಪಘಾತದಲ್ಲಿ ಬಸ್‌ ಕೆಳಗೆ ಬಿದ್ದು ಚಕ್ರದಡಿ ತಲೆ ಸಿಲುಕಿದರೂ ಪವಾಡ ಸದೃಶವಾಗಿ ಬದುಕುಳಿದ ವ್ಯಕ್ತಿ…ಕಾರಣ ಹೆಲ್ಮೆಟ್‌ | ವೀಕ್ಷಿಸಿ

ಸುರಕ್ಷತೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಸಂಚಾರ ಅಧಿಕಾರಿಗಳು ಎಚ್ಚರಿಕೆಯ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಈ ಯಾವುದೇ ಸೂಚನೆಗಳನ್ನು ಪಾಲಿಸದ ಜನರಿದ್ದರೂ, ನಿಯಮಗಳು ಮತ್ತು ಸಲಹೆಗಳನ್ನು ಪಾಲಿಸುವವರೂ ಇದ್ದಾರೆ. ನಿಯಮಗಳನ್ನು ಅನುಸರಿಸಿ ಇತ್ತೀಚೆಗೆ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ತನ್ನ ಜೀವ ಉಳಿಸಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.
ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಅವರು ಇತ್ತೀಚೆಗೆ ಮೈ ಜುಂ ಎನ್ನುವ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ಬೈಕ್ ಸವಾರರು “ಉತ್ತಮ ಗುಣಮಟ್ಟದ ISI ಮಾರ್ಕ್ ಹೆಲ್ಮೆಟ್” ಅನ್ನು ಮಾತ್ರ ಬಳಸಬೇಕೆಂದು ಒತ್ತಾಯಿಸಿದ್ದಾರೆ. ಭಯಾನಕ ಕ್ಲಿಪ್‌ನಲ್ಲಿ ಬೈಕ್‌ನಲ್ಲಿದ್ದ ವ್ಯಕ್ತಿಯೊಬ್ಬ ಬಸ್‌ನ ಚಕ್ರದಡಿಗೆ ಬಿದ್ದ ನಂತರವೂ ಹೆಲ್ಮೆಟ್‌ ಧರಿಸಿದ್ದರಿಂದ ಅಪಾಯದಿಂದ ಪಾರಾಗುವುದನ್ನು ತೋರಿಸಿದೆ.

ವಿಡಿಯೋದಲ್ಲಿ ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಬರುತ್ತಿದ್ದ ಬಸ್ಸಿನ ಕೆಳಗೆ ಬಿದ್ದಿದ್ದಾನೆ. ಬಸ್ಸಿನ ಹಿಂಬದಿಯ ಚಕ್ರಗಳ ಕೆಳಗೆ ವ್ಯಕ್ತಿಯ ತಲೆ ಬಿದ್ದಿದೆ. ಬಸ್ ನಿಲ್ಲುವ ಮೊದಲು, ಆ ವ್ಯಕ್ತಿಯ ಹೆಲ್ಮೆಟ್ಟಿನಿಂದ ರಕ್ಷಿತವಾದ ತಲೆ ಚಕ್ರದಡಿ ಸಿಲುಕಿರುವುದನ್ನು ತೋರಿಸುತ್ತದೆ. ಅಪಾಯಕಾರಿ ಅಪಘಾತದಿಂದ ವ್ಯಕ್ತಿ ಹೆಲ್ಮೆಟ್‌ ಕಾಋಣದಿಂದ ಬದುಕುಳಿದಿದ್ದಾನೆ.
19 ವರ್ಷದ ಅಲೆಕ್ಸ್ ಸಿಲ್ವಾ ಪೆರೆಸ್ ಎಂದು ಗುರುತಿಸಲಾದ ವ್ಯಕ್ತಿ, ತಿರುವಿನಲ್ಲಿ ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಿದ್ದು ಮತ್ತು ನಂತರ ವಿರುದ್ಧ ದಿಕ್ಕಿನಿಂದ ಬರುವ ಬಸ್ಸಿನ ಕೆಳಗೆ ಬೀಳುವುದನ್ನು ವೀಡಿಯೊ ತೋರಿಸುತ್ತದೆ. ಚಕ್ರವು ಹೆಲ್ಮೆಟ್‌ ಹಾಕಿದ್ದ ಅಲೆಕ್ಸ್‌ನ ತಲೆಗೆ ಹೊಡೆಯುತ್ತದೆ ಮತ್ತು ಆತ ಕೆಲವು ಅಡಿ ಮುಂದಕ್ಕೆ ಎಸೆಯುವುದು ಕಂಡುಬರುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ವ್ಯಕ್ತಿ ಚಕ್ರಗಳ ಕಳೆಗೆ ಸಿಲುಕಿದ್ದನ್ನು ಕಂಡ ಬಸ್‌ ಚಾಲಕ ಬಸ್ ಅನ್ನು ಹಿಮ್ಮುಖವಾಗಿ ತೆಗೆದುಕೊಂಡಿದ್ದಾನೆ. ನಂತರ ಕಳಗೆ ಬಿದ್ದ ಬೈಕರ್‌ಗೆ ಸಹಾಯ ಮಾಡಲು ಕೆಲವು ಜನರು ಸೇರಿದ್ದಾರೆ.
ಸ್ಥಳೀಯ ಮಾಧ್ಯಮ ಔಟ್ಲೆಟ್ ಇಸ್ಟೋ ಪ್ರಕಾರ, ರಿಯೊ ಡಿ ಜನೈರೊದ ಬೆಲ್ಫೋರ್ಡ್ ರೋಕ್ಸೊದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹೆಲ್ಮೆಟ್‌ ಧರಿಸಿದ್ದ ಅಲೆಕ್ಸ್‌ಗೆ ಅಪಘಾತದಿಂದ ಗಂಭೀರ ಗಾಯವಾಗಲಿಲ್ಲ. ಅವರು ತಮ್ಮ ಕುಟುಂಬಕ್ಕೆ ಬ್ರೆಡ್ ಖರೀದಿಸಲು ಬೇಕರಿಯೊಂದಕ್ಕೆ ಹೋಗುತ್ತಿದ್ದಾಗ ತಿರುವಿನಲ್ಲಿ ಬಸ್ ಬರುವುದನ್ನು ಕಂಡರು. ಗಾಬರಿಗೊಂಡು ಬೈಕ್ ನಿಲ್ಲಿಸಲು ಯತ್ನಿಸಿದ ವೇಳೆ ಬಸ್ ಕೆಳಗೆ ಬಿದ್ದಿದ್ದಾರೆ.

 

 

 

 

.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement